ನರೇಗಲ್: ಪಟ್ಟಣದಿಂದ ಮಜರೆ ಕೋಡಿಕೊಪ್ಪದ ಕಡೆಗೆ ಹೋಗುವ ಮಾರ್ಗದಲ್ಲಿ ನಿರ್ಮಾಣವಾಗುತ್ತಿರುವ ಕಾಂಕ್ರಿಟ್ ರಸ್ತೆಯು ಕಳಪೆಯಾಗಿದೆ ಹಾಗೂ ಮಳೆ ನೀರು ಹರಿದು ಹೋಗಲು ವ್ಯವಸ್ಥೆ ಸಹ ಮಾಡಿಲ್ಲ ಎಂದು ಚಂದ್ರಮೌಳೇಶ್ವರ ಕಟ್ಟಡ ಮತ್ತು ಇತರೆ ನಿರ್ಮಾಣ ಸಂಘದ ಅಧ್ಯಕ್ಷ ಸಂತೋಷ ಮಣ್ಣೋಡ್ಡರ ಆರೋಪ ಮಾಡಿದ್ದಾರೆ.

ಈ ಮೊದಲು ಡಾಂಬರ್ ರಸ್ತೆಯನ್ನೂ ಕಳಪೆ ಹಾಗೂ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿದ್ದರು, ಅದನ್ನು ಸರಿಪಡಿಸುವ ಸಲುವಾಗಿ ಮರು ನಿರ್ಮಾಣ ಮಾಡುತ್ತಿರುವ ಕಾಂಕ್ರೀಟ್ ರಸ್ತೆಯೂ ಅದೇ ಜಾಡು ಹಿಡಿದಿದೆ. ರಸ್ತೆಯನ್ನು ಸರಿಯಾಗಿ ಅಗೆಯದೇ ಮೇಲ್ಮೈಗೆ ಮಾತ್ರ ಕಡಿ, ಪೌಡರ್ ಹಾಕಿ ಮುಚ್ಚಲಾಗಿದೆ. ಮಳೆ ನೀರು ಹರಿದು ಹೋಗಲು ಎಲ್ಲಿಯೂ ದಾರಿ ಇಲ್ಲದ ಕಾರಣ ರಸ್ತೆಯಲ್ಲಿಯೇ ಹೊಂಡದಂತೆ ನಿಲ್ಲುತ್ತಿದೆ. ಕಾಮಗಾರಿ ಮುಗಿಯುವುದರೊಳಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು, ಇಲ್ಲದಿದ್ದರೆ ಹೋರಾಟ ನಡೆಸಬೇಕಾಗುವುದು ಎಂದು ಶುಕ್ರವಾರ ಪತ್ರಿಕಾ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.