ಗದಗ: ಜಿಲ್ಲೆಯಲ್ಲಿ ಸೋಮವಾರ ಮತ್ತೆ 4 ಮಂದಿಗೆ ಕೋವಿಡ್–19 ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 174ಕ್ಕೆ ಏರಿಕೆಯಾಗಿದೆ.

ಜೂನ್ 13ರಿಂದ ಜೂನ್ 29ರವರೆಗೆ 17 ದಿನಗಳಲ್ಲಿ ಜಿಲ್ಲೆಯಲ್ಲಿ 125 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ. ಜಿಲ್ಲಾ ಕೇಂದ್ರಕ್ಕೆ ಮಾತ್ರ ಸೀಮಿತವಾಗಿದ್ದ ಸೋಂಕು ಇದೀಗ ಗ್ರಾಮೀಣ ಪ್ರದೇಶಗಳಿಗೂ ವಿಸ್ತಿರಿಸಿದ್ದು, ಶೇ 99ರಷ್ಟು ಪ್ರಕರಣಗಳಲ್ಲಿ ಯಾವುದೇ ಲಕ್ಷಣಗಳು ಇಲ್ಲದ ವ್ಯಕ್ತಿಗಳಿಗೆ ಗಂಟಲು ದ್ರವ ಪರೀಕ್ಷೆಯ ನಂತರ ಸೋಂಕು ದೃಢಪಡುತ್ತಿದೆ. ಸಂಪರ್ಕದಿಂದ ಹೆಚ್ಚಿನ ಜನರಿಗೆ ಸೋಂಕು ಹರಡುತ್ತಿರುವುದು ಮತ್ತು ಅಂತರ ಪಾಲಿಸುವಲ್ಲಿ ಜನರು ನಿರ್ಲಕ್ಷ್ಯ ತೋರಿಸುತ್ತಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿದೆ.

ಸೋಮವಾರ ರಹಟ್ಟಿ ಪಟ್ಟಣದ 10 ವರ್ಷದ ಬಾಲಕಿ (ಪಿ–13269), ಗದಗಿನ ತೇಜಾನಗರದ 61 ವರ್ಷದ ಪುರುಷ (ಪಿ–13270), ಕುರ್ತಕೋಟಿ ಗ್ರಾಮದ 36 ವರ್ಷದ ಪುರುಷ (ಪಿ–13271) ಮತ್ತು ಮಹಾರಾಷ್ಟ್ರದಿಂದ ಜಿಲ್ಲೆಗೆ ಮರಳಿದ ಗದುಗಿನ ಕೆಎಲ್‍ಇ ಕಾಲೇಜು ಸಮೀಪದ ನಿವಾಸಿ 21 ವರ್ಷದ ಯುವಕನಿಗೆ (ಪಿ–13272) ಸೋಂಕು ದೃಢಪಟ್ಟಿದೆ.

ಆರು ಕಂಟೈನ್ಮೆಂಟ್ ಪ್ರದೇಶಗಳ ನಿರ್ಬಂಧ ತೆರವು
ಗದಗನ ಹುಡ್ಕೋ ಕಾಲೊನಿ ಅಂಬಾಭವಾನಿ ಗುಡಿ ಹತ್ತಿರದ ಪ್ರದೇಶ, ಲಕ್ಕುಂಡಿಯ ವಾರ್ಡ್ ನಂ.8, ಲಕ್ಕುಂಡಿ ವಾರ್ಡ್ ನಂ.11, ಗದಗ ಕೆವಿಎಸ್‌ಆರ್ ಕಾಲೇಜು ಹತ್ತಿರದ ಪಂಚಾಕ್ಷರಿ ನಗರ, ರೋಣ ತಾಲ್ಲೂಕು ಹೊಳೆ ಆಲೂರ ವಾರ್ಡ್ ನಂ. 8, ಗದುಗಿನ ಕಳಸಾಪುರ ರಸ್ತೆ ಸೇವಾಲಾಲ ನಗರ, ಕಂಟೈನ್ಮೆಂಟ್ ಪ್ರದೇಶವಾಗಿದ್ದ ಈ ಆರು ಪ್ರದೇಶಗಳ ನಿರ್ಬಂಧ ತೆರವುಗೊಳಿಸಿ, ಸಾಮಾನ್ಯ ವಲಯವಾಗಿ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.