ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವೀರಶೈವ ಲಿಂಗಾಯತ ಜಾಗತಿಕ ಉದ್ಯಮ ಶೃಂಗ–2024’ ಇಂದಿನಿಂದ

ಹುಬ್ಬಳ್ಳಿಯಲ್ಲಿ ಅಂತರರಾಷ್ಟ್ರೀಯ ಲಿಂಗಾಯತ ಯುವ ವೇದಿಕೆಯಿಂದ ಆಯೋಜನೆ
Published 22 ಫೆಬ್ರುವರಿ 2024, 19:30 IST
Last Updated 22 ಫೆಬ್ರುವರಿ 2024, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ನಗರದ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಬಿವಿಬಿ ಕಾಲೇಜಿನ ಆವರಣದಲ್ಲಿ ಫೆ.23 ರಿಂದ 25ರವರೆಗೆ ‘ವೀರಶೈವ ಲಿಂಗಾಯತ ಜಾಗತಿಕ ಉದ್ಯಮ ಶೃಂಗ–2024’ ನಡೆಯಲಿದೆ ಎಂದು ಸಮಾವೇಶದ ಮುಖ್ಯ ಸಂಚಾಲಕ ಸಂತೋಷ ಕೆಂಚಾಂಬ ಹೇಳಿದರು.

ಅಂತರರಾಷ್ಟ್ರೀಯ ಲಿಂಗಾಯತ ಯುವ ವೇದಿಕೆಯಿಂದ (ಐಎಲ್‌ವೈಎಫ್‌) ನಡೆಯುವ ಈ ಶೃಂಗದಲ್ಲಿ ವೀರಶೈವ ಸಮುದಾಯ ಸೇರಿ ಎಲ್ಲಾ ಸಮುದಾಯದ ಉದ್ಯಮಿಗಳು ಮತ್ತು ವೃತ್ತಿಪರರ ಜೊತೆ ವ್ಯಾಪಾರಕ್ಕೆ ಪೂರಕವಾದ ಮಾಹಿತಿ ಹಂಚಿಕೆ, ಆರ್ಥಿಕ, ಕೈಗಾರಿಕೆ, ವ್ಯಾ‍ಪಾರ ಚಟುವಟಿಕೆಗಳನ್ನು ವೃದ್ಧಿಸುವ ಕುರಿತು ಪರಿಣತರ ಮಾರ್ಗದರ್ಶನ ಮತ್ತು ವಿಚಾರ ವಿನಿಮಯ ಮಾಡುವುದು ಸಮಾವೇಶದ ಉದ್ದೇಶ’ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಶೃಂಗದಲ್ಲಿ 150ಕ್ಕೂ ಹೆಚ್ಚು ಮಳಿಗೆಗಳಲ್ಲಿ ಕೃಷಿ, ಕೈಗಾರಿಕೆ, ವೈದ್ಯಕೀಯ ಸೇವೆಗಳಿಗೆ ಪೂರಕ ಪರಿಕರಗಳ ಪ್ರದರ್ಶನ ಇರಲಿದೆ.ಲಿಂಗಾಯತ ಸಮುದಾಯದ ಶ್ರೀಮಂತ ಸಂಸ್ಕೃತಿ, ಪರಂಪರೆ ಕೂಡ ಪರಿಚಯಿಸಲಾಗುವುದು’ ಎಂದರು.

‘ಫೆಬ್ರುವರಿ 23ರಂದು ಸಂಜೆ 4.45ಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ಪರಿಸರ ಇಲಾಖೆ ಸಚಿವ ಈಶ್ವರ ಖಂಡ್ರೆ, ಶಾಸಕ ಅರವಿಂದ ಬೆಲ್ಲದ, ಮಹಾರಾಷ್ಟ್ರ ವಿಧಾನಸಭಾ ಶಾಸಕ ವಿನಯ್‌ ಕೋರೆ ಸಮಾವೇಶ ಉದ್ಘಾಟಿಸುವರು’ ಎಂದರು. 

‘ಫೆಬ್ರುವರಿ 24ರಂದು ಬೆಳಿಗ್ಗೆ 10.30ರಿಂದ ಸಂಜೆ 6.30ರವರೆಗೆ ವಿಚಾರ ಸಂಕಿರಣ. ವೈದ್ಯಕೀಯ ಸಮಾವೇಶ ನಡೆಯಲಿದೆ. ಫೆಬ್ರುವರಿ 25ರಂದು ಸಂಜೆ 5ಕ್ಕೆ ಸಾಧಕರಿಗೆ ಸನ್ಮಾನ ಹಾಗೂ ಸಮಾರೋಪ ನಡೆಯಲಿದೆ‌. ಸಚಿವರಾದ ಎಂ.ಬಿ.ಪಾಟೀಲ, ಲಕ್ಷ್ಮಿ ಹೆಬ್ಬಾಳ್ಕರ, ಶಾಸಕರಾದ ಬಸವರಾಜ ಬೊಮ್ಮಾಯಿ, ಶಾಮನೂರು ಶಿವಶಂಕರಪ್ಪ, ಮಹೇಶ ಟೆಂಗಿನಕಾಯಿ ಮತ್ತಿತರರು ಭಾಗವಹಿಸುವರು’ ಎಂದರು.

ಪ್ರಮುಖರಾದ ಚನ್ನು ಹೊಸಮನಿ, ರಮೇಶ ಪಾಟೀಲ, ಸಿದ್ದು ಮಠದ, ರವಿರಾಜ ಕಮ್ಮಾರ, ಶಶಿಧರ ಶೆಟ್ಟರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT