ಲಕ್ಷ್ಮೇಶ್ವರ: ಪಟ್ಟಣವು ಸೇರಿದಂತೆ ತಾಲ್ಲೂಕಿನಲ್ಲಿ ವೀಳ್ಯದೆಲೆ ಬೆಳೆಯಲು ಉತ್ತಮ ವಾತಾವರಣ ಇದೆ. ಇಲ್ಲಿನ ಮಸಾರಿ ಭೂಮಿ ವೀಳ್ಯದೆಲೆ ಬೆಳೆಯಲು ಹೆಚ್ಚು ಸೂಕ್ತ. ಆದಕಾರಣ, ಬಹಳಷ್ಟು ಕಡೆ ಎಲೆಬಳ್ಳಿ ಕೃಷಿ ಹಿಂದಿನಿಂದಲೂ ನಡೆದುಬಂದಿದೆ.

ವೀಳ್ಯದೆಲೆ ಬೆಳೆಯಲು ಸಾಕಷ್ಟು ಕೊಟ್ಟಿಗೆ ಗೊಬ್ಬರದ ಅವಶ್ಯಕತೆ ಇದೆ. ತಾಲ್ಲೂಕಿನಲ್ಲಿ ಜಾನುವಾರುಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಕೊಟ್ಟಿಗೆ ಗೊಬ್ಬರಕ್ಕೂ ಬರ ಇಲ್ಲ. ಈ ಕಾರಣಕ್ಕಾಗಿಯೂ ಎಲೆಬಳ್ಳಿ ತೋಟಗಳು ಇಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಅಲ್ಲದೆ ವರ್ಷದ ಹನ್ನೆರಡು ತಿಂಗಳೂ ವೀಳ್ಯದೆಲೆಗೆ ಬೇಡಿಕೆ ಇದ್ದೇ ಇರುತ್ತದೆ. ಅಲ್ಲದೆ ಒಮ್ಮೆ ನಾಟಿ ಮಾಡಿದ ಬಳ್ಳಿ ಮುಂದಿನ ಎರಡೂವರೆ ದಶಕಗಳವರೆಗೆ ಫಲ ನೀಡುತ್ತವೆ. ಈ ಎಲ್ಲ ಕಾರಣಕ್ಕಾಗಿ ರೈತರು ಎಲೆ ಬೆಳೆಯುತ್ತಿದ್ದಾರೆ.

ಸದ್ಯ ಲಕ್ಷ್ಮೇಶ್ವರದ ರೈತ ಜಾಪರ್ಸಾಬ್ ಪಶುಪತಿಹಾಳ ಪಟ್ಟಣದ ಸವಣೂರು ರಸ್ತೆಯಲ್ಲಿನ ನಿಂಗನಗೌಡ ಪ್ಯಾಟಿಗೌಡ್ರ ಅವರ ಮುಕ್ಕಾಲು ಎಕರೆ ತೋಟವನ್ನು ಹತ್ತು ವರ್ಷ ಲಾವಣಿಗೆ ಪಡೆದು ಅದರಲ್ಲಿ ಎಲೆ ಬೆಳೆದಿದ್ದು ಉತ್ತಮ ಆರೈಕೆಯಿಂದಾಗಿ ಫಸಲು ಇವರ ಕೈ ಸೇರುತ್ತಿದೆ.

ನಾಟಿ ಮಾಡುವ ವಿಧಾನ: ಎಲೆಬಳ್ಳಿ ನಾಟಿ ಮಾಡಲು ಜುಲೈ ಸೂಕ್ತ. ಬಳ್ಳಿಯನ್ನು ನಾಟಿ ಮಾಡುವ ಪೂರ್ವದಲ್ಲಿ ಬಳ್ಳಿ ಹಬ್ಬುವ ಸಲುವಾಗಿ ಆಸರೆಯಾಗಿ ಸಾಲಿನಿಂದ ಸಾಲಿಗೆ ಐದು ಅಡಿ ಅಂತರದಲ್ಲಿ ನುಗ್ಗೆ, ಚೊಗಚೆ ಗಿಡಗಳನ್ನು ಮೂರು ಅಡಿಗಳಿಗೊಂದರಂತೆ ಬೆಳೆಸಬೇಕಾಗುತ್ತದೆ. ಒಂದು ಅಡಿ ಎತ್ತರ ಬೆಳೆದ ವೀಳ್ಯದೆಲೆ ಬಳ್ಳಿಯನ್ನು ನಾಟಿ ಮಾಡುತ್ತಾರೆ. ಯಾವುದೇ ರಾಸಾಯನಿಕ ಗೊಬ್ಬರ ಬಳಸದೆ ಕೇವಲ ಸಗಣಿ ಗೊಬ್ಬರ ಹಾಕಬೇಕು. ಅಂದರೆ ಬಳ್ಳಿಗಳು ಚೆನ್ನಾಗಿ ಬೆಳೆದು ಮೂರು ತಿಂಗಳಲ್ಲಿ ಫಲ ನೀಡುತ್ತವೆ.

ಖರ್ಚು ವೆಚ್ಚ: ಹೊಸದಾಗಿ ಎಲೆಬಳ್ಳಿ ಕೃಷಿ ಮಾಡುವಾಗ ನಾಟಿ ಮಾಡಲು ಬಳಸುವ ಬಳ್ಳಿಯ ತುದಿಗೆ ಬೀಜ ಎನ್ನುತ್ತಾರೆ. ಈ ಮೊದಲೇ ಎಲೆ ಬೆಳೆಯುತ್ತಿರುವ ರೈತರಲ್ಲಿ ಇವು ದೊರೆಯುತ್ತವೆ. ಜಾಪರ್ಸಾಬ್ ಮುಕ್ಕಾಲು ಎಕರೆ ತೋಟದಲ್ಲಿ ಪ್ರತಿ ಬಳ್ಳಿ (ಬೀಜ)ಗೆ ₹5 ದರದಲ್ಲಿ ಖರೀದಿಸಿ ಒಟ್ಟು ಎರಡೂವರೆ ಸಾವಿರ ಬಳ್ಳಿಗಳನ್ನು ನಾಟಿ ಮಾಡಿದ್ದರು. ತೋಟದ ಲಾವಣಿ, ಭೂಮಿ ಹದ, ಗಿಡ ಬೆಳೆಸುವುದು, ಕೊಟ್ಟಿಗೆ ಗೊಬ್ಬರ ಸೇರಿದಂತೆ ಈವರೆಗೆ ₹5 ಲಕ್ಷ ಖರ್ಚು ಮಾಡಿದ್ದಾರೆ.

ಇಳುವರಿ: 10-15 ದಿನಗಳಿಗೊಮ್ಮೆ ಎಲೆ ಕೊಯ್ಲಿಗೆ ಬರುತ್ತದೆ. 12 ಸಾವಿರ ಎಲೆಗಳಿಗೆ ಒಂದು ಅಂಡಿಗೆ ಸಿದ್ಧವಾಗುತ್ತದೆ. ಒಂದು ಬಾರಿ ಎಲೆ ಬಿಡಿಸಿದಾಗ 2-3 ಅಂಡಿಗೆಯಷ್ಟು ಇಳುವರಿ ಬರುತ್ತದೆ.

ಆದಾಯ: ಎಲೆಗಳಿಗೆ ಯಾವಾಗಲೂ ಬೇಡಿಕೆ ಇದ್ದೇ ಇರುತ್ತದೆ. ಸದ್ಯ ಒಂದು ಅಂಡಿಗೆ ದರ ₹6 ಸಾವಿರದಿಂದ ₹8 ಸಾವಿರ ಇದೆ. ಉತ್ತಮ ಬೆಲೆ ಇದ್ದಾಗ ₹10 ಸಾವಿರ ಸಿಗುತ್ತದೆ. ಈ ದರದಲ್ಲಿ ಮಾರಾಟವಾದರೆ ರೈತರಿಗೆ ಲಾಭವಾಗುತ್ತದೆ. ವರ್ಷಕ್ಕೆ ₹2 ಲಕ್ಷ ಆದಾಯ ಬರುವ ನಿರೀಕ್ಷೆಯನ್ನು ರೈತ ಇಟ್ಟುಕೊಂಡಿದ್ದಾರೆ.

ಮಾರುಕಟ್ಟೆ: ಹಾವೇರಿ ಜಿಲ್ಲೆ ಸವಣೂರು ತಾಲ್ಲೂಕಿನ ಕಾರಡಗಿ ಗ್ರಾಮದಲ್ಲಿ ಎಲೆ ಮಾರುವ ದೊಡ್ಡ ಹರಾಜು ಮಾರುಕಟ್ಟೆ ಇದೆ. ಸವಣೂರು, ಹಾವೇರಿ, ಲಕ್ಷ್ಮೇಶ್ವರ ತಾಲ್ಲೂಕುಗಳಲ್ಲಿ ಬೆಳೆಯುವ ವೀಳ್ಯದೆಲೆಯನ್ನು ಇಲ್ಲಿ ಹರಾಜು ಮೂಲಕ ರೈತರು ಮಾರಾಟ ಮಾಡುತ್ತಾರೆ.

ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ ವೀಳ್ಯದೆಲೆ ಬೆಳೆಯಲು ಅನುಕೂಲಕ ವಾತಾವರಣ ಇದೆ. ಹೀಗಾಗಿ ನಮ್ಮ ಹಿರಿಯರು ಹಿಂದಿನಿಂದಲೂ ಈ ಕೃಷಿಯನ್ನು ಮಾಡುತ್ತ ಬಂದಿದ್ದಾರೆ ಎಂದು ಲಕ್ಷ್ಮೇಶ್ವರದ ವೀಳ್ಯದೆಲೆ ಬೆಳೆಗಾರ ಆರ್.ಸಿ. ಪಾಟೀಲ ತಿಳಿಸಿದರು.

ಮುಂಗಾರು ಹಂಗಾಮಿನಲ್ಲಿ ಬೀಸುವ ಮಳೆ ಗಾಳಿ ಎಲೆಬಳ್ಳಿಗೆ ಮಾರಕ. ಈ ಬಿರುಸು ಗಾಳಿಗೆ ಎಲೆಬಳ್ಳಿಗಳು ಕತ್ತರಿಸಿ ಬೀಳುತ್ತವೆ. ಇದನ್ನು ಹೊರತು ಪಡಿಸಿದರೆ ಬೆಳೆಗೆ ರೋಗ ಬಾಧೆ ಇಲ್ಲ

–ಜಾಪರ್ಸಾಬ್ ಪಶುಪತಿಹಾಳ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.