ತಹಶೀಲ್ದಾರ್ ಕಚೇರಿಗೆ ಮುತ್ತಿಗೆ; ಎಚ್ಚರಿಕೆ
ವರ್ಷದಿಂದ ವಾರ್ಡ ಸಭೆ ಕರೆದಿಲ್ಲ. ಈ ಸಭೆಗೂ ಗ್ರಾಮಸ್ಥರನ್ನು ಮುಂಚಿತವಾಗಿ ಆಹ್ವಾನಿಸಿಲ್ಲ. ಕಾಟಾಚಾರಕ್ಕೆ ವಾರ್ಡ್ ಸಭೆ ಕರೆಯಲಾಗಿದೆ. ಯಾವುದೇ ಯೋಜನೆ ಕೈಗೊಳ್ಳುವಾಗ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಗ್ರಾಮದಲ್ಲಿ ಸಮರ್ಪಕವಾಗಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಇದೇ ರೀತಿ ಮುಂದುವರಿದರೆ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಗ್ರಾಮದ ನಿವಾಸಿ ಪ್ರಕಾಶಗೌಡ ಪಾಟೀಲ ಎಚ್ಚರಿಸಿದರು.