ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ಮಕ್ಕಳಿಗೆ ಥಳಿಸಿದ್ದ ಶಿಕ್ಷಕಿ ಅಮಾನತು

Published 25 ಫೆಬ್ರುವರಿ 2024, 15:44 IST
Last Updated 25 ಫೆಬ್ರುವರಿ 2024, 15:44 IST
ಅಕ್ಷರ ಗಾತ್ರ

ಕಲಘಟಗಿ : ‘ತಾಲ್ಲೂಕಿನ ಜುಂಜನಬೈಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಥಳಿಸಿದ್ದ ಶಿಕ್ಷಕಿ ಸುಜಾತ ಸುಣಗಾರ ಅವರನ್ನು ಫೆ.23 ರಂದು ಶಿಕ್ಷಣ ಇಲಾಖೆ ಅಮಾನತು ಮಾಡಿ ಆದೇಶ ಹೊರಡಿಸಿದೆ’ ಎಂದು ಬಿಇಒ ಉಮಾದೇವಿ ಬಸಾಪುರ ತಿಳಿಸಿದ್ದಾರೆ.

‘ಫೆ.19 ರಂದು ಶಾಲೆ ಮಕ್ಕಳು ಮಧ್ಯಾಹ್ನದ ಬಿಸಿ ಊಟ ತಮಗೆ ತಂದು ಕೊಡದಿದ್ದಕ್ಕೆ ಮಕ್ಕಳಿಗೆ ಮನಸೋ ಇಚ್ಛೆ ಬಾಸುಂಡೆ ಮೂಡುವ ಹಾಗೆ ಥಳಿಸಿದ್ದಾರೆ’ ಎಂದು ಆರೋಪಿಸಿ ವಿದ್ಯಾರ್ಥಿಗಳು ಹಾಗೂ ಪಾಲಕರು ಶಿಕ್ಷಕಿ ವಿರುದ್ಧ ಪ್ರತಿಭಟನೆ ನಡೆಸಿದ್ದರು.

ಈ ಬಗ್ಗೆ ‘ಪ್ರಜಾವಾಣಿ‘ ಯಲ್ಲಿ ಫೆ.20 ರಂದು ‘ಊಟ ತಂದು ಕೊಡದಿದ್ದಕ್ಕೆ ಮಕ್ಕಳಿಗೆ ಥಳಿತ’  ಶೀರ್ಷಿಕೆ ಅಡಿಯಲ್ಲಿ ಸುದ್ದಿ ಪ್ರಕಟವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT