ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ: ಯುಪಿಎಸ್‌ಸಿ ಫಲಿತಾಂಶ; ಸೌಭಾಗ್ಯಗೆ 101ನೇ ರ‍್ಯಾಂಕ್‌

Published 16 ಏಪ್ರಿಲ್ 2024, 12:55 IST
Last Updated 16 ಏಪ್ರಿಲ್ 2024, 12:55 IST
ಅಕ್ಷರ ಗಾತ್ರ

ಧಾರವಾಡ: ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ (ಯುಪಿಎಸ್‌ಸಿ) ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ನಗರದ ಕೃಷಿ ವಿಶ್ವವಿದ್ಯಾಲಯದ ಪದವೀಧರೆ ಸೌಭಾಗ್ಯ ಬೀಳಗಿಮಠ ಅವರು 101ನೇ ರ‍್ಯಾಂಕ್‌ ಪಡೆದಿದ್ದಾರೆ.

ಸೌಭಾಗ್ಯ ಅವರು ದಾವಣಗೆರೆಯವರು. ಶರಣಯ್ಯ ಸ್ವಾಮಿ ಮತ್ತು ಶರಣಮ್ಮ ದಂಪತಿಯ ಪುತ್ರಿ. ಶರಣಯ್ಯ ಅವರು ನರ್ಸರಿ ನಡೆಸುತ್ತಿದ್ದಾರೆ, ಶರಣಮ್ಮ ಅವರು ಗೃಹಿಣಿ. ಸೌಭಾಗ್ಯ ಅವರು ಎರಡನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ.

‘ಬುದಕಿನಲ್ಲಿ ದೊಡ್ಡ ಗುರಿ ಇಟ್ಟುಕೊಂಡು ಅದನ್ನು ಸಾಧಿಸಬೇಕು ಎಂದು ನಮ್ಮ ತಂದೆ ಸದಾ ಹೇಳುತ್ತಿದ್ದರು. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಬೇಕು ಎಂಬ ಗುರಿ ಚಿಕ್ಕಂದಿನಿಂದಲೂ ಇತ್ತು. ಅದಕ್ಕಾಗಿ ತಯಾರಿ ನಡೆಸಿದ್ದೆ, ಕನಸು ಸಾಕಾರವಾಗಿದೆ’ ಎಂದು ಸೌಭಾಗ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ಯಾವುದೇ ಕೇಂದ್ರದಲ್ಲಿ ಕೋಚಿಂಗ್‌ ಪಡೆದಿರಲಿಲ್ಲ. ಆನ್‌ಲೈನ್‌ ಮಾಕ್‌ ಟೆಸ್ಟ್‌ ಸರಣಿ ಅಟೆಂಡ್‌ ಮಾಡಿದ್ದೆ ಅಷ್ಟೆ. ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಬೋಧಕಿ ಅಶ್ವಿನಿ ಎಂ.ಅವರು ನನ್ನನ್ನು ತಮ್ಮ ಮನೆಯಲ್ಲೇ ಇಟ್ಟುಕೊಂಡು ಪರೀಕ್ಷೆಗೆ ಸಿದ್ಧತೆ ನಡೆಸಲು ಪ್ರೋತ್ಸಾಹ ನೀಡಿದರು.

ಪರೀಕ್ಷೆ ತಯಾರಿಗೆ ಅವರೇ ಎಲ್ಲ ರೀತಿಯ ಮಾರ್ಗದರ್ಶನ ನೀಡಿದರು’ ಎಂದು ತಿಳಿಸಿದರು.

ಸೌಭಾಗ್ಯ ಅವರು ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ 98 ಹಾಗೂ ಬಿ.ಎಸ್‌ಸಿ (ಕೃಷಿ) ಪದವಿಯಲ್ಲಿ ಶೇ 90 (ಸಿಜಿಪಿಎ 9.05) ಅಂಕ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT