ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಲಿಂದ ಕರೆ ಮಾಡಿ ಬೆದರಿಕೆ ಆರೋಪ- ಗೂಂಡಾ ಶಕ್ತಿಗೆ ತಡೆ ಒಡ್ಡಿದ್ದೇವೆ: ಶೆಟ್ಟರ್‌

ಜೈಲಿನಿಂದ ಕರೆ ಮಾಡಿ ಬೆದರಿಕೆ ಆರೋಪ
Last Updated 3 ಸೆಪ್ಟೆಂಬರ್ 2021, 13:56 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪಾಲಿಕೆ ಚುನಾವಣೆಗೂ ಮುನ್ನ ಕೆಲ ಬಿಜೆಪಿ ಕಾರ್ಯಕರ್ತರಿಗೆ ಹಾಗೂ ಪಕ್ಷದ ಕಟ್ಟಾ ಮತದಾರರಿಗೆ ಕೆಲವರು ಜೈಲಿನಿಂದ ಕರೆ ಮಾಡಿ ಬೆದರಿಕೆಯೊಡ್ಡಿದ ಘಟನೆಗಳು ನಡೆದಿದ್ದು, ಇದಕ್ಕೆ ನಾವು ತಕ್ಕ ಉತ್ತರ ನೀಡಿ ಗುಂಡಾ ಶಕ್ತಿಗೆ ತಡೆಯೊಡ್ಡಿದ್ದೇವೆ ಎಂದು ಶಾಸಕ ಜಗದೀಶ ಶೆಟ್ಟರ್‌ ಹೇಳಿದರು.

ಶುಕ್ರವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು ‘ರಾಜ್ಯದಲ್ಲಿ ಯಾವುದೇ ಸರ್ಕಾರ ಅಧಿಕಾರದಲ್ಲಿದ್ದರೂ ಜೈಲಿನಿಂದ ಬೆದರಿಕೆ ಒಡ್ಡುವುದು, ಮತದಾರರ ಹಾಗೂ ಕಾರ್ಯಕರ್ತರಲ್ಲಿ ಭಯದ ವಾತಾವರಣ ಮೂಡಿಸುವುದನ್ನು ಗುಂಡಾಶಕ್ತಿಗಳು ಮಾಡಿಕೊಂಡೇ ಬಂದಿವೆ. ಇದನ್ನು ತಹಬಂದಿಗೆ ತಂದಿದ್ದೇವೆ. ಕಾರ್ಯಕರ್ತರಲ್ಲಿ ವಿಶ್ವಾಸ ತುಂಬುವ ಕೆಲಸ ಮಾಡಿದ್ದೇವೆ. ಜನಶಕ್ತಿಯ ಮುಂದೆ ಗುಂಡಾಗಳ ಶಕ್ತಿ ನಡೆಯುವುದಿಲ್ಲ’ ಎಂದರು.

’ಬೆದರಿಕೆ ಕರೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಆದರೆ, ಯಾವ ಕಾರ್ಯಕರ್ತರೂ ಅಧಿಕೃತವಾಗಿ ದೂರು ಕೊಟ್ಟಿಲ್ಲ. ದೂರು ನೀಡಿದರೆ ಪಕ್ಷ ಅದನ್ನು ಗಂಭೀರವಾಗಿ ಪರಿಗಣಿಸಿ ದೂರು ದಾಖಲಿಸಲಿದೆ’ ಎಂದರು.

58ನೇ ವಾರ್ಡ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಮಹೇಂದ್ರ ಕೌತಾಳ ‘ಪ್ರಜಾವಾಣಿ’ ಜೊತೆ ಮಾತನಾಡಿ ‘ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ತನಕ ನಮ್ಮ ಪಕ್ಷದ ಕೆಲ ಪ್ರಮುಖ ಕಾರ್ಯಕರ್ತರು ನನ್ನೊಂದಿಗಿದ್ದರು. ಎರಡ್ಮೂರು ದಶಕಗಳಿಂದ ಅವರು ಬಿಜೆಪಿ ಜೊತೆಗೆ ಗುರುತಿಸಿಕೊಂಡವರು. ನಾಮಪತ್ರ ಸಲ್ಲಿಕೆ ಬಳಿಕ ಅವರು ಬೇರೆ ಪಕ್ಷ ಸೇರಿದರು. ಕೆಲ ಕಾರ್ಯಕರ್ತರಿಗೆ ಬೆದರಿಕೆ ಕರೆಗಳು ಬಂದಿದ್ದವು. ಈ ವಿಷಯವನ್ನು ಜಗದೀಶ ಶೆಟ್ಟರ್‌ ಅವರ ಗಮನಕ್ಕೂ ತರಲಾಗಿತ್ತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT