ಹುಬ್ಬಳ್ಳಿ: ಅಣ್ಣಿಗೇರಿಯ ಗೋಲ್ಡನ್ ಕರಾಟೆ ಮತ್ತು ಸ್ಕಾಯ್ ಸ್ಪೋರ್ಟ್ಸ್ ಸಂಸ್ಥೆಯ ನಾಲ್ವರು ಸ್ಪರ್ಧಿಗಳು ರಾಜಸ್ಥಾನದ ಜೈಪುರದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಆಹ್ವಾನಿತ ಸ್ಕಾಯ್ ಸ್ಪರ್ಧೆಯಲ್ಲಿ ತಲಾ ಒಂದು ಪದಕಗಳನ್ನು ಜಯಿಸಿದ್ದಾರೆ ಎಂದು ಸಂಸ್ಥೆ ಜಿಲ್ಲಾ ಕಾರ್ಯದರ್ಶಿ ಗಣೇಶ ಜಿ. ಇಳಕಲ್ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘14 ವರ್ಷದ ಒಳಗಿನವರ 29 ಕೆ.ಜಿ. ವಿಭಾಗದಲ್ಲಿ ಈಶ್ವರಿ ಜಿ. ಬಾಕಳೆ ದ್ವಿತೀಯ, ಇದೇ ವಯೋಮಾನದ ಮುಕ್ತ ವಿಭಾಗದಲ್ಲಿ ಅಜಯ ಪಿ. ಹಣಸಿ ದ್ವಿತೀಯ, 18 ವರ್ಷದ ಒಳಗಿನವರ ವಿಭಾಗದ 40 ಕೆ.ಜಿ. ವಿಭಾಗದಲ್ಲಿ ಭರತ ಬಿ. ಹೂಗಾರ ದ್ವಿತೀಯ ಮತ್ತು ಇದೇ ವಯೋಮಾನದ 52 ಕೆ.ಜಿ. ವಿಭಾಗದಲ್ಲಿ ಸುಮತಿ ನಾಗರಾಳ ತೃತೀಯ ಸ್ಥಾನ ಪಡೆದಿದ್ದಾರೆ’ ಎಂದು ಹೇಳಿದರು.

‘ಇದಕ್ಕೂ ಮೊದಲು ಹರಿಹರದಲ್ಲಿ ನಡೆದಿದ್ದ ರಾಜ್ಯಮಟ್ಟದ ಸ್ಕಾಯ್ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಹತ್ತು ಸ್ಪರ್ಧಿಗಳನ್ನು ರಾಷ್ಟ್ರಮಟ್ಟಕ್ಕೆ ಆಯ್ಕೆ ಮಾಡಲಾಗಿತ್ತು. ಹೆಚ್ಚು ಸ್ಪರ್ಧಾತ್ಮಕತೆಯಿಂದ ಕೂಡಿದ್ದ ರಾಷ್ಟ್ರೀಯ ಪೈಪೋಟಿಯಲ್ಲಿ ನಮ್ಮ ಸಂಸ್ಥೆಯ ಮಕ್ಕಳು ಶಕ್ತಿಮೀರಿ ಪ್ರದರ್ಶನ ನೀಡಿದ್ದಾರೆ. ಮುಂದಿನ ಟೂರ್ನಿಗಳಲ್ಲಿ ಚಿನ್ನದ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ’ ಎಂದರು.

18 ವರ್ಷದ ಒಳಗಿನವರ ವಿಭಾಗದಲ್ಲಿ ಭರತ ಹೂಗಾರ ಅಗ್ರ ಹತ್ತರ ಒಳಗೆ ಸ್ಥಾನ ಪಡೆದಿದ್ದಾರೆ. ಮಕ್ಕಳಿಗೆ ಆತ್ಮರಕ್ಷಣೆ, ಸ್ಕಾಯ್ ಮತ್ತು ಕಥಾಸ್ ಸಮರಕಲೆಗಳ ಬಗ್ಗೆ ಹೇಳಿಕೊಡಲಾಗುತ್ತದೆ ಎಂದರು. ಸಂಸ್ಥೆ ಅಧ್ಯಕ್ಷ ಸಿ.ಜಿ. ನಾವಳ್ಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.