ಬುಧವಾರ, ಜುಲೈ 28, 2021
21 °C
ವಿವಿಧೆಡೆ ಯೋಗ ದಿನಾಚರಣೆ: ಯೋಗಾಭ್ಯಾಸ ಮಾಡಿ ಗಮನ ಸೆಳೆದ ಶೆಟ್ಟರ್

‘ಯೋಗದಿಂದ ದೈಹಿಕ, ಮಾನಸಿಕ ಸದೃಢತೆ’: ಸಚಿವ ಜಗದೀಶ ಶೆಟ್ಟರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಯೋಗ ಸಹಕಾರಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.

ನಗರದ ಪಿರಮಿಡ್ ಧ್ಯಾನ ಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ‌ ಯೋಗಾಭ್ಯಾಸ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಯೋಗ ಮಾಡುವುದರಿಂದ ಮಾನಸಿಕ ನೆಮ್ಮದಿ ಸಿಗಲಿದೆ. ಪ್ರತಿನಿತ್ಯ‌ ಯೋಗ ಮಾಡುವವರಿಗೆ ಕೋವಿಡ್ ಹೆಚ್ಚಾಗಿ ಬಾಧಿಸಿಲ್ಲ. ಇದು ನನ್ನ ವೈಯಕ್ತಿಕ ಅನುಭವವೂ ಆಗಿದೆ’ ಎಂದರು.

‘ಕೋವಿಡ್ ಹಿನ್ನೆಲೆಯಲ್ಲಿ ವರ್ಚುಯಲ್ ಯೋಗ ದಿನಾಚರಣೆಗೂ ಚಾಲನೆ ನೀಡಲಾಗಿದೆ. ಈ ಬಾರಿಯ ಘೋಷವಾಕ್ಯ ‘ಮನೆಯಲ್ಲಿದ್ದೇ ಯೋಗ ಮಾಡಿ’ ಎಂಬುದಾಗಿದೆ. ಜನ ನಿತ್ಯ ಯೋಗ ಮಾಡುವ ಹವ್ಯಾಸ ರೂಢಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯ್ತಿ ಸಿ‌ಇಒ ಡಾ.ಬಿ. ಸುಶೀಲಾ, ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ. ಯಶವಂತ ಮದೀನಕರ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಮೀನಾಕ್ಷಿ, ತಹಶೀಲ್ದಾರ್ ಶಶಿಧರ ಮಾಡ್ಯಾಳ ಕೂಡ ಯೋಗಾಭ್ಯಾಸ ಮಾಡಿದರು.

ಯೋಗ ಶಿಕ್ಷಕ ಸಂಗಮೇಶ್ ನಿಂಬರಗಿ ಅವರ ತಂಡ ಯೋಗಾಸನದ ಪ್ರಾತ್ಯಕ್ಷಿಕೆ ನೀಡಿತು.

ಡಾ.ಆರ್.ಬಿ. ಪಾಟೀಲ ಮಹೇಶ ಕಾಲೇಜು:

ಕಾಲೇಜಿನಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಯೋಗ ಶಿಕ್ಷಕಿ ಯೋಗ ಶಿಕ್ಷಕಿ ಶ್ವೇತಾ ದೀಕ್ಷಿತ ಮಾತನಾಡಿದರು. ಪ್ರಾಚಾರ್ಯ ರಾಮಮೋಹನ್ ಎಚ್.ಕೆ., ಕನ್ನಡ ಪ್ರಾಧ್ಯಾಪಕ ಪ್ರೊ.ಐ.ಎಸ್. ಹಿರೇಮಠ,ಪ ಪ್ರೊ. ಶಿಬಾನಿ ಕೆ., ಪ್ರೊ. ವಿದ್ಯಾ ಪಾಲಕರ್, ಉಪ ಪ್ರಾಚಾರ್ಯ ರಮೇಶ ಹೊಂಬಾಳೆ ಇದ್ದರು.

ಕಾನೂನು ವಿಶ್ವವಿದ್ಯಾಲಯ:

ವಿ.ವಿ ವತಿಯಿಂದ ಆನ್‌ಲೈನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೋಗ ಗುರು ಸಂಜೀವ ಕುಮಾರ ಹಡಗಲಿ ಯೋಗದ ವಿವಿಧ ಭಂಗಿಗಳನ್ನು ಆನ್‌ಲೈನ್ ಮುಖಾಂತರ ತಿಳಿಸಿಕೊಟ್ಟರು. ಕುಲಪತಿ ಪ್ರೊ.ಪಿ ಈಶ್ವರ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ಕುಲಸಚಿವರಾದ ಮೊಹಮ್ಮದ್ ಜುಬೇರ್, ಪ್ರೊ. ಜಿ.ಬಿ. ಪಾಟೀಲ, ಡೀನ್ ಪ್ರೊ. ರತ್ನಾ ಭರಮಗೌಡರ, ಕ್ರೀಡಾ ನಿರ್ದೇಶಕ ಡಾ. ಖಲೀದ್ ಖಾನ್, ಎನ್‌ಎಸ್‌ಎಸ್‌ ಸಂಯೋಜನಾಧಿಕಾರಿ ಡಾ. ರಾಜೇಂದ್ರ ಕುಮಾರ್ ಹಿಟ್ಟಣಗಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು