‘ಪುಸ್ತಕ ಬರೆಯುವ ಉತ್ಸಾಹ ಹೆಚ್ಚಲಿ’
‘ಪುಸ್ತಕ ಪ್ರಕಟವಾಗಿದೆ ಎನ್ನುವ ತೃಪ್ತಿಯ ಜತೆಗೆ ಅದಕ್ಕಿಂತಲೂ ಉತ್ತಮ ಕೃತಿ ರಚಿಸುವ ಉತ್ಸಾಹವೂ ಹೆಚ್ಚಬೇಕು’ ಎಂದು ಪುಸ್ತಕ ಬಿಡುಗಡೆ ಮಾಡಿದ ನಾ. ಸೋಮೇಶ್ವರ ಹೇಳಿದರು. ‘ಅನಂತಮೂರ್ತಿ ಅವರ ಪುಣ್ಯತಿಥಿ ಅಂಗವಾಗಿ 13 ಪುಸ್ತಕಗಳು ಬಿಡುಗಡೆಯಾಗಿದ್ದು ಶ್ಲಾಘನೀಯ. ಒಂದೊಂದು ಪುಸ್ತಕವು ಭಿನ್ನವಾಗಿದ್ದು ಅದರದ್ದೇ ಆದ ಓದುಗರನ್ನು ಆಕರ್ಷಿಸುವಲ್ಲಿ ಸಫಲವಾಗಬಲ್ಲದು. 92 ವರ್ಷಗಳಿಂದ ಪುಸ್ತಕ ಪ್ರಕಾಶನ ನಡೆಸಿಕೊಂಡು ಬಂದಿರುವ ಸಾಹಿತ್ಯ ಪ್ರಕಾಶನ ಮುಂದೆಯೂ ಇದೇ ರೀತಿ ಕೆಲಸ ಮಾಡಲಿ’ ಎಂದು ಆಶಿಸಿದರು.