ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ | ದ್ವಿಶತಕ ಸಮೀಪಕ್ಕೆ ಸೋಂಕಿತರ ಸಂಖ್ಯೆ

ಜಿಲ್ಲೆಯಲ್ಲಿ ಒಂದೇ ದಿನ 19 ಮಂದಿಗೆ ಕೋವಿಡ್‌ ದೃಢ
Last Updated 3 ಜುಲೈ 2020, 17:09 IST
ಅಕ್ಷರ ಗಾತ್ರ

ಗದಗ: ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನ ಒಟ್ಟು 19 ಮಂದಿಗೆ ಕೋವಿಡ್‌–19 ಸೋಂಕು ದೃಢಪಟ್ಟಿದ್ದು, ಒಟ್ಟು ಪಾಸಿಟಿವ್‌ ಪ್ರಕರಣಗಳ ಸಂಖ್ಯೆ 199ಕ್ಕೆ ಏರಿಕೆಯಾಗಿದೆ.

ಗದಗಿನ ಸಿದ್ದರಾಮೇಶ್ವರ ನಗರ ನಿವಾಸಿ 31 ವರ್ಷದ ಸೋಂಕಿತ ಪುರುಷನ (ಪಿ-10148) ಸಂಪರ್ಕದಿಂದ ಅದೇ ಪ್ರದೇಶದ 31 ವರ್ಷದ ಪುರುಷನಿಗೆ (ಪಿ-18272) ಹಾಗೂ 24 ವರ್ಷದ ಮಹಿಳೆಗೆ (ಪಿ-18273) ಸೋಂಕು ತಗುಲಿದೆ.

ಗುಜರಾತ್‌ನಿಂದ ಜುಲೈ 2ರಂದು ಜಿಲ್ಲೆಗೆ ಬಂದ ಗದಗ ತಾಲ್ಲೂಕಿನ ಮಲ್ಲಸಮುದ್ರದ ‘ಜಿಮ್ಸ್’ ವಸತಿ ನಿಲಯದ 19 ವರ್ಷದ ಯುವಕನಿಗೆ (ಪಿ-18283), ಮಹಾರಾಷ್ಟ್ರದಿಂದ ಜೂನ್ 30ರಂದು ಜಿಲ್ಲೆಗೆ ಬಂದ ಗದುಗಿನ ಕಳಸಾಪುರ ವರ್ತುಲ ರಸ್ತೆಯ ನಿವಾಸಿ 33 ವರ್ಷದ ಪುರುಷನಿಗೆ (ಪಿ-18289) ಹಾಗೂ ಹಾವೇರಿ ಜಿಲ್ಲೆಯಿಂದ ಜೂನ್ 26ರಂದು ಜಿಲ್ಲೆಗೆ ಬಂದ ಬೆಟಗೇರಿಯ ನರಸಾಪುರದ ರಂಗಪ್ಪಜ್ಜ ಮಠದ ಹತ್ತಿರದ ನಿವಾಸಿ 60 ವರ್ಷದ ಮಹಿಳೆಗೆ (ಪಿ-18271) ಸೋಂಕು ದೃಢಪಟ್ಟಿದೆ.

ಮಲ್ಲಸಮುದ್ರದ ಅಂಜುಮನ್ ಕಾಲೇಜ್ ಹತ್ತಿರದ ನಿವಾಸಿ 31 ವರ್ಷದ ಪುರುಷನಿಗೆ (ಪಿ-18280), ಗದಗ ನಗರದ ಕಾಗದಗೆರೆ ನಿವಾಸಿ 60 ವರ್ಷದ ಮಹಿಳೆಗೆ (ಪಿ-18281) ಹಾಗೂ ಹರ್ತಿ ಗ್ರಾಮದ ಈರಣ್ಣ ದೇವಸ್ಥಾನ ಹತ್ತಿರದ ನಿವಾಸಿ 22 ವರ್ಷದ ಮಹಿಳೆಗೆ (ಪಿ-18287)ಗೆ ಸೋಂಕು ದೃಢಪಟ್ಟಿದೆ.

