ಬುಧವಾರ, ಡಿಸೆಂಬರ್ 8, 2021
18 °C

ಅಂತರ ವಲಯ ಕ್ರಿಕೆಟ್ ಟೂರ್ನಿ: ಧಾರವಾಡ ವಲಯಕ್ಕೆ ವೀರಜ್‌ ಸಾರಥ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಬೆಂಗಳೂರಿನಲ್ಲಿ ನ. 2ರಿಂದ ನಡೆಯಲಿರುವ 16 ವರ್ಷದ ಒಳಗಿನವರ ಅಂತರ ವಲಯ ಕ್ರಿಕೆಟ್ ಟೂರ್ನಿಗೆ ಧಾರವಾಡ ವಲಯ ತಂಡವನ್ನು ಆಯ್ಕೆ ಮಾಡಲಾಗಿದ್ದು, ಹುಬ್ಬಳ್ಳಿಯ ವೀರಜ್‌ ಹಾವೇರಿ ನಾಯಕರಾಗಿ ನೇಮಕವಾಗಿದ್ದಾರೆ.

ರಾಜನಗರದಲ್ಲಿರುವ ಕೆಎಸ್‌ಸಿಎ ಕಚೇರಿಯಲ್ಲಿ ಬುಧವಾರ ನಡೆದ ಆಯ್ಕೆ ಸಮಿತಿ ಸಮಿತಿ ಸಭೆಯಲ್ಲಿ ತಂಡವನ್ನು ಪ್ರಕಟಿಸಲಾಯಿತು. ಆಯ್ಕೆ ಸಮಿತಿ ಸದಸ್ಯರಾದ ಸಂಗಮ ಪಾಟೀಲ, ಮನೋಜಕುಮಾರ ಮಲ್ಹೋತ್ರಾ, ಮಂಜುನಾಥ ಮೂಗಬಸ್ತ್‌, ಜಯರಾಜ್ ನೂಲ್ವಿ ಮತ್ತು ಶಿವಪ್ರಕಾಶ ಶಿರಕೋಳ ಇದ್ದರು. ಬೆಂಗಳೂರಿನಿಂದ ವೀಕ್ಷಕರಾಗಿ ಸಿ.ಬಿ. ಕಾರ್ತಿಕ ಬಂದಿದ್ದರು. ಕೆಎಸ್‌ಸಿಎ ಧಾರವಾಡ ವಲಯದ ನಿಮಂತ್ರಕ ಅವಿನಾಶ ಪೋತದಾರ ಹಾಗೂ ಚೇರ್ಮನ್‌ ವೀರಣ್ಣ ಸವಡಿ ಇದ್ದರು.

ತಂಡ ಇಂತಿದೆ: ಸಿದ್ದೇಶ ಅಸಲಕರ, ಪಿಯೂಷ್ ಗೆಹ್ಲೋಟ್‌, ತನುಷ್‌ ಡಿ. ಮಾಲೆ, ಅಥರ್ವ ನೂಲಿ, ಸಾಯಿರಾಜ ದೇಸಾಯಿ, ಹರ್ಷ ಎಂ. ಪಟೇಲ (ಬೆಳಗಾವಿ), ಎಸ್‌. ಅಖಿಲ್‌, ಶಹಬಾಜ್‌ ಜಮಖಂಡಿ (ಧಾರವಾಡ), ಮಣಿಕಂಠ ಬುಕಿಟಗಾರ, ರಮೇಶ ಬಾಗೇವಾಡಿ, ಮೊಹಮ್ಮದ್‌ ಶಾಹೀದ್ ಖಾತೀಬ್‌, ಪ್ರಥಮ ಲಡಾದ, ಸೋಹನ ಕಲ್ಲೂರ (ಹುಬ್ಬಳ್ಳಿ), ರಾಹುಲ್‌ ಶೆಟ್ಟಣ್ಣನವರ (ಗದಗ).

ಕಾಯ್ದಿರಿಸಿದ ಆಟಗಾರರು: ಗೌರವ ಕಾಂಟೆ, ಹರ್ಷ ವಿ. ಪಾಟೀಲ, ಕವೀಶ್ ಮುಕ್ಕಣ್ಣನವರ (ಬೆಳಗಾವಿ), ಯಶಸ್ ಪಿ. ಕರ್ಬೂರ (ಕಾರವಾರ) ಹಾಗೂ ಅಬ್ದುಲ್‌ ಶಮಿ ದಿವಾನ್ ಅಲಿ (ಹುಬ್ಬಳ್ಳಿ). ಪ್ರಮೋದ ಕಾಮತ್‌ (ತರಬೇತುದಾರ) ಹಾಗೂ ಆನಂದ ಕರಾಡಿ (ತಂಡದ ವ್ಯವಸ್ಥಾಪಕ).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು