ಗದಗ: ಜಿಲ್ಲೆಯಾದ್ಯಂತ ಗಣೇಶ ಹಬ್ಬವನ್ನು ಆಚರಿಸಲಾಗುತ್ತಿದ್ದು, ಗಣೇಶ ಮೂರ್ತಿಗಳನ್ನು ಆಯಾ ಸಂಘಟಕರು, ಸಾರ್ವಜನಿಕರು ಮೆರವಣಿಗೆ ಮೂಲಕ ಸ್ಥಳೀಯ ಆಡಳಿತ ನಿಗದಿಪಡಿಸಿದ ಸ್ಥಳದಲ್ಲಿ ವಿಸರ್ಜನೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಗಣೇಶ ಮೂರ್ತಿಗಳ 5, 7, 9, 11ನೇ ದಿನಗಳ ವಿಸರ್ಜನೆ ಸಮಯದಲ್ಲಿ ಸಂಬಂಧಪಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದ್ಯ ಸಾಗಣೆ ಮತ್ತು ಮಾರಾಟ ನಿಷೇಧಿಸಲಾಗಿದೆ.
5ನೇ ದಿನವಾದ ಸೆ.11ರಂದು ಬೆಳಿಗ್ಗೆ 6ರಿಂದ ಸೆ.12ರ ಬೆಳಿಗ್ಗೆ 6 ಗಂಟೆಯವರೆಗೆ ಗದಗ, ಶಿರಹಟ್ಟಿ, ಲಕ್ಷ್ಮೇಶ್ವರ, ನರಗುಂದ, ಮುಂಡರಗಿ, ರೋಣ, ಗಜೇಂದ್ರಗಡ ತಾಲ್ಲೂಕುಗಳಲ್ಲಿ; 7ನೇ ದಿನವಾದ ಸೆ. 13ರ ಬೆಳಿಗ್ಗೆ 6ರಿಂದ ಸೆ.14ರ ಬೆಳಿಗ್ಗೆ 6ರವರೆಗೆ ಗದಗ, ಶಿರಹಟ್ಟಿ, ಲಕ್ಷ್ಮೇಶ್ವರ, ನರಗುಂದ, ಮುಂಡರಗಿ, ರೋಣ, ಗಜೇಂದ್ರಗಡ ತಾಲ್ಲೂಕುಗಳಲ್ಲಿ; 9ನೇ ದಿನವಾದ ಸೆ. 15ರ ಬೆಳಿಗ್ಗೆ 6ರಿಂದ ಸೆ.16ರ ಬೆಳಿಗ್ಗೆ 6 ಗಂಟೆಯವರೆಗೆ ಗದಗ, ಶಿರಹಟ್ಟಿ, ಲಕ್ಷ್ಮೇಶ್ವರ, ನರಗುಂದ, ಮುಂಡರಗಿ, ರೋಣ, ಗಜೇಂದ್ರಗಡ ತಾಲ್ಲೂಕುಗಳಲ್ಲಿ; 11ನೇ ದಿನವಾದ ಸೆ. 17ರ ಬೆಳಿಗ್ಗೆ 6ರಿಂದ ಸೆ.18ರ ಬೆಳಿಗ್ಗೆ 6ರವರೆಗೆ ಗದಗ, ಲಕ್ಷ್ಮೇಶ್ವರ, ನರಗುಂದ, ರೋಣ, ಗಜೇಂದ್ರಗಡ ತಾಲ್ಲೂಕುಗಳಲ್ಲಿ; 13ನೇ ದಿನವಾದ ಸೆ.19ರ ಬೆಳಿಗ್ಗೆ 6ರಿಂದ ಸೆ.20ರ ಬೆಳಿಗ್ಗೆ 6ರವರಗೆ ಲಕ್ಷ್ಮೇಶರ ತಾಲ್ಲೂಕಿನಲ್ಲಿ; 17ನೇ ದಿನವಾದ ಸೆ.23ರಂದು ಬೆಳಿಗ್ಗೆ 6ರಿಂದ ಸೆ.24ರ ಬೆಳಿಗ್ಗೆ 6ರವರೆಗೆ ಲಕ್ಷ್ಮೇಶರ ತಾಲ್ಲೂಕಿನಲ್ಲಿ; 21ನೇ ದಿನವಾದ ಸೆ.27ರಂದು ಬೆಳಿಗ್ಗೆ 6 ರಿಂದ ಸೆ.28ರ ಬೆಳಿಗ್ಗೆ 6ರವರೆಗೆ ಗದಗ–ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ಮಾತ್ರ ಮದ್ಯ ಮಾರಾಟ ಮತ್ತು ಸಾಗಣೆ ನಿಷೇಧಿಸಲಾಗಿದೆ.
ಮೇಲೆ ತಿಳಿಸಿದ ಸ್ಥಳಗಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿರ್ದಿಷ್ಟ ದಿನಗಳಂದು ಬಾರ್‌ಗಳು, ಭಾರತೀಯ ತಯಾರಿಕೆಯ ಮದ್ಯದ ಅಂಗಡಿಗಳನ್ನು ಮುಚ್ಚಬೇಕು. ಅಲ್ಲದೇ ಪರಿಸ್ಥಿತಿಗೆ ಅನುಗುಣವಾಗಿ ಸಾರ್ವಜನಿಕ ಶಾಂತತೆ ಕಾಯ್ದುಕೊಳ್ಳುವ ದೃಷ್ಟಿಯಿಂದ ವಲಯ ಅಬಕಾರಿ ಇನ್‌ಸ್ಪೆಕ್ಟರ್ ಹಾಗೂ ಅಬಕಾರಿ ಉಪ ಆಯುಕ್ತರು, ಕನಾಟಕ ಅಬಕಾರಿ ಕಾಯ್ದೆ ಅನ್ವಯ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಗೋವಿಂದರೆಡ್ಡಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.