ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲಕ್ಷ್ಮೆಶ್ವರ | 108 ವಾಹನದಲ್ಲಿಯೇ ಹೆರಿಗೆ

Published 23 ಜೂನ್ 2024, 16:17 IST
Last Updated 23 ಜೂನ್ 2024, 16:17 IST
ಅಕ್ಷರ ಗಾತ್ರ

ಲಕ್ಷ್ಮೆಶ್ವರ: ತಾಲ್ಲೂಕಿನ ಬಾಲೆಹೊಸೂರು ಗ್ರಾಮದ ಗರ್ಭಿಣಿ ಹೆರಿಗೆ ಮಾಡಿಸಿಕೊಳ್ಳಲು ಲಕ್ಷ್ಮೇಶ್ವರದ ಸರ್ಕಾರಿ ಆಸ್ಪತ್ರೆಗೆ ಭಾನುವಾರ 108 ವಾಹನದಲ್ಲಿ ಬರುತ್ತಿದ್ದರು. ಆದರೆ ಅಂಬ್ಯುಲೆನ್ಸ್ ಸೂರಣಗಿ ಸಮೀಪ ಬರುತ್ತಿದ್ದಂತೆ ಹೆರಿಗೆ ನೋವು ಕಾಣಿಸಿಕೊಂಡಿತು. ಆಗ ವಾಹನದಲ್ಲಿದ್ದ ಸ್ಟಾಪ್ ನಸ್೯ ದವಲಪ್ಪ ನಡಗೇರಿ, ಆಶಾ ಕಾರ್ಯಕರ್ತೆ ಆಶಾ ಬಂಡಿವಡ್ಡರ, ಮಹಿಳೆ ಸಂಬಂಧಿಕರು ಹೆರಿಗೆ ಮಾಡಿಸಿ ಮಾನವೀಯತೆ ಮರೆದರು.

ಬಾಲೆಹೊಸೂರು ಗ್ರಾಮದ ಸುಕ್ಕಮ್ಮ ಗನೇಚರ ಎಂಬ ಗರ್ಭಿಣಿ 108 ಅಂಬ್ಯುಲನ್ಸ್ ವಾಹನದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಸೂರಣಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೈಕೆ ನಡೆದಿದೆ.

ಅಂಬುಲನ್ಸ್ ವಾಹನದ ಚಾಲಕ ಗಂಗಾಧರ ಕದಡಿ, ಆಸ್ಪತ್ರೆಯ ಡಿ.ದರ್ಜೆ ನೌಕರ ಇಮ್ತಿಯಾಜ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT