ಶನಿವಾರ, ಸೆಪ್ಟೆಂಬರ್ 19, 2020
23 °C

ಜೀವ ಉಳಿಸಿದವರಿಗೆ ಸನ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘ಡೋಣಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಅಮಾಯಕರನ್ನು ರಕ್ಷಿಸಿದ ಸವನಳ್ಳಿ ಗ್ರಾಮದ ಯುವಕರ ಸಾಹಸ ಶ್ಲಾಘನೀಯ’ ಎಂದು ನಿವೃತ್ತ ಶಿಕ್ಷಕ ಚಾಂದಸಾಬ ಜಾಗೀರದಾರ ಹೇಳಿದರು.

ಬಬಲೇಶ್ವರ ತಾಲ್ಲೂಕು ಹೊನಗನಹಳ್ಳಿ ಗ್ರಾಮದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಾಹಸಿ ಯುವಕರ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೂಲಿ ಕೆಲಸಕ್ಕಾಗಿ ಸವನಳ್ಳಿ ಗ್ರಾಮಕ್ಕೆ ಬಂದಿದ್ದ ಮಹಾರಾಷ್ಟ್ರದ ರಾಜೇಶ ಜಾಧವ, ಅಮೋಘ, ಕೋಮಲ, ಸವಿತಾ ಹಾಗೂ ರಾಕೇಶ ಡೋಣಿ ಪ್ರವಾಹದಲ್ಲಿ ಸಿಲುಕಿ ಕೊಚ್ಚಿಕೊಂಡು ಹೋಗುತ್ತಿದ್ದರು. ಇದನ್ನು ಗಮನಿಸಿದ ಗ್ರಾಮದ ಪಟೇಲಸಾಬ ಕಾಣಿ, ಬಸೀರ ಬಮ್ಮನಳ್ಳಿ, ರಫೀಕ ಕಾಣಿ, ನಾರಾಯಣ ಪವಾರ, ಗುಲಾಬ ಕಾಣಿ, ನೀಲಕಂಠ ಗಾಣಿಗೇರ ಕುತೂಬ ಬೊಮ್ಮನಳ್ಳಿ, ಚನ್ನಬಸಪ್ಪ ಭಾವಿಕಟ್ಟಿ, ರಾಜು ಹನಗಂಡಿ, ಸಂಗು ಕೊಲ್ಹಾರ, ಅಬ್ದುಲ ಕನ್ನೂರ, ಮುರ್ತುಜು ಕಾಣಿ, ಅಮಾಯಕರ ಜೀವವನ್ನು ಕಾಪಾಡಿದ್ದಾರೆ’ ಎಂದು ಹೇಳಿದರು.

ಶಬ್ಬೀರ್ ಪಟೇಲ, ನಜೀರಸಾಬ ಜಾಗೀರದಾರ, ಇರ್ಫಾನ್ ಜಾಗೀರದಾರ, ಸಂಗಯ್ಯ ಹಿರೇಮಠ, ಶಿವಯ್ಯ ಗಣಾಚಾರಿ, ಯು.ಆರ್.ಬಿರಾದಾರ, ಬಸಪ್ಪ ಬಳ್ಳೂರ, ಶಿವನಗೌಡ ಬಿರಾದಾರ, ಶಂಕರಗೌಡ ಪಾಟೀಲ, ನಿಂಗಯ್ಯ ದೇವಣಗಾಂವ, ಬಸವರಾಜ ಗಾಣಿಗೇರ, ಮೋಹಿನ ಜಾಗೀರದಾರ, ಬಾಬಾ ಜಾಗೀರದಾರ, ಬಬಲು ಜಾಗೀರದಾರ, ಶಾರುಖ ಕಾಣಿ, ಶರಣು ಕಾಟಕರ, ಸೈಯ್ಯದ ಕಾಣಿ, ಬಂದೇನವಾಜ ಟಕ್ಕಳಕಿ, ಹುಸೇನ ಅಲಮ ಕಾಣಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.