ಮಂಗಳವಾರ, ಅಕ್ಟೋಬರ್ 20, 2020
25 °C

₹75 ಸಾವಿರ ಮೌಲ್ಯದ ವಸ್ತು ವಶ; ಮೂವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ಬೆಟಗೇರಿ ಸಿಪಿಐ ಬಿ.ಎ.ಬಿರಾದಾರ ಹಾಗೂ ಪಿಎಸ್‌ಐ ರಾಜೇಶ ಬಟಕುರ್ಕಿ ನೇತೃತ್ವದ ತಂಡ ನಡೆಸಿದ ದಾಳಿಯಲ್ಲಿ ಮೂವರು ಆರೋಪಿಗಳು ಸೆರೆಯಾಗಿದ್ದು, ಪೊಲೀಸರು ₹75 ಸಾವಿರ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಪೊಲೀಸರು ಬಂಧಿತರಾದ ಪ್ರವೀಣ ಪಿತಾಂಬರ, ಅಮಿತ್‌ ಸಲೂಕಿ, ಅಬ್ದುಲ ರೆಹಮಾನ ಮುಲ್ಲಾ ಅವರಿಂದ ಹೀರೊ ಹೊಂಡಾ ಬೈಕ್‌, ಒಪ್ಪೊ ಹಾಗೂ ವಿವೋ ಮೊಬೈಲ್‌ಗಳನ್ನು ನರಸಾಪೂರ ಆಶ್ರಯ ಕಾಲೊನಿಯಲ್ಲಿ ವಶಪಡಿಸಿಕೊಂಡಿದ್ದಾರೆ.

ಗದಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್‌ ಎಬನ್‌, ಡಿಎಸ್‌ಪಿ ಎಸ್.ಕೆ.ಪ್ರಲ್ಹಾದ ಮಾರ್ಗದರ್ಶನದಲ್ಲಿ ಈ ದಾಳಿ ನಡೆದಿತ್ತು. ತಂಡದಲ್ಲಿ ಎಫ್.ಆರ್.ಕಂಠಿ, ಕೆ.ಎಂ.ಮುಲ್ಲಾನವರ, ಸಿ.ಎಲ್.ದೊಡ್ಡಮನಿ, ಭಾಷಾ ಹವಾಲ್ದಾರ, ಪ್ರಕಾಶ ರಾಠೋಡ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.