ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಎ ಬೆಂಬಲಿಸಿ ರ‍್ಯಾಲಿ ನಾಳೆ

Last Updated 11 ಫೆಬ್ರುವರಿ 2020, 13:42 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಫೆ. 13ರಂದು ಪ್ರಗತಿಪರ ದಲಿತ ಒಕ್ಕೂಟಗಳ ಮಹಾಸಭಾ ವತಿಯಿಂದ ಅಭಿನಂದನಾ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಚಾಲಕ ಸಿ.ಎನ್‌.ಚಂದ್ರಶೇಖರ ಗೋಕಾಕ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಕಾಯ್ದೆ ಕುರಿತು ವಿರೋಧ ಪಕ್ಷಗಳು ಹಾಗೂ ಕೆಲ ಸಮುದಾಯಗಳು ಒಂದೂವರೆ ತಿಂಗಳಿಂದ ಅಶಾಂತಿ ನಿರ್ಮಿಸಿ, ವಿಕೃತ ವಾತಾವರಣ ಸೃಷ್ಟಿಸಿವೆ. ಕಾಯ್ದೆಯಿಂದ ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಕಾಯ್ದೆ ಜಾರಿಗೆ ತಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಬಲ ಸೂಚಿಸಲು ಈ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ’ ಎಂದರು.

ಪ್ರೊ. ನಂದನ್‌ ಮಾತನಾಡಿ, ‘ಕಾಯ್ದೆ ಕುರಿತು ತಿಳಿವಳಿಕೆ ಮೂಡಿಸಲು ಅಂದು ಬೆಳಿಗ್ಗೆ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಿಂದ ತಹಶೀಲ್ದಾರ್‌ ಕಚೇರಿ ತನಕ ಮೆರವಣಿಗೆ ನಡೆಸಲಾಗುವುದು’ ಎಂದರು.

ಮಹೇಂದ್ರ ಕೌತಾಳ, ರಂಗನಾಯಕ್‌, ಮಾರುತಿ ಹಾಲಹರವಿ, ಅಣ್ಣಪ್ಪ ಗೋಕಾಕ, ಪರಶುರಾಮ ಪೂಜಾರ, ನಾಗರಾಜ ಟಗರಿಗುಂಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT