ಧಾರವಾಡ: ಮನುಷ್ಯನಿಗೆ ಜೀವದಾನ ನೀಡುವ ಶಕ್ತಿ ಇರುವುದು ರಕ್ತಕ್ಕೆ ಇದೆ. ಇಂಥ ರಕ್ತದಾನ ಶ್ರೇಷ್ಠವಾದುದು ಎಂದು ಜಿಲ್ಲಾ ಸರ್ಜನ್ ಡಾ. ವಿಜಯ ವಿಠ್ಠಲ ಮನಗೂಳಿ ಹೇಳಿದರು.

ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಕ್ರಿಕೆಟ್ ಆಟಗಾರ ಪರೇಶ ನೆರ್ಲೇಕರ ಅವರ ಪ್ರಥಮ ಪುಣ್ಯಸ್ಮರಣೆ ಸ್ಮರಣಾರ್ಥ ಆತನ ಗೆಳೆಯರ ಬಳಗದವರು ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದ ಅವರು, ಒಬ್ಬ ವ್ಯಕ್ತಿಯ ಆತ್ಮಕ್ಕೆ ನಿಜವಾಗಿಯೂ ಶಾಂತಿ ಸಿಗುವುದು ಇಂಥ ಜೀವನ್ಮುಖಿ ಕಾರ್ಯಕ್ರಮಗಳಿಂದ ಎಂದರು.

ಇಂದಿನ ಯುವಜನಾಂಗದ ಚಿಂತನೆ ಧಾಟಿ ಬದಲಾಗುತ್ತಿದೆ. ಸಮಾಜಮುಖಿ ಕಾರ್ಯಗಳತ್ತ, ಸತ್ಕಾರ್ಯಗಳತ್ತ ಯುವಕರು ಮುಂದಾಗುತ್ತಿದ್ದಾರೆ ಎಂದು ಹೇಳಿದರು.

ಎಸ್‌ಡಿಎಂ ಕ್ರಿಕೆಟ್ ಅಕಾಡೆಮಿ ಕಾರ್ಯದರ್ಶಿ ನೀಧಜಕುಮಾರ ಜೈನ್, ಪತ್ರಕರ್ತ ವಿರೂಪಾಕ್ಷ ಹಲಕರ್ಣಿಮಠ ಮಾತನಾಡಿದರು. ಪ್ರಮೋದ ನಾಯ್ಕ, ಡಾ. ಅಚ್ಯುತ್, ಡಾ. ಕುಕನೂರ, ರವಿ ಬೇದರೆ, ಪ್ರಕಾಶ ಪೂಜಾರ, ಮೃತ್ಯುಂಜಯ ಬನವಾಸಿ, ಮಹಮ್ಮದ್‌ರಫಿ ಗಡವಾಲ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.