ಹುಬ್ಬಳ್ಳಿ: ‘ಮ್ಯಾನ್ಹೋಲ್ನಿಂದ ಗಲೀಜು ಹೊರಗೆ ಹರಿದು ಬರುತ್ತಿದೆ. ರಸ್ತೆ ತುಂಬೆಲ್ಲ ಗಬ್ಬು ಹರಡಿಕೊಂಡು ಒಂದು ವಾರ ಕಳೆದಿದೆ. ದುರಸ್ತಿ ಮಾಡುವಂತೆ ಮಹಾನಗರ ಪಾಲಿಕೆಗೆ ಮನವಿ ಕೊಟ್ಟರೂ ಸ್ಪಂದಿಸುತ್ತಿಲ್ಲ...’

ಹುಬ್ಬಳ್ಳಿಯ ಹೃದಯಭಾಗ ಜೆ.ಸಿ.ನಗರ ಅಜಂತಾ ಹೋಟೆಲ್ ಪಕ್ಕದ ಅಟೊ ನಿಲ್ದಾಣದಲ್ಲಿದ್ದ ಆಟೊ ಚಾಲಕ ಸುಲೇಮಾನ್ ಅವರ ಮಾತಿದು. ಇದು ಕೇವಲ ಅವರೊಬ್ಬರದೇ ಸಮಸ್ಯೆ ಅಲ್ಲ, ಅವಳಿ ನಗರದ ಬಹುತೇಕ ಭಾಗಗಳಲ್ಲಿ ಇಂತಹ ದೂರುಗಳು ಕೇಳಿಬರುತ್ತಿವೆ. ಅವಳಿನಗರದ ಹಲವೆಡೆ ಮ್ಯಾನ್ಹೋಲ್ಗಳು ಭರ್ತಿಯಾಗಿ, ತ್ಯಾಜ್ಯದ ನೀರು ಹೊರಚಿಮ್ಮುವ ಸಮಸ್ಯೆ ಮಳೆಗಾಲದಲ್ಲಿ ಮಾತ್ರವಲ್ಲ, ಬೇಸಿಗೆಯಲ್ಲೂ ಕಾಣಬಹುದಾಗಿದೆ.

ನಗರದಲ್ಲಿ ಪ್ರತಿ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ವಾಸಿಸುವ ಜನಸಂಖ್ಯೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಆದರೆ, ಹಲವು ದಶಕಗಳ ಹಿಂದೆ ಅಳವಡಿಸಿದ ಒಳಚರಂಡಿಯಲ್ಲಿ (ಯುಜಿಡಿ) ಅಳವಡಿಸಿದ ಕೊಳವೆಗಳು ಜನಸಂಖ್ಯೆಗೆ ಅನುಗುಣವಾಗಿ ಸಾಕಾಗುತ್ತಿಲ್ಲ. ಹೀಗಾಗಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಕೆಯುಡಬ್ಲುಎಸ್ಡಿಬಿ) ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಒಳಚರಂಡಿ ವ್ಯವಸ್ಥೆ ದುರಸ್ತಿ ಮತ್ತು ನಿರ್ವಹಣೆ ಮಾಡುವುದು ದಿನಕಳೆದಂತೆ ಸವಾಲಾಗಿ ಪರಿಣಮಿಸಿದೆ.

ಈ ನಿಟ್ಟಿನಲ್ಲಿ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ (ಕೆಯುಐಡಿಎಫ್ಸಿ) ಮೂಲಕ ₹40 ಕೋಟಿ ವೆಚ್ಚದಲ್ಲಿ ವಿವಿಧೆಡೆ ಒಳಚರಂಡಿ ಕೆಲಸ ಆರಂಭಿಸಲಾಗಿದೆ. ಹುಬ್ಬಳ್ಳಿ ನಗರದಲ್ಲಿ ಒಳಚರಂಡಿ ವ್ಯವಸ್ಥೆ ಹದಗೆಟ್ಟಿರುವ ಪ್ರದೇಶಗಳನ್ನು ಗುರುತಿಸಿ, ಕಿರಿದಾದ ಕೊಳವೆಗಳನ್ನು ಬದಲಾಯಿಸುವ ಕಾಮಗಾರಿ ಈಗಾಗಲೇ ಕೈಗೊಳ್ಳಲಾಗಿದೆ. ಹುಬ್ಬಳ್ಳಿ ನಗರದಲ್ಲಿ ಬಹುತೇಕ ಶೇ 99ರಷ್ಟು ಪ್ರದೇಶವು ಒಳಚರಂಡಿ ವ್ಯವಸ್ಥೆಗೆ ಒಳಪಟ್ಟಿದೆ. ಹೊಸದಾಗಿ ತಲೆ ಎತ್ತಿರುವ ಕೆಲವು ಬಡಾವಣೆಗಳಲ್ಲಿ ಮಾತ್ರ ಒಳಚರಂಡಿ ವ್ಯವಸ್ಥೆ ಇಲ್ಲ ಎನ್ನುವುದು ಪಾಲಿಕೆ ಅಧಿಕಾರಿಗಳ ವಿವರಣೆ.

