ಹುಬ್ಬಳ್ಳಿ: ಉದರ ನಿಮಿತ್ತಂ ಬಹುಕೃತ ವೇಷಂ ಎಂಬ ಮಾತಿದೆ. ಹೊಟ್ಟೆ ಹೊರೆಯುವ ಸಲುವಾಗಿ ಪ್ರತಿಯೊಬ್ಬರೂ ಒಂದಲ್ಲ ಒಂದು ಉದ್ಯೋಗ ಮಾಡಲೇಬೇಕು. ಜೇನುಗೂಡು ಎಂದರೆ ಮಾರುದ್ದ ಸರಿಯುವವರೇ ಹೆಚ್ಚು. ಆದರೆ, ಜೇನುಗೂಡಿಗೆ ಕೈ ಹಾಕಿ ಜೇನು ತೆಗೆದು ಅದನ್ನು ಮಾರಾಟ ಮಾಡಿ ಬದುಕು ಕಟ್ಟಿಕೊಂಡಿದೆ ಒಡಿಸ್ಸಾ ಮೂಲದ ಕುಟುಂಬ.

ಧಾರವಾಡದ ರೈಲು ನಿಲ್ದಾಣದಲ್ಲಿ ಬಾಡಿಗೆ ಮನೆಯೊಂದನ್ನು ಮಾಡಿಕೊಂಡು ಸಲ್ಮಾನ್ ಮಂಡಲ್, ವಿಕಾಸ್ ಮಂಡಲ್ ಕುಟುಂಬ ಕಳೆದ ಎರಡು ವರ್ಷಗಳಿಂದ ನೆಲೆಸಿದೆ. ಅವಳಿ ನಗರದಲ್ಲಿ ಜೇನುಗೂಡು ಎಲ್ಲೇ ಇದ್ದರೂ ಸಾಕು ಅದನ್ನು ಕಂಡ ಕೂಡಲೇ ಅಲ್ಲಿ ಇವರು ಇರುತ್ತಾರೆ.

ಬಹುಮಹಡಿ ಕಟ್ಟಡಗಳು, ಕಾಂಪ್ಲೆಕ್ಸ್‌ಗಳು, ಚಿತ್ರಮಂದಿರಗಳು, ಮರ, ಮನೆ ಆವರಣ ಹೀಗೆ ಎಲ್ಲೆಂದರಲ್ಲಿ ಜೇನು ಗೂಡು ಕಟ್ಟಿರುತ್ತವೆ. ಜೇನು ಹುಳುಗಳು ಕಚ್ಚಿಸಿಕೊಂಡು ಅನೇಕ ಮಂದಿ ತೊಂದರೆಯೂ ಅನುಭವಿಸಿರುತ್ತಾರೆ. ಆದರೆ, ಜೇನುಗೂಡು ತೆಗೆಸಲು ಯಾರನ್ನು ಸಂಪರ್ಕಿಸಬೇಕು ಎಂಬುದು ಗೊತ್ತಾಗುವುದಿಲ್ಲ. ಅಂತಹವರ ಪಾಲಿಗೆ ವರದಾನವಾಗಿದೆ ಮಂಡಲ್ ಕುಟುಂಬ.

ಕಟ್ಟಡದ ಎಷ್ಟೇ ಎತ್ತರದಲ್ಲಿ ಜೇನು ಗೂಡು ಕಟ್ಟಿದರೂ ಅದನ್ನು ಚಾಕಚಕ್ಯತೆಯಿಂದ ತೆಗೆಯಬಲ್ಲ ಸಾಮರ್ಥ್ಯವನ್ನು ಇವರು ಹೊಂದಿದ್ದಾರೆ. ಜೇನುಗೂಡು ಬಳಿ ಸ್ವಲ್ಪವೂ ಅಂಜಿಕೆ ಇಲ್ಲದೇ ಇವರು ಕೈಹಾಕುತ್ತಾರೆ. ಅದಕ್ಕೂ ಮುನ್ನ ಹೊಗೆ ಹಾಕಿ ಜೇನು ನೊಣಗಳನ್ನು ಓಡಿಸುತ್ತಾರೆ. ಹೊಗೆಗೆ ಹೆದರದೇ ಕೆಲ ನೊಣಗಳು ಗೂಡಿನ ಬಳಿಯೇ ಹಾರಾಡುತ್ತಿರುತ್ತವೆ. ಆದರೆ, ಯಾವುದೇ ಅಳುಕಿಲ್ಲದೇ ನೊಣಗಳು ಕಚ್ಚಿದರೂ ಜೇನುಗೂಡಿಗೆ ಕೈಹಾಕಿ ಬಿಡಿಸಿಕೊಳ್ಳುತ್ತಾರೆ.

ಹೀಗೆ ಜೇನುಗೂಡು ಅಳಿಯಲು ಇವರು ₹2,000– 3,000 ಸಂಭಾವನೆ ಪಡೆಯುತ್ತಾರೆ. ಬಳಿಕ ಜೇನು ತುಪ್ಪವನ್ನು ತೆಗೆದು ಮಾರಾಟ ಮಾಡುತ್ತಾರೆ. ತಾಜಾ ಜೇನುತುಪ್ಪಕ್ಕೆ ಇವರು ಕೆ.ಜಿಗೆ ₹360ರಂತೆ ಮಾರಾಟ ಮಾಡುತ್ತಾರೆ.

‘ಜೇನುಗೂಡು ತೆಗೆಯುವುದೇ ನಮ್ಮ ಕಾಯಕ. ಅದನ್ನು ಬಿಟ್ಟು ಬೇರೆ ಕಸುಬು ನಮಗೆ ಗೊತ್ತಿಲ್ಲ. ಜೇನುನೊಣಕ್ಕೆ ಹೆದರುವ ಮಂದಿಯೇ ಹೆಚ್ಚು. ಆದರೆ, ನಮಗೆ ಎಳ್ಳಷ್ಟೂ ಹುಳುಗಳನ್ನು ಕಂಡರೆ ಭಯ ಇಲ್ಲ. ನೊಣಗಳು ಕಚ್ಚಿದರೂ ನಮಗೆ ಭಯ ಇಲ್ಲ. ಅಪ್ಪನಿಂದ ಜೇನುಗೂಡು ತೆಗೆಯುವುದು ಮತ್ತು ಜೇನುತುಪ್ಪ ಅಳಿಯುವ ಕಾಯಕ ಕಲಿತೆ. ಇದೇ ಕಸುಬು ನಮ್ಮ ಕುಟುಂಬಕ್ಕೆ ಅನ್ನ ನೀಡುತ್ತಿದೆ.

ಗದಗ, ಹಾವೇರಿ ಸೇರಿದಂತೆ ನೆರೆಯ ಜಿಲ್ಲೆಗಳವರು ಕರೆಸಿಕೊಂಡರೆ ಅಲ್ಲಿಯೂ ಹೋಗುತ್ತೇವೆ’ ಎನ್ನುತ್ತಾರೆ ಜೇನುಗೂಡು ತೆಗೆಯುವ ಕಾಯಕದಲ್ಲಿ ನಿಸ್ಸೀಮರಾದ ಸಲ್ಮಾನ್ ಮಂಡಲ್. ಆಸಕ್ತರು ಮೊ: 70337 43079 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.