ಚಳಿಗಾಲದ ಮಾಂತ್ರಿಕ ಚಹಾ..

ಚಳಿಗಾಲ ಆರಂಭವಾಗಿದೆ. ಮೈ ತುಂಬಾ ಉಣ್ಣೆ ಬಟ್ಟೆ. ಶೂ, ಸಾಕ್ಸ್, ತಲೆಗೊಂದು ಗೂರ್ಖಾ ಟೋಪಿ. ಅಬ್ಬಾ ಏನೋ ಚಳಿ ಎನ್ನುತ್ತಾ ಮೆಲ್ಲಗೆ ಹಾಸಿಗೆಯಿಂದ ಎದ್ದು ಮತ್ತೆ ಸೈಲೆಂಟಾಗಿ ಹಾಸಿಗೆ ಒಳ ಸೇರುವ ನಾವು ಮುಂಜಾನೆಯ ವಾತಾವರಣಕ್ಕೆ ಮೈಯೊಡ್ಡುವುದನ್ನು ಮರೆತುಬಿಟ್ಟಿದ್ದೆವೆ.
ಅಮ್ಮನ ಮಂಗಳಾರತಿ ಇಲ್ಲದೆ ನಮಗೆ ದಿನ ಪ್ರಾರಂಭವಾಗುತ್ತಿದ್ದಿಲ್ಲ. ಅದರಲ್ಲೂ ಚಳಿಗಾಲದಲ್ಲಿ ಕೇಳಬೇಕಾ? ಅಮ್ಮನೆ ಬಂದು ಹೊದ್ದಿಕೊಂಡಿರುವ ಚಾದರ ಎಳೆದು ಬಿಸಾಕಿದಾಗಲೂ ಅಲ್ಲೇ ಮೊಲದಂತೆ ಮತ್ತೆ ಐದು ನಿಮಿಷ ಮಲಗಿ ಆಮೇಲೆ ಏಳುವವರು ನಾವು. ಇವೆಲ್ಲ ಗಮನಿಸಿದಾಗ ಅಮ್ಮನೇ ಗ್ರೇಟ್ ಅನ್ನಿಸದೆ ಇರದು.
ಇನ್ನು ಹಾಗೋಹೀಗೊ ಬಿಸಿ ನೀರು ಸ್ನಾನ ಮಾಡಿ ಬಂದ ನಮಗೆ ಅಮ್ಮ ಟೀ ತಂದು ಕೊಡುವಳು. ಅಬ್ಬಾ ಅದುವೇ ಸ್ವರ್ಗದ ಸುಖ. ಅಮ್ಮನ ಟೀ ಮುಂದೆ ಯಾವ ಚಳಿಯೂ ನಿಲ್ಲದು. ಚಾದರ ಕಿತ್ತೆಸೆದು ನಮ್ಮ ನಿದ್ದೆಗೆ ಕಲ್ಲಾಕಿದ ಅಮ್ಮನ ಮೇಲಿದ್ದ ಸಣ್ಣ ಮುನಿಸು ಅವಳ ಕಾಫಿ ತಂದು ಕೊಟ್ಟಾಗ ಮಾಯವಾಗುತ್ತದೆ.
ಇನ್ನು ಕೆಲವರು ನಡುಗುತ್ತಾ, ಕೈ ಬಿಸಿ ಮಾಡುತ್ತಾ ರಸ್ತೆ ಬದಿಯೊಂದರ ಬಳಿ ನಡೆದು ಹೋಗಿ ಹೋಟೆಲ್ನಲ್ಲಿಗೊ ಅಥವಾ ಟೀ ಪಾಯಿಂಟ್ ಹತ್ತಿರವೋ ಹೋಗಿ, ‘ಅಣ್ಣಾ ಒಂದ್ ಗರಮ್ ಚಾ ಕೊಡು ಪಾ, ಸ್ವಲ್ಪ ಸಕ್ಕರೆ ಜಾಸ್ತಿ ಇರಲಿ’ ಎಂದು ಕೇಳಿದಾಗ ಆತ ಹಾಲು ಕಾಯಿಸಿ, ಮೇಲಿಂದ ಕೇಳಕ್ಕೆ ನಾಲ್ಕಾರು ಬಾರಿ ಟೀ ಮಿಕ್ಸ್ ಮಾಡಿ ಕೊಡುವ.
ಆ ಹೊಗೆಯಾಡುವ ಚಹ ಕಣ್ಮುಂದೆ ಬಂದಾಗ ಏನ್ ಸಂತೋಷ ಅಂತೀರಾ. ಸರ್ರನೆ ಸೌಂಡ್ ಮಾಡುತ್ತ ಕುಡಿಯುವಾಗ ಪ್ರತಿಯೊಂದು ಗುಟಕಿನಲ್ಲಿಯೂ ಸಿಗುವ ಆ ತಾಜಾತನ ವರ್ಣಿಸಲೂ ಅಸಾಧ್ಯ. ಇಗಂತೋ ನಾನಾ ತರಹದ ಚಹಾ
ಇವೆ ಅದು ಗ್ರೀನ್ ಟೀ, ಶುಂಠಿ ಟೀ, ಏಲಕ್ಕಿ ಟೀ ಆಗಿರಬಹುದು. ಇದೀಗ ಎಲ್ಲೆಂದರಲ್ಲಿ ಟೀ ಪಾಯಿಂಟ್ಗಳಾಗಿವೆ. ನೀವು ಒಂದು ಸರತಿ ಮನೆಯಿಂದ ಹೊರಹೋಗಿ ಆ ಟೀ ಪಾಯಿಂಟ್ನಲ್ಲಿ ಟೀ ಕುಡಿದು ನೋಡಿ. ಚಳಿಗಲದ ಅತ್ಯುತ್ತಮ ಸಂಗಾತಿ, ಮಾಂತ್ರಿಕ ಈ ಚಹಾ...
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.