ಕಲಘಟಗಿ: ಬೆಳ್ಳನೆಯ ಮೈಚರ್ಮ, ಕೆಂದಗೂದಲು, ನೀಲಿ ಕಣ್ಣುಗಳ ಮಹಿಳೆಯೊಬ್ಬರು ಹೆಗಲಿಗೆ ದೊಡ್ಡ ವ್ಯಾನಿಟಿ ಬ್ಯಾಗ್ ಸಿಕ್ಕಿಸಿಕೊಂಡು ಶಾಲೆಯೊಳಗೆ ಪ್ರವೇಶಿಸುತ್ತಿದ್ದಂತೆ ಮಕ್ಕಳಿಗೆ ಕುತೂಹಲ ತಡೆಯಲಾಗದೆ ಹೋ ಎಂದು ಕೂಗುತ್ತ ಸಂಭ್ರಮದಿಂದ ಸ್ವಾಗತಿಸಿದರು. ವಿದೇಶಿ ಅತಿಥಿಗೆ `ಹಾಯ್~ ಎಂದು ಕೆಲವರು ಶುಭಾಶಯ ಕೋರಿದರೆ, ಮತ್ತೆ ಕೆಲವರು `ಬೈ~ ಎನ್ನುತ್ತ ತಮ್ಮೂರ ಶಾಲೆಗೆ ಆಹ್ವಾನಿಸಿದರು.

ಇಲ್ಲಿಯ ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ಆದರ್ಶ ವಿದ್ಯಾಲಯ ಹಾಗೂ ಉರ್ದು ಸರ್ಕಾರಿ ಪ್ರೌಢಶಾಲೆಗಳಿಗೆ ಬೆಲ್ಜಿಯಂ ದೇಶದ ನಿವೃತ್ತ ಮುಖ್ಯ ಶಿಕ್ಷಕಿ ಆ್ಯನ್ ಕ್ವಾಡ್ರನ್ ಭೇಟಿ ನೀಡಿದಾಗ ಕಂಡು ಬಂದ ವಾತಾವರಣ.
ವಿದೇಶದಿಂದ ಬಂದಿದ್ದ ಶಿಕ್ಷಕಿ ಆನ್ ಕ್ವಾಡ್ರನ್, ಹಳ್ಳಿಮಕ್ಕಳಿಗೆ ಸರಳ ಭಾಷೆಯಲ್ಲಿ, ವಿನೂತನ ಶೈಲಿಯಲ್ಲಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಪಾಠ ಹೇಳಿಕೊಟ್ಟಿದ್ದು ಗುರುವಾರದ ವಿಶೇಷವಾಗಿತ್ತು.

ಶಾಲೆಗೆ ಆಗಮಿಸಿದ ಆ್ಯನ್ ಮುಖ್ಯ ಶಿಕ್ಷಕರ ಜೊತೆಗೆ ಸುತ್ತಲಿನ ಪರಿಸರ ವೀಕ್ಷಿಸಿದರು. ಆಡಳಿತ ವ್ಯವಸ್ಥೆ ಪಾಠದ ಮಾಧ್ಯಮ, ಶಾಲೆಯಲ್ಲಿರುವ ಮೂಲಸೌಲಭ್ಯಗಳ ಬಗ್ಗೆ ಮಾಹಿತಿ ಪಡೆಯುತ್ತಲೇ ತರಗತಿಗೆ ತೆರಳಿ ಪಾಠ ಶುರು ಮಾಡಿದರು. ಮಕ್ಕಳಿಗೆ ತಮ್ಮ ಪರಿಚಯ ಮಾಡಿಕೊಡುತ್ತಲೇ ತಮ್ಮ ದೇಶದ ಪರಿಸರ, ರಾಜಕೀಯ, ಆಡಳಿತ ವ್ಯವಸ್ಥೆ ಬಗ್ಗೆ ಪರಿಚಯ ಮಾಡಿಕೊಟ್ಟರು.

ಮಕ್ಕಳದ ಜೊತೆ ಸಂವಾದವನ್ನೂ ನಡೆಸಿದರು. ಆದರ್ಶ ಶಾಲೆಯ ವಿದ್ಯಾರ್ಥಿ ವಿವೇಕ ಪಾಟೀಲ, ಬೆಲ್ಜಿಯಂ ದೇಶದ ಭೌಗೋಳಿಕ ವಾತಾವರಣದ ಬಗ್ಗೆ ಕೇಳಿದ ಪ್ರಶ್ನೆಗೆ, `ಭಾರತೀಯರು ಅದೃಷ್ಟವಂತರು. ಇಲ್ಲಿ ಯಾವುದೂ ಅತಿರೇಕದ ವಾತಾವರಣ ಇಲ್ಲ. ನಮ್ಮಲ್ಲಿ ಶೀತವಿದ್ದು, ಹಿಮಪಾತವೂ ಆಗುತ್ತದೆ~ ಎಂದು ಆ್ಯನ್ ಉತ್ತರಿಸಿದರು.
ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ನೇತ್ರಾವತಿ ಅಲ್ಲಿನ ಆಡಳಿತ ವ್ಯವಸ್ಥೆ ಕುರಿತು ಪ್ರಶ್ನಿಸಿದರು.

ಅದಕ್ಕೆ ಆ್ಯನ್ `ನಮ್ಮ ದೇಶದಲ್ಲಿ ರಾಜಪ್ರಭುತ್ವ ಇದೆ. ರಾಜ, ರಾಣಿ ಮತ್ತು ಪ್ರಧಾನಮಂತ್ರಿ ಇರುತ್ತಾರೆ~ ಎಂದರು. ಅಲ್ಲಿಯೂ ನಕ್ಸಲ್, ಭಯೋತ್ಪಾದನೆ ಕೃತ್ಯಗಳಿವೆಯೇ ಎಂಬ ಮತ್ತೊಂದು ಪ್ರಶ್ನೆಗೆ, `ಕೆಲವು ದಿನಗಳ ಹಿಂದೆ ಭಯೋತ್ಪಾದಕರು ಬಾಂಬ್ ಸ್ಫೋಟಿಸಿದ್ದು ಬಿಟ್ಟರೆ ಅಂಥ ಯಾವುದೇ ಕೃತ್ಯಗಳು ನಡೆದಿಲ್ಲ. ಅಲ್ಲಿ ಕ್ರೈಸ್ತ ಧರ್ಮೀಯರೇ ಹೆಚ್ಚಾಗಿದ್ದು, ಶಾಂತಿಪ್ರಿಯ ದೇಶ~ ಎಂದು ಉತ್ತರಿಸಿದರು. ಮಕ್ಕಳೊಂದಿಗೆ ಮಿಡಿಸೌತೆ ಉಪ್ಪಿನಕಾಯಿ ಸವಿದು ಸಂಭ್ರಮಿಸಿದರು.

ಪತ್ರಿಕೆಯೊಂದಿಗೆ ಮಾತನಾಡಿದ ಅವರು, `ನಾನು ನಿವೃತ್ತ ಮುಖ್ಯ ಶಿಕ್ಷಕಿ. ಬೆಲ್ಜಿಯಂನಲ್ಲಿ ಶಿಕ್ಷಕ ತರಬೇತಿ ಸಂಸ್ಥೆ ನಿರ್ವಹಿಸುತ್ತಿದ್ದೇನೆ. ಭಾರತದಲ್ಲಿ ಉತ್ತಮ ಶಿಕ್ಷಣ ನೀಡುವ ಸಾಧ್ಯತೆಗಳ ನಿಟ್ಟಿನಲ್ಲಿ, ಬೆಲ್ಜಿಯಂ ಶಿಕ್ಷಕ ವಿದ್ಯಾರ್ಥಿಗಳ ತಂಡವನ್ನು ಕಲಘಟಗಿ ತಾಲ್ಲೂಕಿನ ಮಡಕಿಹೊನ್ನಳ್ಳಿ, ಚಳಮಟ್ಟಿ, ಕಾಡನಕೊಪ್ಪ ಜೆಪಿ ಶಾಲೆ, ಬಾಲಕಿಯರ ಸರ್ಕಾರಿ ಪ್ರೌಢಶಾಲೆಗಳಿಗೆ ಎರಡು ತಿಂಗಳ ತರಬೇತಿಗಾಗಿ ಕರೆ ತಂದಿದ್ದೇನೆ.

ಹುಬ್ಬಳ್ಳಿ ತಾಲ್ಲೂಕಿನ ಎರಡು ಶಾಲೆಗಳನ್ನೂ ಆಯ್ಕೆ ಮಾಡಿಕೊಳ್ಳುವ ಚಿಂತನೆ ನಡೆದಿದೆ. ಕಲಘಟಗಿಯ ಶಿಕ್ಷಣ ಫೌಂಡೇಶನ್ನ ಸಹಯೋಗದಲ್ಲಿ ಪ್ರಸ್ತುತ ಯೋಜನೆ ಕೈಗೊಳ್ಳಲಾಗಿದೆ~ ಎಂದರು. ಮುಖ್ಯೋಪಾಧ್ಯಾಯರಾದ ಎಂ.ಎ. ಮುಲ್ಲಾ, ಎಸ್.ಎ. ಸೌದಾಗರ, ಶಿಕ್ಷಣ ಫೌಂಡೇಶನ್ನ ಸಂಯೋಜಕರಾದ ಶರಣಪ್ಪ, ಕಾಶಿನಾಥ ನಾಟೇಕರ, ಬಿ.ಎಸ್.ಬಡಿಗೇರ, ಕಿರಣ ಜಂಗಮ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.