ತಾಲ್ಲೂಕಿನ ಬೆಳದಡಿ ಗ್ರಾಮದ ನಿವಾಸಿ 40 ವರ್ಷದ ಪುರುಷನಿಗೆ (ಪಿ-18286), ಅಡವಿ ಸೋಮಾಪುರ ತಾಂಡಾ ನಿವಾಸಿ 60 ವರ್ಷದ ಮಹಿಳೆಗೆ (ಪಿ-18288)ಗೆ ಸೋಂಕು ದೃಢಪಟ್ಟಿದೆ.

ನರಗುಂದ ಪಟ್ಟಣದ ಗಡಿ ಓಣಿ ನಿವಾಸಿ 39 ವರ್ಷದ ಪುರುಷನ (ಪಿ-15320) ಸಂಪರ್ಕದಿಂದ ಅದೇ ಪ್ರದೇಶದ 7 ವರ್ಷದ ಬಾಲಕಿಗೆ (ಪಿ-18275), 65 ವರ್ಷದ ವೃದ್ಧೆಗೆ (ಪಿ-18276), 36 ವರ್ಷದ ಮಹಿಳೆಗೆ (ಪಿ-18277), 15 ವರ್ಷದ ಯುವಕನಿಗೆ (ಪಿ-18278), 42 ವರ್ಷದ ಪುರುಷನಿಗೆ (ಪಿ-18279) ಸೋಂಕು ದೃಢಪಟ್ಟಿದೆ.

ಧಾರವಾಡ ಜಿಲ್ಲೆಯಿಂದ ಜೂನ್ 30ರಂದು ಜಿಲ್ಲೆಗೆ ಬಂದ ನರಗುಂದ ಗುಡ್ಡದ ಕೇರಿ ಅಂಬಾಭವಾನಿ ದೇವಸ್ಥಾನದ ಹತ್ತಿರದ ನಿವಾಸಿ 25 ವರ್ಷದ ಮಹಿಳೆಗೆ (ಪಿ-18274) ಸೋಂಕು ತಗುಲಿದೆ. ‘ಜಿಮ್ಸ್ಸ್’ ಆಸ್ಪತ್ರೆಗೆ ದಾಖಲಾಗಿರುವ ಧಾರವಾಡ ಜಿಲ್ಲೆ ನವಲಗುಂದ ತಾಲ್ಲೂಕಿನ ಅಡ್ನೂರು ಗ್ರಾಮದ 31 ವರ್ಷದ ಪುರುಷನಿಗೆ (ಪಿ-18284) ಸೋಂಕು ದೃಢವಾಗಿದೆ.

ಲಕ್ಷ್ಮೇಶ್ವರದ 39 ವರ್ಷದ ಪುರುಷನ (ಪಿ-11230) ಸಂಪರ್ಕದಿಂದಾಗಿ ಲಕ್ಷ್ಮೇಶ್ವರದ ಹೊಸ ಬಸ್ ನಿಲ್ದಾಣದ ಹತ್ತಿರದ ಇಂದಿರಾ ನಗರ ನಿವಾಸಿ 40 ವರ್ಷದ ಮಹಿಳೆಗೆ(ಪಿ-18285) ಸೋಂಕು ದೃಢವಾಗಿದೆ. ಶಿರಹಟ್ಟಿ ತಾಲ್ಲೂಕಿನ ಗೊಜನೂರು ಗ್ರಾಮದ 23 ವರ್ಷದ ಮಹಿಳೆಗೆ (ಪಿ-18282) ಸೋಂಕು ದೃಢವಾಗಿದ್ದು, ಸೋಂಕಿನ ಪತ್ತೆ ಕಾರ್ಯ ನಡೆಯುತ್ತಿದೆ.

ಸೋಂಕಿತರನ್ನು ಜಿಲ್ಲಾಕೇಂದ್ರದ ಕೋವಿಡ್‌–19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ. ಇದುವರೆಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ 4 ನಾಲ್ವರು ಮೃತಪಟ್ಟಿದ್ದು, 81 ಜನರು ಗುಣಮುಖರಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 114 ಸಕ್ರಿಯ ಪ್ರಕರಣಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT