ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಕುವಿನಿಂದ ಇರಿತ: ನಾಲ್ವರು ವಶಕ್ಕೆ

Last Updated 22 ಜೂನ್ 2022, 2:33 IST
ಅಕ್ಷರ ಗಾತ್ರ

‌ಹುಬ್ಬಳ್ಳಿ: ಸಿಗರೇಟ್ ವಿಚಾರಕ್ಕೆ ನಡೆದ ಜಗಳದಲ್ಲಿ ಇಬ್ಬರಿಗೆ ಚಾಕುವಿನಿಂದ ಇರಿದ ಆರೋಪಿಗಳಾದ ರಫೀಕ್, ಅಲ್ತಾಫ, ಅಸ್ಲಾಂ ಹಾಗೂ ಮಹಮ್ಮದ ಅಲಿಯನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಮಂಗಳವಾರ ವಶಕ್ಕೆ ಪಡೆದಿದ್ದಾರೆ.

ಆರೋಪಿಗಳು ಜೂನ್ 14ರಂದು ಆನಂದ ನಗರದ ವೆಲ್ಕಮ್ ಹಾಲ್ ಬಳಿ ಸಿಗರೇಟ್ ಸೇದುವ ವಿಚಾರಕ್ಕೆ ಸಂಬಂಧಿಸಿದಂತೆ, ಜಿಲಾನಿ ಶೇಖ್ ಮತ್ತು ಜಾವಿದ್ ಶೇಖ್ ಅವರೊಂದಿಗೆ ಜಗಳವಾಡಿದ್ದರು. ನಂತರ, ಇಬ್ಬರಿಗೂ ಚಾಕುವಿನಿಂದ ಇರಿದು ಪರಾರಿಯಾಗಿದ್ದರು. ಇತ್ತೀಚೆಗೆ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಇದೀಗ, ಮತ್ತೆ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿ ನಾಪತ್ತೆ:

ಶಾಲೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟ್ಟಿದ್ದ 10 ವರ್ಷದ ಬಾಲಕಿ ನಾಪತ್ತೆಯಾಗಿರುವ ಘಟನೆ ನಗರದ ಕೃಷ್ಣಾಪುರ ಓಣಿಯಲ್ಲಿ ಸೋಮವಾರ ನಡೆದಿದೆ. ಹಳೇ ಹುಬ್ಬಳ್ಳಿಯ ಇಂಡಿ ಪಂಪ್ ವೃತ್ತದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ತೇಜಸ್ವಿನಿ ನಾಪತ್ತೆಯಾದ ಬಾಲಕಿ.

ಬಾಲಕಿಯ ತಾಯಿ ಅನಾರೋಗ್ಯದಿಂದಾಗಿ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರೇ ಬಾಲಕಿಯನ್ನು ಕರೆದೊಯ್ದಿರುವ ಅನುಮಾನ ವ್ಯಕ್ತವಾಗಿದೆ. ಘಟನೆ ಕುರಿತು, ಬಾಲಕಿ ಮಾವಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಅಪಹರಣ ಆರೋಪದಡಿ ದೂರು ಕೊಟ್ಟಿದ್ದು, ಪ್ರಕರಣ ದಾಖಲಾಗಿದೆ. ಬಾಲಕಿ ಶಾಲೆಗೆ ಹೋಗುತ್ತಿರುವ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧನ:

ತಾಲ್ಲೂಕಿನ ಅಂಚಟಗೇರಿಯ ಮನೆಯೊಂದರಲ್ಲಿ ಜೂನ್ 18ರಂದು ನಡೆದಿದ್ದ ಕಳ್ಳತನಕ್ಕೆ ಸಂಬಂಧಿಸಿದಂತೆ ಆಸೀಫ್ ಖಾಸೀಂಸಾಬ್ ಎಂಬಾತನನ್ನು ಹುಬ್ಬಳ್ಳಿ ಗ್ರಾಮೀಣ ಠಾಣೆ ಇನ್‌ಸ್ಪೆಕ್ಟರ್‌ ರಮೇಶ ಗೋಕಾಕ ನೇತೃತ್ವದ ತಂಡ ಬಂಧಿಸಿದೆ.ಆರೋಪಿಯಿಂದ 2 ಚಿನ್ನದ ಓಲೆ, ಲಾಕೆಟ್, ಬೆಳ್ಳಿ ಸರ, ₹8 ಸಾವಿರ ನಗದು ಹಾಗೂ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುರಿ ಕಳ್ಳರ ಬಂಧನ:

ಹಳೇ ಹುಬ್ಬಳ್ಳಿಯ ಅಗ್ರಹಾರ ತಿಮ್ಮಸಾಗರ ಗ್ರಾಮದಲ್ಲಿ ಜೂನ್ 5ರಂದು ನಡೆದಿದ್ದ ₹72 ಸಾವಿರ ಮೌಲ್ಯದ 20 ಕುರಿಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಹಳೇ ಹುಬ್ಬಳ್ಳಿ ಠಾಣೆಯಪಿಎಸ್ಐ ಜಿ.ಎನ್. ಕಲ್ಯಾಣಿ ನೇತೃತ್ವದ ತಂಡ ಮಂಗಳವಾರ ತಾರಿಹಾಳ ಸೇತುವೆ ಬಳಿ ಪೊಲೀಸರು ನಾಲ್ವರನ್ನು ಬಂಧಿಸಿದೆ. ಸೆಟ್ಲ್‌ಮೆಂಟ್ ಪ್ರದೇಶದ ದವಲಪ್ಪ ಹಡಗಲಿ ಹಾಗೂ ಆತನ ಸಹಚರರನ್ನು ಬಂಧಿಸಿ, ಕಳವು ಮಾಡಿದ್ದ ಕುರಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT