ಹುಬ್ಬಳ್ಳಿ: ಮೂಲ ಸೌಕರ್ಯಗಳ ಕೊರತೆಯಿಂದ ಬಳಲುತ್ತಿರುವ ಹುಬ್ಬಳ್ಳಿ–ಧಾರವಾಡ ಮಹಾನಗರದಲ್ಲಿ ವರ್ಷವಿಡೀ ಜನರು ತೊಂದರೆ ಅನುವಿಸುವುದು ತಪ್ಪುತ್ತಿಲ್ಲ.

ಮಳೆ ಸುರಿದಾಗ ಮಣ್ಣು ರಸ್ತೆಗೆ ಹರಿದು ಬರುತ್ತದೆ. ಇದರಿಂದ ಎಲ್ಲಿ ನೋಡಿದರೂ ಕೆಸರುಮಯ ವಾತಾವರಣ ನಿರ್ಮಾಣವಾಗುತ್ತದೆ. ಮಳೆ ಕೊನೆಯಾಗಿ ಬಿಸಿಲಿನ ವಾತಾವರಣ ಹರಡುತ್ತಿದ್ದಂತೆ ರಸ್ತೆಯಲ್ಲಿನ ಕೆಸರು ದೂಳಾಗಿ ಪರಿವರ್ತನೆಗೊಂಡು ವಾಹನ ಸವಾರರು ಹಾಗೂ ಪಾದಚಾರಿಗಳನ್ನು ಗೋಳಾಡಿಸುತ್ತದೆ.

ರಸ್ತೆಯ ಅಕ್ಕಪಕ್ಕದಲ್ಲಿ ನಡೆದುಕೊಂಡ ಹೋಗುವ ಪಾದಚಾರಿಗಳು ದೂಳಿನ ಹೊಡೆತಕ್ಕೆ ಕಣ್ಣು ಸವರಿಕೊಳ್ಳುತ್ತಾ ಹೆಜ್ಜೆ ಹಾಕುವುದು ಹುಬ್ಬಳ್ಳಿಯಲ್ಲಿ ಸಾಮಾನ್ಯ ನೋಟ. ಬೈಕ್ ಓಡಿಸುವವರಿಗೆ ಕಣ್ಣಿಗೆ ಚಾಳೀಸು ಅಥವಾ ಸಮರ್ಪಕವಾದ ಹೆಲ್ಮೆಟ್ ಇರಬೇಕು. ಇವೆರಡು ಇಲ್ಲದಿದ್ದರೆ ಕಣ್ಣಿಗೆ ರಾಚುವ ದೂಳಿನಲ್ಲೆ ಸಂಕಷ್ಟ ಅನುಭವಿಸುತ್ತಾ ಮುಂದೆ ಸಾಗಬೇಕು. ಅಟೊ, ಟ್ರ್ಯಾಕ್ಟರ್ನಂತಹ ತೆರೆದ ವಾಹನ ಚಾಲಕರು ಹಾಗೂ ಅದರಲ್ಲಿ ಸಂಚರಿಸುವ ಜನರು ಭಾರಿ ಫಜೀತಿ ಅನುಭವಿಸಬೇಕಾಗುತ್ತದೆ.

ಕೊನೆಗಾಣದ ಹುಬ್ಬಳ್ಳಿ ದೂಳಿನ ಗೋಳು ತಪ್ಪಿಸುವ ಕೆಲಸವನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ತಕ್ಕಮಟ್ಟಿಗೆ ಮಾಡುತ್ತಿದ್ದಾರೆ. ಆದರೆ ಸಾಕಾಗುತ್ತಿಲ್ಲ. ಹೆದ್ದಾರಿಗಳು ಮತ್ತು ಹೆದ್ದಾರಿ ಸಂಪರ್ಕಿಸುವ ಮುಖ್ಯರಸ್ತೆಯ ವಿಭಜಕಗಳು ಮತ್ತು ರಸ್ತೆ ಅಂಚಿನಲ್ಲಿ ಬೀಳುವ ದೂಳು ಮತ್ತು ಇತರೆ ಘನತ್ಯಾಜ್ಯ ಎತ್ತುವುದಕ್ಕೆ ಯಂತ್ರಗಳನ್ನು ಬಳಕೆ ನಿಯೋಜಿಸಲಾಗಿದೆ. ಕೆಲ ಕಡೆ ಪೌರಕಾರ್ಮಿಕರು ರಸ್ತೆಗಳನ್ನು ಗುಡಿಸಿ ಸ್ವಚ್ಛತೆ ಕೈಗೊಳ್ಳುವುದು ಕಾಣುತ್ತದೆ.

ಶಾಶ್ವತ ಪರಿಹಾರವಿಲ್ಲ: ಮುಖ್ಯರಸ್ತೆಗೆ ಮಣ್ಣು ಹರಿದು ಬರದಂತೆ ಧೂಳಿನ ಸಮಸ್ಯೆಗೆ ಶಾಶ್ವತ ಪರಿಹಾರ ಜಾರಿ ಮಾಡುವುದಕ್ಕೆ ಮಹಾನಗರ ಪಾಲಿಕೆಯಿಂದ ಇದುವರೆಗೂ ಯಾವುದೇ ಯೋಜನೆ ಮಾಡಿಕೊಂಡಿಲ್ಲ. ಖಾಲಿ ನಿವೇಶನಗಳು, ಕಚ್ಚಾರಸ್ತೆಗಳು, ಅಭಿವೃದ್ಧಿಯಾಗದ ಉದ್ಯಾನಗಳು, ಸಂತೆ ಮೈದಾನಗಳು, ಗುಡ್ಡದ ರೀತಿ ಎತ್ತರದಲ್ಲಿರುವ ಬಡಾವಣೆಗಳಲ್ಲಿ ಸಮರ್ಪಕ ಚರಂಡಿಗಳು, ಪ್ರತಿ ರಸ್ತೆ ಅಂಚಿನ ಮಣ್ಣಿನ ಬಾಹುಗಳನ್ನು ಗಟ್ಟಿಕೊಳ್ಳುವ ಕೆಲಸ, ವಿವಿಧ ಕಾಮಗಾರಿಗಾಗಿ ರಸ್ತೆ ಅಗೆದು ಹಾಕಿರುವುದನ್ನು ಮತ್ತೆ ಪುನರ್ ನಿರ್ಮಾಣ ಮಾಡುವುದು, ಮಣ್ಣು ಮತ್ತು ಮರಳು ಸೇರಿದಂತೆ ವಿವಿಧ ಧೂಳಿನ ಸರಕು ಸಾಗಿಸುವ ವಾಹನಗಳ ನಿಯಂತ್ರಣಕ್ಕೆ ಕ್ರಮ ವಹಿಸುವುದು, ಕಟ್ಟಡ ಕಾಮಗಾರಿಗಳು ನಡೆಯುವ ಕಡೆಗಳಲ್ಲಿ ನಿಯಮಗಳನ್ನು ಜಾರಿ ಮಾಡುವುದು, ಹಬ್ಬ ಮತ್ತು ವಿವಿಧ ಸಮಾರಂಭಕ್ಕಾಗಿ ರಸ್ತೆಗಳನ್ನು ಅಗೆದುಹಾಕದಂತೆ ನಿಗಾ ವಹಿಸುವುದು ಸೇರಿದಂತೆ ಇಂತಹ ಕ್ರಮಗಳನ್ನು ಅನುಸರಿಸಿದರೆ ಮಾತ್ರ ಧೂಳಿನಿಂದಾಗುವ ಸಮಸ್ಯೆಗಳಿಗೆ ಕಡಿವಾಣ ಹಾಕುವುದನ್ನು ಸಾಧ್ಯವಾಗುತ್ತದೆ ಎನ್ನುವುದು ಸಾರ್ವಜನಿಕರ ಸಲಹೆ.

ಹುಬ್ಬಳ್ಳಿಯಲ್ಲಿ ಧೂಳು ನಿಯಂತ್ರಿಸಲು ವಾಹನಗಳ ಮೂಲಕ ನೀರು ಸಿಂಪರಣೆ ಮಾಡಲಾಗುತ್ತಿದೆ. ಬಹಳಷ್ಟು ಕಡೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿ ಇರುವುದರಿಂದ ಧೂಳು ನಿಯಂತ್ರಣ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ
ಶ್ರೀಧರ್ ಪರಿಸರ ಎಂಜಿನಿಯರ್ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ

ಯಾಂತ್ರಿಕೃತ ಮಂಜು ನಿರ್ಮಾಣ

ಹುಬ್ಬಳ್ಳಿ ನಗರದಲ್ಲಿ ದೂಳು ನಿಯಂತ್ರಣಕ್ಕೆ ರಸ್ತೆಗಳಲ್ಲಿ ಯಾಂತ್ರಿಕವಾಗಿ ಮಂಜಿನ ವಾತಾವರಣ ನಿರ್ಮಾಣ ಮಾಡುವ ವ್ಯವಸ್ಥೆಯನ್ನು ಮಹಾನಗರ ಪಾಲಿಕೆಯಿಂದ ಅನುಷ್ಠಾನಕ್ಕೆ ತರಲಾಗಿದೆ. ನವದೆಹಲಿಯಲ್ಲಿನ ಮಾದರಿ ಅನುಸರಿಸಿ ಎರಡು ಬೃಹತ್ ಯಂತ್ರಗಳನ್ನು ಪಾಲಿಕೆಯಿಂದ ಖರೀದಿಸಲಾಗಿದೆ. ‘ಹುಬ್ಬಳ್ಳಿಯ ಚನ್ನಮ್ಮ ವೃತ್ತ ಟೆಂಡರ್ಶ್ಯೂರ್ ರಸ್ತೆ ಕಾರವಾರ ರಸ್ತೆ ಬೆಂಗಳೂರು ರಸ್ತೆ ಕೇಶ್ವಾಪೂರ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಈ ಯಂತ್ರಗಳ ನೆರವಿನಿಂದ ನೀರು ಸಿಂಪರಣೆ ಮಾಡಲಾಗುತ್ತಿದೆ. ವಾಹನಗಳ ದೊಡ್ಡವಾಗಿದ್ದು ದಟ್ಟಣೆ ಗಮನದಲ್ಲಿ ಇಟ್ಟುಕೊಂಡು ಸಿಂಪಡಣೆ ಮಾಡುವಂತೆ ಸೂಚಿಸಲಾಗಿದೆ. ನೀರು ಸಿಂಪಡಣೆ ಮಾಡಿದಾಗ ಮಂಜಿನ ವಾತಾವರಣ ನಿರ್ಮಾಣವಾಗುತ್ತದೆ. ಆದರೆ ಬಿಸಿಲು ಅತಿಯಾದಾಗ ನೀರು ಬೇಗನೆ ಆವಿಯಾಗುತ್ತದೆ’ ಎಂದು ಮಹಾನಗರ ಪಾಲಿಕೆ ಪರಿಸರ ಎಂಜಿನಿಯರ್ ಶ್ರೀಧರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.