ಹುಬ್ಬಳ್ಳಿ: ನಗರದಹಳೇ ಹುಬ್ಬಳ್ಳಿಯ ಬ್ರಹ್ಮಾನಂದ ಶಾಲೆ ಬಳಿ ಇತ್ತೀಚೆಗೆ ನಡೆದಿದ್ದನೇಕಾರ ನಗರದ ನೂರಾನಿ ಪ್ಲಾಟ್ನ ಮುಸ್ತಾಕ್ಅಲಿ ಅತ್ತಾರ(23) ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನುಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ನೂರಾನಿ ಪ್ಲಾಟ್ನ ಮಲೀಕ್,ಗೌಸ್, ಮೋಹ್ಸಿನ್ ಹಾಗೂ ಅಖ್ತರ್ ಬಂಧಿತರು.

ಪ್ರಮುಖ ಆರೋಪಿ ಮಲೀಕ್ ಸಹೋದರಿಯನ್ನು ಮೃತ ಅತ್ತಾರ ಪೀಡಿಸುತ್ತಿದ್ದ. ಇದೇ ವಿಷಯಕ್ಕೆ ಮಲೀತ್ ತನ್ನ ಸಹಚರರೊಂದಿಗೆ ಮೇ 15ರಂದು ರಾತ್ರಿ ಚಾಕುವಿನಿಂದ ಇರಿದು ಆತನನ್ನು ಕೊಲೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

9 ಮಂದಿ ವಿರುದ್ಧ ಪ್ರಕರಣ:

ಲಾಕ್ಡೌನ್ ನಿಯಮವನ್ನು ಉಲ್ಲಂಘಿಸಿ ಅರವಿಂದನಗರದಲ್ಲಿ ಬುಧವಾರ ಸಂಜೆ ಕ್ರಿಕೆಟ್ ಆಡುತ್ತಿದ್ದ 9 ಯುವಕರ ವಿರುದ್ಧ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಬಳಿಕ, ಎಲ್ಲರಿಗೂ ಎಚ್ಚರಿಕೆ ನೀಡಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

ಬೈಕ್ ಕಳ್ಳನ ಬಂಧನ:

ಎನ್ಫೀಲ್ಡ್ ಬುಲೆಟ್ ಬೈಕ್ ಕಳ್ಳತನಕ್ಕೆ ಸಂಬಂಧಿಸಿದಂತೆ, ಕೇಶ್ವಾಪುರ ಠಾಣೆ ಪೊಲೀಸರು ಗದಗ ಜಿಲ್ಲೆಯ ನರಗುಂದದ ಇಮಾಮಸಾಬ ಅಲಿಬಾಯಿ ಎಂಬಾತನನ್ನು ಬುಧವಾರ ಬಂಧಿಸಿದ್ದಾರೆ. ಆರೋಪಿಯಿಂದ ಬೈಕ್ ಜಪ್ತಿ ಮಾಡಿ, ನ್ಯಾಯಾಂಗ ಬಂಧನಕ್ಕೆ ಕಳಿಸಿದ್ದಾರೆ.

ಬೈಕ್ನಿಂದ ಬಿದ್ದು ಸಾವು

ನಗರದ ತಾರಿಹಾಳ ಸೇತುವೆ ಬಳಿ ಇತ್ತೀಚೆಗೆ ಮಹಿಳೆಯೊಬ್ಬರು ಬೈಕ್ನಿಂದ ಬಿದ್ದು ಮೃತಪಟ್ಟಿದ್ದಾರೆ. ಧಾರವಾಡದ ನೆಹರುನಗರದ ಶಹನಾಜ ಬದಾಮಿ (42) ಮೃತರು.

ಮಗ ಮಲೀಕ್ಜಾನ್ ಜತೆ ಶಹನಾಜ ಅವರು ಬೈಕ್ನಲ್ಲಿ ಮಧ್ಯಾಹ್ನ ಧಾರವಾಡದಿಂದ ಹುಬ್ಬಳ್ಳಿಗೆ ಬರುತ್ತಿದ್ದರು. ಸೇತುವೆ ಬಳಿಯ ತಿರುವು ತೆಗೆದುಕೊಳ್ಳುತ್ತಿದ್ದಾಗ ಹಿಂದೆ ಕುಳಿತಿದ್ದ ತಾಯಿ ಕೆಳಕ್ಕೆ ಬಿದ್ದಿದ್ದಾರೆ. ತಲೆಗೆ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು ಎಂದು ಉತ್ತರ ಸಂಚಾರ ಠಾಣೆ ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.