ಧಾರವಾಡ ನಗರದಲ್ಲಿ ಒಳಚರಂಡಿ ವ್ಯವಸ್ಥೆ ಅಯೋಮಯವಾಗಿದೆ. ಜಿಲ್ಲಾ ಕೇಂದ್ರವಾದರೂ ಇದುವರೆಗೂ ಶೇ 40ರಷ್ಟು ಪ್ರದೇಶದಲ್ಲಿ ಮಾತ್ರ ಒಳಚರಂಡಿ ವ್ಯವಸ್ಥೆ ಇದೆ. ಇನ್ನುಳಿದ ಶೇ 60ರಷ್ಟು ಪ್ರದೇಶದಲ್ಲಿ ಒಳಚರಂಡಿ ವ್ಯವಸ್ಥೆ ಮಾಡಬೇಕಿದೆ. ವಿವಿಧ ಯೋಜನೆಗಳಡಿ ಯುಜಿಡಿ ಕಾಮಗಾರಿ ಮಾಡುವುದಕ್ಕಾಗಿ ಮಹಾನಗರ ಪಾಲಿಕೆಯು ಸರ್ಕಾರದಿಂದ ಅನುದಾನ ಪಡೆಯುವುದಕ್ಕಾಗಿ ಪ್ರಸ್ತಾವ ಸಲ್ಲಿಸಿದೆ. ಅಮೃತ ಯೋಜನೆ–1 ಅನುದಾನದಲ್ಲಿ ಧಾರವಾಡದ ಕೆಲವು ಬಡಾವಣೆಗಳಲ್ಲಿ ಒಳಚರಂಡಿ ಕಾಮಗಾರಿ ಕೈಗೊಳ್ಳಲಾಗಿತ್ತು. ಆದರೆ ‘ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಎನ್ನುವ ರೀತಿಯಲ್ಲಿ ಕಾಮಗಾರಿಯಾಗಿದೆ. ಒಳಚರಂಡಿ ವ್ಯವಸ್ಥೆ ಇರುವ ಪ್ರದೇಶಕ್ಕಿಂತಲೂ ವ್ಯವಸ್ಥೆ ಇಲ್ಲದ ಪ್ರದೇಶವೇ ಹೆಚ್ಚಿನ ಪ್ರಮಾಣದಲ್ಲಿದೆ.

ಹೊಸ ಕಾಮಗಾರಿ: ‘ಧಾರವಾಡ ನಗರದ ವಾರ್ಡ್ ಸಂಖ್ಯೆ 1ರಿಂದ 9ರ ವ್ಯಾಪ್ತಿಯಲ್ಲಿ ಸಮಗ್ರವಾಗಿ ಒಳಚರಂಡಿ ವ್ಯವಸ್ಥೆ ಮಾಡುವುದಕ್ಕಾಗಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮೂಲಕ ಡಿಪಿಆರ್ ಸಿದ್ಧಪಡಿಸಲಾಗಿದೆ. ಧಾರವಾಡದ ಶಾಸಕ ವಿನಯ ಕುಲಕರ್ಣಿ ಸರ್ಕಾರದಿಂದ ₹170 ಕೋಟಿ ಅನುದಾನ ಮಂಜೂರಾತಿ ಮಾಡಿಸಿದ್ದಾರೆ. ಹೊಸದಾಗಿ ಯುಜಿಡಿ ಕಾಮಗಾರಿ ಆರಂಭಿಸುವುದಕ್ಕಾಗಿ ಈಗಾಗಲೇ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ’ ಎಂದು ಮಹಾನಗರ ಪಾಲಿಕೆಯ ಸೂಪರಿಟೆಂಡೆಂಟ್ ಎಂಜಿನಿಯರ್ ವಿಜಯಕುಮಾರ್ ಆರ್. ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

