ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

23 ಬಾರಿ ಹೆಲ್ಮೆಟ್‌ ಇಲ್ಲದೆ ಸವಾರಿ; ₹17,500 ದಂಡ

Last Updated 25 ನವೆಂಬರ್ 2022, 12:01 IST
ಅಕ್ಷರ ಗಾತ್ರ

ಹುಬ್ಬಳ್ಳಿ: 23 ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಬೈಕ್‌ ಸವಾರರೊಬ್ಬರನ್ನು ಉತ್ತರ ಸಂಚಾರ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದು, ಬಾಕಿ ಉಳಿಸಿಕೊಂಡಿರುವ ₹17,500 ಸಾವಿರ ದಂಡ ಪಾವತಿಸುವಂತೆ ಸೂಚಿಸಿದ್ದಾರೆ.

ಸಂಚಾರ ನಿಯಮ ಉಲ್ಲಂಘಿಸಿದ ವ್ಯಕ್ತಿ ನಗರದ ಮಹ್ಮದ್‌ರಫೀಕ್‌ ಗುಡಗೇರಿ ಎಂದು ಗುರುತಿಸಲಾಗಿದೆ. 2017ರಿಂದ ಈವರೆಗೆ ಅವರು ನಗರದ ವಿವಿಧೆಡೆ ಹೆಲ್ಮೆಟ್‌ ಇಲ್ಲದೆ ಬೈಕ್‌ ಓಡಿಸಿದ್ದರು.

ತೋಳನಕೆರೆ ಕಡೆಯಿಂದ ವಿದ್ಯಾನಗರದ ಕಡೆಗೆ ಮಹ್ಮದ್‌ರಫೀಕ್‌ ಹೆಲ್ಮೆಟ್‌ ಧರಿಸಿದೆ ಬೈಕ್‌ನಲ್ಲಿ ಬರುತ್ತಿದ್ದರು. ಶಿರೂರ ಪಾರ್ಕ್‌ನ ಹರ್ಷಾ ಹೋಟೆಲ್‌ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಎಎಸ್‌ಐ ರಮ್‌ಜಾನಬಿ ಅಳಗಡವಾಡಿ ಮತ್ತು ಕಾನ್‌ಸ್ಟೆಬಲ್‌ ಚವ್ಹಾಣ್‌, ಸವಾರರನ್ನು ನಿಲ್ಲಿಸಿ ಬೈಕ್‌ ನಂಬರ್‌ ಅನ್ನು ಬ್ಲ್ಯಾಕ್‌ಬೆರಿ ಯಂತ್ರದಲ್ಲಿ ನಮೂದಿಸಿ ಪರಿಶೀಲಿಸಿದ್ದಾರೆ. ಆಗ ನಗರದ 23 ಕಡೆ ಸಂಚಾರ ನಿಯಮ ಉಲ್ಲಂಘಿಸಿರುವುದು ಕಂಡುಬಂದಿದೆ.

‘2017ರಿಂದಲೇ ಸಂಚಾರ ನಿಯಮ ಉಲ್ಲಂಘಿಸುತ್ತ ಬೈಕ್‌ ಓಡಿಸುತ್ತಿದ್ದರು. ಆಗ ಹೆಲ್ಮೆಟ್‌ ಇಲ್ಲದೆ ಬೈಕ್‌ ಓಡಿಸಿದರೆ ₹100 ದಂಡ ಇತ್ತು. 2019ರಲ್ಲಿ ಅದಕ್ಕೆ ₹500 ದಂಡ ನಿಗದಿ ಪಡಿಸಲಾಗಿದೆ. ನಿಯಮ ಉಲ್ಲಂಘಿಸಿರುವ ಕುರಿತು ಸಿ.ಸಿ.ಟಿ.ವಿ. ಕ್ಯಾಮೆರಾಗಳಲ್ಲಿ ದಾಖಲಾಗಿವೆ. ಅಷ್ಟೊಂದು ಹಣ ಈಗಲೇ ಪಾವತಿಸಲು ಸಾಧ್ಯವಿಲ್ಲ ಎಂದು ಬೈಕ್‌ ಚಾವಿ ನಮಗೆ ನೀಡಿದ್ದು, ಠಾಣೆ ಎದುರು ಅದನ್ನು ಪಾರ್ಕ್‌ ಮಾಡಿದ್ದೇವೆ’ ಎಂದು ಎಎಸ್‌ಐ ರಮ್‌ಜಾನಬಿ ಅಳಗಡವಾಡಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT