ಧಾರವಾಡ: “ವಾಕ್ ಸ್ವಾತಂತ್ರ್ಯ ದೇಶದ ಅತ್ಯಮೂಲ್ಯ ಕೊಡುಗೆಯಾಗಿದೆ. ಸಂವಿಧಾನ ನೀಡಿದ ಹಕ್ಕಿನಡಿ ಮಾಧ್ಯಮದವರು ಕೆಲಸ ಮಾಡ ಬೇಕು” ಎಂದು ಕಾನೂನು ವಿಶ್ವವಿದ್ಯಾಲಯದ ಕುಲಪತಿ ಡಾ.ಜೆ.ಎಸ್.ಪಾಟೀಲ ಹೇಳಿದರು. ಕರ್ನಾಟಕ ವಿಶ್ವವಿದ್ಯಾಲಯದ ಕಾನೂನು ಮಹಾವಿದ್ಯಾಲಯದಲ್ಲಿ ಪತ್ರಿಕಾ ಸ್ವಾತಂತ್ರ್ಯ ಮತ್ತು ಸಾಮಾಜಿಕ ಜವಾಬ್ದಾರಿ ಕುರಿತ ಒಂದು ದಿನದ ರಾಜ್ಯಮಟ್ಟದ ವಿಚಾರಸಂಕಿರಣವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯದ ಪೂರ್ವದಲ್ಲಿ ಪತ್ರಿಕೆಗಳು ಸಾಮಾಜಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದ್ದವು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಪತ್ರಿಕಾ ಸ್ವಾತಂತ್ರ್ಯಕ್ಕೆ ನಿರ್ಬಂಧ ಹೇರಿದ್ದರೂ ಕದ್ದು-ಮುಚ್ಚಿ ಪತ್ರಿಕೆಗಳನ್ನು ಮಾರಾಟ ಮಾಡಲಾಗುತ್ತಿತ್ತು ಎಂದರು. ಇಂದಿನ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಮಾಧ್ಯಮಗಳು ಬಹಳ ಮುಂದುವರಿದಿವೆ. ಆದರೆ ವಿದ್ಯುನ್ಮಾನ ಮಾಧ್ಯಮಗಳು ಅಪರಾಧ, ಅಶ್ಲೀಲತೆಗೆ ಹೆಚ್ಚು ಒತ್ತುಕೊಡುವ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುತ್ತಿವೆ. ಇಂಥ ಸನ್ನಿವೇಶದಲ್ಲಿ ಸತ್ಯಾಂಶವನ್ನು ಜನರಿಗೆ ಕೊಡುವಲ್ಲಿ ಶಿಕ್ಷಕರು ಮತ್ತು ಮಾಧ್ಯಮದ ಕೆಲಸಗಳು ಬಹುಮುಖ್ಯ ಎಂದು ಹೇಳಿದರು.

ಕರ್ನಾಟಕ ಕಾನೂನು ಮತ್ತು ಸಂಸ್ದೀಯ ಸುಧಾರಣಾ ಸಂಸ್ಥೆಯ ನಿರ್ದೇಶಕ ಜಿ.ದಕ್ಷಿಣಾಮೂರ್ತಿ ಆಶಯ ಭಾಷಣ ಮಾಡಿ, ತೊಂದರೆಗೆ ಸಿಕ್ಕಿಹಾಕಿಕೊಂಡಾಗ ಮಾತ್ರ ಜನರು ಕಾನೂನಿನ ಮೊರೆ ಹೋಗುತ್ತಾರೆ. ಜನರಲ್ಲಿ ಕಾನೂನಿನ ಅರಿವಿಲ್ಲ. ಮಾಹಿತಿ ತಂತ್ರಜ್ಞಾನದಿಂದ ಸಮಾಜ ಗೊಂದಲದಲ್ಲಿದೆ. ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರ ಬಹಿಸಬೇಕು, ಅಂದಾಗ ಮಾತ್ರ ಸಮಾಜದ ಉನ್ನತಿ ಸಾಧ್ಯ ಎಂದರು.

ಮಾಧ್ಯಮ ಅಕಾಡೆಮಿ ಅಧ್ಯಕ್ಷ ಡಿ.ಪಿ.ಪರಮೇಶ್ವರ ಅಧ್ಯಕ್ಷತೆ ವಹಿಸಿ, ಮನರಂಜನೆ ಟಿವಿ ಚಾಲನ್‌ಗಳ ಮುಖ್ಯ ಉದ್ದೇಶವಾಗಿದೆ. ಜನರು ಯಾವುದೋ ಕಾರಣದಿಂದ ಅದರತ್ತ ವಾಲುತ್ತಿದ್ದು, ಇಂದು ಚೆನ್ನಾಗಿ ಬರೆಯುವವರೇ ಸಿಗುತ್ತಿಲ್ಲ. ಯುವ ಪೀಳಿಗೆ ಟಿವಿಗಳತ್ತ ಹೋಗುತ್ತಿದ್ದಾರೆ. ಜನರೂ ಸಹ ಇದನ್ನು ಒಪ್ಪಿಕೊಳ್ಳುತ್ತಿದ್ದಾರೆ. ಟಿವಿಗಳು ಸಹ ಕೆಲವೊಂದಕ್ಕೆ ಕಡಿವಾಣ ಹಾಕಿಕೊಳ್ಳಬೇಕಾಗಿದೆ. ವಾಚರಕರವಾಣಿಯಲ್ಲಿ ಜನರು ಇನ್ನೂ ಹೆಚ್ಚು ಬರೆಯುವತ್ತ ಮುಂದಾಗಬೇಕು ಎಂದರು. ಕವಿವಿ ಕಾನೂನು ನಿಖಾಯದ ಡೀನ್ ಡಾ. ಸಿ.ರಾಜಶೇಖರ, ಪ್ರೊ. ಕೆ.ಆರ್.ಐತಾಳ ವೇದಿಕೆಯಲ್ಲಿದ್ದರು. ಪ್ರಾಚಾರ್ಯ ಡಾ. ಸಿ.ಎಸ್.ಪಾಟೀಲ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.