Quote - ಧಾರವಾಡದಲ್ಲಿಯೂ ಹಂತಹಂತವಾಗಿ ಒಳಚರಂಡಿ ವ್ಯವಸ್ಥೆ ಬರಲಿದೆ. ಹುಬ್ಬಳ್ಳಿ ನಗರ ಸಂಪೂರ್ಣ ಒಳಚರಂಡಿ ವ್ಯವಸ್ಥೆಯಲ್ಲಿದೆ. ಆದರೆ ಕೆಲವು ಕಡೆ ಕೊಳವೆ ಬದಲಾಯಿಸುವ ಕೆಲಸ ಮಾಡಲಾಗುತ್ತಿದೆ ವಿಜಯಕುಮಾರ್ ಆರ್. ಹು–ಧಾ ಮಹಾನಗರ ಪಾಲಿಕೆಯ ಸೂಪರಿಟೆಂಡೆಂಟ್ ಎಂಜಿನಿಯರ್

Cut-off box - ಜನರಿಂದ ವ್ಯಕ್ತವಾದ ಆಕ್ರೋಶ ಒಳಚರಂಡಿ ಭರ್ತಿಯಾಗಿ ಮ್ಯಾನ್ಹೋಲ್ ಮೂಲಕ ರಸ್ತೆಯಲ್ಲಿ ಗಲೀಜು ಹೊರ ಚಿಮ್ಮುವ ಸಮಸ್ಯೆ ಕೆಲವು ಕಡೆಗಳಲ್ಲಿ ಶಾಶ್ವತ ಎನ್ನುವಂತಾಗಿದೆ. ಹುಬ್ಬಳ್ಳಿಯ ಹೆಗ್ಗೇರಿ ಮಾರುತಿನಗರದ ಮೂಲಕ ಆರ್.ಎನ್.ಶೆಟ್ಟಿ ರಸ್ತೆ ಸಂಪರ್ಕಿಸುವ ಮಾರ್ಗದಲ್ಲಿ ಮ್ಯಾನ್ಹೋಲ್ ಬಾಯ್ತೆರೆದು ಸಮಸ್ಯೆ ನಿರ್ಮಾಣವಾಗುವುದು ಪುನರಾವರ್ತನೆ ಆಗುತ್ತಲೇ ಇತ್ತು. ಅಕ್ರೋಶಗೊಂಡ ಜನರು ರಸ್ತೆ ಸಂಚಾರ ತಡೆದು ಈಚೆಗೆ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಧಾವಿಸಿದ್ದ ಪಾಲಿಕೆ ಅಧಿಕಾರಿಗಳು ದುರಸ್ತಿ ಕಾಮಗಾರಿ ಆರಂಭಿಸಿದ್ದಾರೆ. ಗೋಕುಲ್ ರಸ್ತೆ ಬಸ್ ಡಿಪೋ ಪಕ್ಕದಲ್ಲಿ ಹುಬ್ಬಳ್ಳಿ ಹೊಸ ಕೋರ್ಟ್ ಹಿಂಭಾಗ ಗೋಕುಲ್ ಕೈಗಾರಿಕಾ ಪ್ರದೇಶ ಸರ್ಕಿಟ್ ಹೌಸ್ ಮುಂಭಾಗ ಬಂಗ್ಲೊ ರಸ್ತೆ ದಾಜೀಬಾನ್ ಪೇಟೆ ಮಾರ್ಗ ಹೀಗಾಗಿ ಅನೇಕ ಕಡೆಗಳಲ್ಲಿ ಮ್ಯಾನ್ಹೋಲ್ನಿಂದ ಗಲೀಜು ರಸ್ತೆಯಲ್ಲಿ ಹರಡುವ ಸಮಸ್ಯೆ ಹಾಗೇ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.