ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಇದೇ 15ರಿಂದ ತುಳಜಾ ಭವಾನಿ ದೇಗುಲದ ವಾರ್ಷಿಕೋತ್ಸವ

Published 11 ಜೂನ್ 2024, 15:32 IST
Last Updated 11 ಜೂನ್ 2024, 15:32 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನವನಗರದ ಗಂಗಾಧರನಗರ ಬಡಾವಣೆಯ ಭಾವಸಾರ ಕ್ಷತ್ರೀಯ ಸಮಾಜದಿಂದ ತುಳಜಾ ಭವಾನಿ ದೇವಸ್ಥಾನದ 6ನೇ ವಾರ್ಷಿಕೋತ್ಸವ ಜೂನ್‌ 15 ಹಾಗೂ 16ರಂದು ನಡೆಯಲಿದೆ.

15ರಂದು ಬೆಳಿಗ್ಗೆ ದೇವಿ ಮೂರ್ತಿಗೆ ಜಲಾಭಿಷೇಕ, ಪಂಚಾಮೃತ ಅಭಿಷೇಕ, ಗಣ ಹೋಮ ಹಾಗೂ ನವಗ್ರಹ ಹೋಮ, ಪೂರ್ಣಾಹುತಿ, ಮಹಾ ಮಂಗಳಾರತಿ, ಉಡಿ ತುಂಬುವ ಕಾರ್ಯಕ್ರಮ ಹಾಗೂ ಪ್ರಸಾದ ವಿತರಣೆ ಜರುಗಲಿದೆ. ಸಂಜೆ 4 ಗಂಟೆಯಿಂದ ಆರಾಧನಾ ಮಹಿಳಾ ವೃಂದದಿಂದ ಭಕ್ತಿಗೀತೆ ಗಾಯನ, ಸಂಜೆ 5ರಿಂದ ಗಣೇಶ ಮತ್ತು ಸಂಗಡಿಗರಿಂದ ಗೊಂಧಳ ಕಾರ್ಯಕ್ರಮ ಆಯೋಜಿಸಲಾಗಿದೆ.

16ರಂದು ಬೆಳಿಗ್ಗೆ ದೇವಸ್ಥಾನದಲ್ಲಿ ದುರ್ಗಾ ಹೋಮ, ದೇವಿಗೆ ಕ್ಷೀರಾಭಿಷೇಕ, ಅಲಂಕಾರ, ಪೂರ್ಣಹುತಿ ನೈವೇದ್ಯ ಇರಲಿದೆ.  ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿ.ಯು.ಸಿಯಲ್ಲಿ ಪಾಸಾದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಮಧ್ಯಾಹ್ನ 12.30ಕ್ಕೆ ಜರುಗಲಿದೆ. ಸಂಜೆ 6 ಗಂಟೆಯಿಂದ ಭಾವಸಾರ ಕ್ಷತ್ರೀಯ ಮಹಿಳಾ ಮಂಡಳದಿಂದ ಭಕ್ತಿ ಗೀತೆ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಶಾಮ್ ಗುಜ್ಜರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT