ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಳಿ, ಮಳೆ: ಕಿತ್ತು ಹೋದ ಗುಡಿಸಲು

Last Updated 14 ಏಪ್ರಿಲ್ 2021, 14:36 IST
ಅಕ್ಷರ ಗಾತ್ರ

ಕಲಘಟಗಿ: ಪಟ್ಟಣದ ಆಂಜನೇಯ ವೃತ್ತದ ತಾಲ್ಲೂಕು ಆಡಳಿತ ಜಾಗದಲ್ಲಿ ನೆಲೆಸಿರುವ ಅಲೆಮಾರಿ ಜನರ ಗುಡಿಸಲುಗಳು ಮಂಗಳವಾರ ಸಂಜೆ ಸುರಿದ ಮಳೆ ಹಾಗೂ ಗಾಳಿಗೆ ಕಿತ್ತು ಹೋಗಿವೆ. ಈ ಜನ ಹಲವಾರು ವರ್ಷಗಳಿಂದ ಪಟ್ಟಣದಲ್ಲಿ ವಾಸ ಮಾಡುತ್ತಿದ್ದು, ಸ್ವಂತ ಸೂರು ಇಲ್ಲದೆ ಈಗ ಬೀದಿಗೆ ಬೀಳುವಂತಾಗಿದೆ.

‘ನಾವು ಹಲವಾರು ವರ್ಷಗಳಿಂದ ಪಟ್ಟಣದಲ್ಲಿ ವಾಸಮಾಡುತ್ತಿದ್ದು, ಸೂರು ಕಲ್ಪಿಸುವಂತೆ ಹಲವಾರು ಬಾರಿ ತಾಲ್ಲೂಕು ಹಾಗೂ ಜಿಲ್ಲಾಡಳಿತಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಜನಪ್ರತಿಗಳನ್ನು ಕೇಳಿಕೊಂಡರೂ ಸ್ಪಂದಿಸಿಲ್ಲ. ಹೀಗಾಗಿ ಬದುಕು ಅತಂತ್ರವಾಗಿದೆ. ಈಗಲಾದರೂ ಸೂರು ಕಲ್ಪಿಸಿ’ ಎಂದು ಅಲೆಮಾರಿ ಜನಾಂಗದ ದುರ್ಗಪ್ಪ ಗೊಲ್ಲರ, ಯಲ್ಲಪ್ಪ ಕೊಣಪೇಟಿ, ಹುಚ್ಚಪ್ಪ ಶಕೀಗೊಲ್ಲರ, ಮಾರೆಪ್ಪ ಪೂಜಾ, ಸಂಕಪ್ಪ ದೊಡ್ಡ ಮಾರೆಪ್ಪ ಮನವಿ ಮಾಡಿದರು.

ತಾಲ್ಲೂಕಿನ ಶಿವನಾಪುರ ಗ್ರಾಮದ ಹತ್ತಿರದ ರಸ್ತೆಯಲ್ಲಿ ಮಂಗಳವಾರ ಸಂಜೆ ಸುರಿದ ಬಾರಿ ಮಳೆ ಹಾಗೂ ಗಾಳಿಗೆ ಮರಗಳು ಬಿದ್ದಿವೆ. ಮೂರು ವಿದ್ಯುತ್ ಕಂಬ ಹಾಗೂ ಲೈನ್‌ಗಳು ನೆಲಕ್ಕೆ ಉರುಳಿವೆ. ಇದರಿಂದಾಗಿ ಕೆಲ ಗಂಟೆಗಳ ಕಾಲ ವಿದ್ಯುತ್‌ ಹಾಗೂ ರಸ್ತೆ ಸಂಚಾರ ಸ್ಥಗಿತವಾಗಿತ್ತು. ನಂತರ ಹೆಸ್ಕಾಂ ಸಿಬ್ಬಂದಿ ತೆರವು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT