ಸೋಮವಾರ, ನವೆಂಬರ್ 30, 2020
26 °C
ಇಂದಿರಾ ಗಾಜಿನ ಮನೆಯಲ್ಲಿ ಪ್ರತಿಮೆಗೆ ಹೂಮಳೆ, ಗೌರವ ನಮನ

ವಿವಿಧ ಸಂಘಟನೆಗಳಿಂದ ವಾಲ್ಮೀಕಿ ಜಯಂತಿ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ನಗರದಲ್ಲಿ ಶನಿವಾರ ವಿವಿಧ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳಿಂದ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಕೋವಿಡ್‌ 19 ಕಾರಣದಿಂದ ಸರ್ಕಾರಿ ಕಚೇರಿಗಳು ಮತ್ತು ಶಾಲೆಗಳಲ್ಲಿ ಆಚರಣೆ ಸರಳವಾಗಿತ್ತು.

ಹುಬ್ಬಳ್ಳಿ–ಧಾರವಾಡ ವಿವಿಧ ದಲಿತ ಸಂಘಸಂಸ್ಥೆಗಳ ಒಕ್ಕೂಟದ ವತಿಯಿಂದ ನಗರದ ಇಂದಿರಾಗಾಜಿನ ಮನೆ ಆವರಣದಲ್ಲಿರುವ ಮಹರ್ಷಿ ವಾಲ್ಮೀಕಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಸಮತಾಸೇನಾ ಮತ್ತು ಒಕ್ಕೂಟದ ಪ್ರಮುಖರಾದ ಗುರುನಾಥ ಉಳ್ಳಿಕಾಶಿ, ವೆಂಕಟೇಶ ಮೇಸ್ತ್ರಿ, ಯಮನೂರ ಗುಡಿಯಾಳ, ಹನುಮಂತ ತಳವಾರ, ಪರಶುರಾಮ ಅರಕೇರಿ, ಕವಿತಾ ನಾಯಕ, ಮಂಜುನಾಥ ಹುಡೇದ, ಮಂಜುನಾಥ ಸಣ್ಣಕ್ಕಿ, ಮಂಜು ಉಳ್ಳಿಕಾಶಿ ಪಾಲ್ಗೊಂಡಿದ್ದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ‍ಪ್ರತಿಮೆಗೆ ಮಾಲಾರ್ಪಣೆ ಮಾಡಿ, ‘ಎಲ್ಲರಿಗೂ ಸಮಬಾಳು, ಸಮಪಾಲು ಎಂದು ಈಗ ಮಾಡುವ ಘೋಷಣೆಗಳನ್ನು ವಾಲ್ಮೀಕಿ ರಾಮಾಯಣದ ಮೂಲಕ ಆಗಲೇ ಹೇಳಿದ್ದರು. ವಾಲ್ಮೀಕಿ ದೇಶಕ್ಕೆ ಕೊಟ್ಟ ದೊಡ್ಡ ಕೊಡುಗೆ ರಾಮಾಯಣ’ ಎಂದರು.

ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖಂಡರಾದ ಎಸ್‌.ವಿ. ಸಂಕನೂರ, ಮಹೇಶ ಟೆಂಗಿನಕಾಯಿ, ಲಿಂಗರಾಜ ಪಾಟೀಲ, ನಾರಾಯಣ ಜರತಾರಘರ, ಎಂ.ಆರ್.ಪಾಟೀಲ, ವಿಜಯಾನಂದ ಶೆಟ್ಟಿ, ತಿಪ್ಪಣ್ಣ ಮಜ್ಜಗಿ, ದತ್ತಮೂರ್ತಿ ಕುಲಕರ್ಣಿ, ರವಿ ನಾಯ್ಕ ಭಾಗವಹಿಸಿದ್ದರು.

ಹಳೇ ಹುಬ್ಬಳ್ಳಿಯ ಸಿದ್ಧಾರೂಢಸ್ವಾಮಿ ಪ್ರೌಢಶಾಲೆ, ರೇವಣಸಿದ್ದೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು.

ರೇವಣಸಿದ್ದೇಶ್ವರ ಶಾಲೆ ಪ್ರಧಾನ ಕಾರ್ಯದರ್ಶಿ ಪರಮೇಶ್ವರ ಗುರುನಾಥಪ್ಪ ಬೈನವರ, ನಿವೃತ್ತ ಶಿಕ್ಷಣಾಧಿಕಾರಿ ಶಿವಮೂರ್ತಿ ಕೆ. ದೇವನೂರು, ಎಸ್.ಕೆ. ಡೊಳ್ಳಿನ್, ಮುಖ್ಯ ಶಿಕ್ಷಕ ಎಂ.ಕೆ. ಢಾಲಾಯತರ, ವೀರಸಂಗಪ್ಪ ಸತ್ತಿಗೇರಿ, ಕುಮಾರಸ್ವಾಮಿ ಹಿರೇಮಠ ಭಾಗವಹಿಸಿದ್ದರು. ಇದೇ ಶಾಲೆಯಲ್ಲಿ ಉಕ್ಕಿನ ಮನುಷ್ಯ ವಲ್ಲಭಬಾಯಿ ಪಟೇಲ ಅವರ 144ನೇ ಜಯಂತಿ ಆಚರಿಸಲಾಯಿತು.

ಬಿಜೆಪಿಯ ಹುಬ್ಬಳ್ಳಿ -ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಪರಿಶಿಷ್ಟ ಜಾತಿ ಮೋರ್ಚಾ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮಂಡಳದ ಅಧ್ಯಕ್ಷ ಪ್ರಭು ನವಲಗುಂದಮಠ ಮತ್ತು ಎಸ್‌ಟಿ ಮೋರ್ಚಾ ಅಧ್ಯಕ್ಷ ಮಾರುತಿ ಚಾಕಲಬ್ಬಿ ನೇತೃತ್ವದಲ್ಲಿ ದುರ್ಗದ ಬೈಲ್‌ನಲ್ಲಿ ಜಯಂತಿ ಆಚರಣೆ ನಡೆಯಿತು.

ಪ್ರಭು ನವಲಗುಂದಮಠ ಮಾತನಾಡಿ ‘ಭಾರತದ ಮೊಟ್ಟಮೊದಲ ಮಹಾಕಾವ್ಯ ರಾಮಾಯಣವನ್ನು ರಚಿಸಿದ ಮಹರ್ಷಿ ವಾಲ್ಮೀಕಿ ಜಯಂತಿ ಪ್ರತಿ ವರ್ಷ ಆಚರಿಸುತ್ತಿರುವುದು ಶ್ಲಾಘನೀಯ’ ಎಂದರು.

ಬಿಜೆಪಿ ಪ್ರಮುಖರಾದ ಅಶೋಕ ಕಾಟವೆ, ಚಂದ್ರಶೇಖರ ಗೋಕಾಕ, ಜಯತೀರ್ಥ ಕಟ್ಟಿ, ಶಿವು ಮೆಣಸಿನಕಾಯಿ, ವಿನಯ ಸಜ್ಜನವರ, ಬಸವರಾಜ ಅಮ್ಮಿನಬಾವಿ, ರಂಗಾ ಬದ್ದಿ, ಶಂಕರಪ್ಪ ಛಬ್ಬಿ, ಸಂತೋಷ ಅರಕೇರಿ, ಲಕ್ಷ್ಮೀಕಾಂತ ಘೋಡಕೆ, ದೀಪಕ ಮೆಹರವಾಡೆ, ಮಂಜುನಾಥ ಕಾಟಕರ, ಮಂಜುನಾಥ ಬಿಜವಾಡ, ಹನಮಂತ ನಾಯಕ, ಶಶಿಕಾಂತ ಬಿಜವಾಡ ಪಾಲ್ಗೊಂಡಿದ್ದರು.

ಹುಬ್ಬಳ್ಳಿ–ಧಾರವಾಡ ಜಿಲ್ಲಾ ಮತ್ತು ಧಾರವಾಡ ಗ್ರಾಮಾಂತರ ಬಿಜೆಪಿ ವತಿಯಿಂದ ದೇಶಪಾಂಡೆ ನಗರದ ಕಚೇರಿಯಲ್ಲಿ ಜಯಂತಿ ಆಚರಣೆ ನಡೆಯಿತು. ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಗ್ರಾಮೀಣ ಘಟಕದ ಅಧ್ಯಕ್ಷ ಬಸವರಾಜ ಕುಂದಗೋಳಮಠ, ರವಿ ದೊಡ್ಡಮನಿ, ಅಶೋಕ ಕೊಟಗುಣಿಸಿ, ರಾಘವೇಂದ್ರ ನಾಯ್ಕರ್ ಮೊದಲಾದವರು ಇದ್ದರು.

ಕೆ.ಎಲ್.ಇ ಸಂಸ್ಥೆಯ ಪ್ರೇರಣಾ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಗೌರವ ಸಲ್ಲಿಸಲಾಯಿತು. ಪಿ.ಸಿ. ಜಾಬಿನ್ ವಿಜ್ಞಾನ ಸ್ವಾಯತ್ತ ಕಾಲೇಜಿನಲ್ಲಿ ವಾಲ್ಮೀಕಿ ಜಯಂತಿ ಮತ್ತು ವಲ್ಲಭಭಾಯಿ ಪಟೇಲ ಜನ್ಮದಿನದ ಆಚರಿಸಲಾಯಿತು. ಪ್ರಾಚಾರ್ಯ ಡಾ. ಲಿಂಗರಾಜ ಡಿ. ಹೊರಕೇರಿ, ಡಾ.ಪಿ.ಆರ್.ಜೀರಗಲ್, ಡಾ. ಬಿ.ಎಸ್.ಅಗಡಿ, ಪ್ರೊ ವಿ.ಆರ್. ವಾಘಮೋಡೆ ಇದ್ದರು.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿ ಗ್ರಾಮಾಂತರ ವಿಭಾಗದಲ್ಲಿ ವಿಭಾಗೀಯ ಸಂಚಾರ ಅಧಿಕಾರಿ ಅಶೋಕ ಪಾಟೀಲ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಅಧಿಕಾರಿಗಳಾದ ಕಿರಣ ಕುಮಾರ ಬಸಾಪುರ, ನಾಗಮಣಿ ಭೋವಿ, ಸುನೀಲ ವಾಡೇಕರ, ಚನ್ನಯ್ಯ ಬೋರಯ್ಯ ಹಾಗೂ ರೋಹಿಣಿ ಬೇವಿನಕಟ್ಟಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.