ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ಹುಬ್ಬಳ್ಳಿ ಇಎಸ್‌ಡಿಎಂ ಎಕ್ಸ್‌ಚೇಂಜ್‌ ಉದ್ಘಾಟನೆ

Last Updated 30 ನವೆಂಬರ್ 2020, 17:20 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಎಲೆಕ್ಟ್ರಾನಿಕ್‌ ಸಿಸ್ಟ್‌ಂ ಡಿಸೈನ್‌ ಮ್ಯಾನುಫ್ಯಾಕ್ಷ‌ರಿಂಗ್‌ (ಇಎಸ್‌ಡಿಂ) ಸ್ಟಾರ್ಟ್‌ಅಪ್‌ನ ಹುಬ್ಬಳ್ಳಿ ಇಸ್‌ಡಿಎಂ ಎಕ್ಸ್‌ಚೇಂಜ್‌ (HEX) ಡಿಸೆಂಬರ್ 2 ರಂದು ಮಧ್ಯಾಹ್ನ 2 ಗಂಟೆಗೆ ಆನ್‌ಲೈನ್‌ ಮೂಲಕ ಉದ್ಘಾಟನೆಯಾಗಲಿದೆ.

ಎಲೆಕ್ಟ್ರಾನಿಕ್ಸ್ ಇಲಾಖೆಯ ನಿರ್ದೇಶಕಿ ಮೀನಾ ನಾಗರಾಜ, ಇಂಡಿಯಾ ಎಲೆಕ್ಟ್ರಾನಿಕ್ಸ್ ಆ್ಯಂಡ್‌ ಸೆಮಿಕಂಡಕ್ಟರ್‌ ಅಸೋಸಿಯೇಷನ್‌ ಚೇರಮನ್‌ ಡಾ.ಸತ್ಯಗುಪ್ತಾ, ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.ಅಶೋಕ ಶೆಟ್ಟರ್‌ ಮಾತನಾಡಲಿದ್ದಾರೆ. ನಂತರ ನಡೆಯುವ ಸಂವಾದದಲ್ಲಿ ಡಾ.ನಿತಿನ್‌ ಕುಲಕರ್ಣಿ, ಶ್ರೀಕೃಷ್ಣ ಜೋಶಿ, ಸಿ.ಎಂ. ಪಾಟೀಲ, ರಾಜೀವ್‌ ಹಿರೂರ, ವಿಜಯ ಗುಡಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಕೆಎಲ್‌ಇ ವಿಶ್ವವಿದ್ಯಾಲಯದ ನವೀನ ಉದ್ಯಮ ಮತ್ತು ತಂತ್ರಜ್ಞಾನ ಕೇಂದ್ರ (ಸಿಟಿಐಇ) 80ಕ್ಕೂ ಹೆಚ್ಚು ಸ್ಟಾರ್ಟ್‌ ಅಪ್‌ಗಳ ಆರಂಭಕ್ಕೆ ಸಹಾಯ ಮಾಡಿದೆ. ‘ಸಂಕಲ್ಪ ಸೆಮಿಕಂಡಕ್ಟರ್ಸ್’ ಮತ್ತು ‘ಶಿಲ್ಪಾ ಬಯಲಾಜಿಕಲ್ಸ್’‌ ಸಂಸ್ಥೆಗಳು ಒಂದು ಸಾವಿರ ಜನರಿಗೆ ಉದ್ಯೋಗ ನೀಡಿವೆ.

ರಾಜ್ಯ ಸರ್ಕಾರದ ಕರ್ನಾಟಕ ಇನ್ನೋವೇಷನ್ ಆ್ಯಂಡ್‌ ಟೆಕ್ನಾಲಜಿ ಸರ್ವಿಸಸ್‌ (ಕೆಐಟಿಎಸ್), ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ಇಂಡಿಯಾ ಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಸೆಮಿಕಂಡಕ್ಟರ್ಸ್ (ಐಇಎಸ್‌ಎ) ಜೊತೆಗೂಡಿ ಇಎಸ್‌ಡಿಂ ಕ್ಷೇತ್ರದಲ್ಲಿ ವಿಶಿಷ್ಟವಾದ ಯೂನಿಕ್‌ ಇನ್‌ಕ್ಯೂಬೆಷನ್‌ ಸೆಂಟರ್‌ ಅನ್ನು ಕೆಎಲ್‌ಇ ವಿಶ್ವವಿದ್ಯಾಲಯ ಟೆಕ್‌ ಪಾರ್ಕ್‌ನಲ್ಲಿಆರಂಭಿಸಲಾಗಿದೆ. ಇದಕ್ಕೆ ರಾಜ್ಯ ಸರ್ಕಾರವು ₹3.2 ಕೋಟಿ ಅನುದಾನ ಬಿಡುಗಡೆ ಮಾಡಿದೆ.

‘ಇಂಡಿಯಾ ಎಲೆಕ್ಟ್ರಾನಿಕ್ಸ್ ಆ್ಯಂಡ್‌ ಸೆಮಿಕಂಡಕ್ಟರ್‌ ಅಸೋಸಿಯೇಷನ್‌ ಚೇರಮನ್‌ ಡಾ.ಸತ್ಯಗುಪ್ತಾ ಮಾತನಾಡಿ, ಇಎಸ್‌ಡಿಂ ಕ್ಷೇತ್ರದಲ್ಲಿ ಸ್ಟಾರ್ಟ್‌ ಅಪ್‌ಗಳ ಆರಂಭಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದಿದ್ದಾರೆ.

‘ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ, ಕೆಎಲ್‌ಇ ವಿಶ್ವವಿದ್ಯಾಲಯವು ಪ್ರಾದೇಶಿಕ ಅಭಿವೃದ್ಧಿಗೆ ಬದ್ಧವಾಗಿದೆ. ಎಚ್‌ಇಎಕ್ಸ್ ಇದಕ್ಕೊಂದು ಉದಾಹರಣೆಯಾಗಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT