ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ವರ್ಗದ ಮಠಗಳ ಅಭಿವೃದ್ಧಿ: ಸಿ.ಎಂ ಬೊಮ್ಮಾಯಿ ಭರವಸೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ
Last Updated 10 ನವೆಂಬರ್ 2021, 7:36 IST
ಅಕ್ಷರ ಗಾತ್ರ

ನರೇಗಲ್:‌ ‘ಮಠಗಳು ಸ್ವಾತಂತ್ರ್ಯ ಪೂರ್ವದ ಭೀಕರ ಬರಗಾಲದಿಂದ ಇಲ್ಲಿಯ ವರೆಗೆ ನಿರಂತರದಾಸೋಹ ಮಾಡುವ ಮೂಲಕ ಜನರನ್ನು ಸಂಕಷ್ಟದಿಂದ ಪಾರು ಮಾಡಿವೆ. ಅನ್ನದಾನದ ಜೊತೆಗೆ ಅಕ್ಷರ ದಾನವನ್ನು ಮಾಡಿ ಭಕ್ತ ಸಮೂಹದ ಅಭಿವೃದ್ಧಿಗಾಗಿಶ್ರಮಿಸುತ್ತಿವೆ. ಜನ ಸೇವೆ ಮಾಡುತ್ತಿರುವ ಮಠಗಳನ್ನು ಗುರುತಿಸಿ ಗೌರವಿಸುವ ಕೆಲಸ ನಮ್ಮ ಸರ್ಕಾರ ಜವಾಬ್ದಾರಿ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಸಮೀಪದ ಹಾಲಕೆರೆ ಗ್ರಾಮದ ಅನ್ನದಾನೇಶ್ವರ ಮಠದ ವತಿಯಿಂದ ಆಯೋಜಿಸಿದ್ದಡಾ. ಅಭಿನವ ಅನ್ನದಾನ ಸ್ವಾಮಿಗಳ ಗುರುವಂದನೆ ಹಾಗೂ ಮುಪ್ಪಿನ ಬಸವಲಿಂಗ ದೇವರ ನಿರಂಜನ ಚರಪಟ್ಟಾಧಿಕಾರ ಕಾರ್ಯಕ್ರಮದಲ್ಲಿ ‘ಹಾಲಕೆರೆಯ ಬೆಳೆದಿಂಗಳು’ ಎಂಬ ಚಿತ್ರ ಸಂಪುಟವನ್ನು ಲೋಕಾರ್ಪಣೆ ಮಾಡಿ ಅವರುಮಾತನಾಡಿದರು.

‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಸೇರಿದಂತೆ ಬಹಳಷ್ಟು ಸಣ್ಣ ಸಮುದಾಯದ ಮಠಗಳು ಸಹ ಜಾಗೃತಗೊಂಡಿವೆ ಹಾಗೂ ಸಮಾಜವನ್ನು ತಿದ್ದುವ, ಶಿಕ್ಷಣ, ದಾಸೋಹ ನೀಡುವ ಕೆಲಸದಲ್ಲಿ ಮುಂದೆ ಸಾಗುತ್ತಿವೆ. ಪ್ರಾಮಾಣಿಕವಾಗಿ ಸಮಾಜದ ಸೇವೆ ಮಾಡುತ್ತಿರುವ ಎಲ್ಲಾ ವರ್ಗದ ಮಠಗಳ ಅಭಿವೃದ್ಧಿಗೆ ನಾವು ಬದ್ಧರಾಗಿದ್ದೇವೆ’ಎಂದು ಹೇಳಿದರು.

‘ಸರ್ಕಾರಕ್ಕಿಂತ ಮೊದಲು ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದ್ದಲ್ಲದೆಹೆಣ್ಣು ಮಕ್ಕಳ ಪ್ರಗತಿಗಾಗಿ ವಸತಿ ನಿಲಯಗಳನ್ನು ಆರಂಭಿಸಿದ ಕೀರ್ತಿ ರಾಜ್ಯದ ಮಠಗಳಿಗೆ ಸಲ್ಲುತ್ತದೆ ’ ಎಂದರು.

ಆರಂಭದಲ್ಲಿ ರೋಣ ಶಾಸಕ ಕಳಕಪ್ಪ ಜಿ. ಬಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಅನ್ನದಾನ ವಿಜಯ ವಿದ್ಯಾಪ್ರಸಾರಕ ಸಮಿತಿಯ ಬಾಲಕ, ಬಾಲಕಿಯರ ವಸತಿ ನಿಲಯದ ಅಡಿಗಲ್ಲು ಸಮಾರಂಭಕ್ಕೆ ಮುಖ್ಯಮಂತ್ರಿಚಾಲನೆ ನೀಡಿದರು.

ಈ ವೇಳೆ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಲೋಕೋಪಯೋಗಿ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ. ಸಿ. ಪಾಟೀಲ, ರೋಣ ಶಾಸಕ ಕಳಕಪ್ಪ ಜಿ. ಬಂಡಿ, ಗದಗ ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಜಿ. ಎಸ್. ಪಾಟೀಲ, ವಿಧಾನ ಪರಿಷತ್‌ಸದಸ್ಯರ ಎಸ್.ವಿ.ಸಂಕನೂರ, ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ, ಡಾ. ಅಭಿನವ ಅನ್ನದಾನ ಸ್ವಾಮೀಜಿ, ಶ್ರೀಶೈಲಪೀಠಂ ಡಾ. ಚೆನ್ನಸಿದ್ದರಾಮ ಪಂಡಿತಾರಾಧ್ಯಶಿವಾಚಾರ್ಯರು, ಮುಂಡರಗಿಯ ಡಾ. ಅನ್ನದಾನ ಶೀವಯೋಗಿಗಳು, ನಿಯೋಜಿತ ಉತ್ತರಾಧಿಕಾರಿ ಮುಪ್ಪಿನ ಬಸವಲಿಂಗ ದೇವರು, ವಿವಿಧ ಮಠದ ಹಿರಿಯ-ಕಿರಿಯ ಶ್ರೀಗಳು, ಭಕ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT