ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ-ಆಫೀಸ್‌ ಬಳಕೆದಾರರ ಸಂಖ್ಯೆ ಮೂರು ಪಟ್ಟು ಹೆಚ್ಚಳ

Last Updated 13 ಆಗಸ್ಟ್ 2020, 16:19 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೋವಿಡ್ ಹಿನ್ನೆಲೆಯಲ್ಲಿ ವ್ಯಕ್ತಿಗಳ ನಡುವೆ ನೇರ ಸಂಪರ್ಕ ಕಡಿಮೆ ಮಾಡುವ ಉದ್ದೇಶದಿಂದ ನೈರುತ್ಯ ರೈಲ್ವೆ ಏಳು ತಿಂಗಳ ಹಿಂದೆ ಕಡತಗಳ ರವಾನೆಗೆಆರಂಭಿಸಿದ್ದ ಡಿಜಿಟಲ್‌ ಸೌಲಭ್ಯ ಬಳಕೆದಾರರ ಸಂಖ್ಯೆಯಲ್ಲಿ ಮೂರು ಪಟ್ಟು ಹೆಚ್ಚಳವಾಗಿದೆ.

ರೈಲ್ ಟೈಲ್‌ ಸಂಸ್ಥೆ ಡಿಜಿಟಲ್ ವ್ಯವಸ್ಥೆ ಕಲ್ಪಿಸಿದ್ದು, ತಂತ್ರಜ್ಞಾನ ಬಳಸಿ ಕಡತಗಳನ್ನು ಹೇಗೆ ರವಾನಿಸಬೇಕು ಎನ್ನುವುದರ ಬಗ್ಗೆ ರೈಲ್ವೆ ಅಧಿಕಾರಿಗಳಿಗೆ ತರಬೇತಿ ನೀಡಿದೆ. ರೈಲ್ವೆ ವಲಯ ಮುಖ್ಯ ಕಚೇರಿಗಳು, ವಿಭಾಗೀಯ ಕಚೇರಿಗಳಲ್ಲಿ ಇದನ್ನು ಬಳಸಲಾಗುತ್ತಿದೆ. ಇದರಿಂದ ಕಾರ್ಬನ್‌ ಕಾಪಿಗಳನ್ನು ಮತ್ತು ಕಾಗದಗಳನ್ನು ಬಳಸುವ ವೆಚ್ಚ ತಗ್ಗಿಸಲು ಸಾಧ್ಯವಾಗಿದೆ. ಕಾಗದ ರಹಿತ ಕಚೇರಿ ಮಾಡಲು ಡಿಜಿಟಲ್‌ ವ್ಯವಸ್ಥೆ ನೆರವಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.‌

ಏಪ್ರಿಲ್‌ನಿಂದ ಜುಲೈ ತನಕ ನಾಲ್ಕು ತಿಂಗಳ ಅವಧಿಯಲ್ಲಿ ನೈರುತ್ಯ ರೈಲ್ವೆ 3,623 ಇ ಫೈಲ್‌ಗಳನ್ನು ರಚಿಸಿತ್ತು. ಈಗ ಆ ಸಂಖ್ಯೆ 14,069ಕ್ಕೆ ಹೆಚ್ಚಳವಾಗಿದೆ. ಬಳಕೆದಾರರು ರಚಿಸಿದ ಡಿಜಿಟಲ್‌ ರಶೀದಿಗಳ ಸಂಖ್ಯೆಯಲ್ಲಿಯೂ ಎರಿಕೆ ಕಂಡಿದೆ.

ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ ಸಿಂಗ್ ಮಾತನಾಡಿ ’ಕಡತಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಡಿಜಿಟಲ್‌ ವ್ಯವಸ್ಥೆ ಅನುಕೂಲಕಾರಿಯಾಗಿದೆ. ಇ ಆಫೀಸ್‌ ಮೂಲಕ ನೈರುತ್ಯ ರೈಲ್ವೆ ಕೆಲಸದ ಸಂಸ್ಕೃತಿಯ ಹೊಸ ಮಾದರಿ ಪರಿಚಯಿಸಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT