ಗದಗ: ಜಿಲ್ಲೆಯ ವಿವಿಧ ಅಧಿಕಾರಿಗಳಿಗೆ ‘ವರ್ಷದ ಅತ್ಯುತ್ತಮ ಕಂದಾಯ ಅಧಿಕಾರಿ-2024’ ಪ್ರಶಸ್ತಿಯನ್ನು ಕಂದಾಯ ಸಚಿವ ಕೃಷ್ಣಭೈರೇಗೌಡ ಶುಕ್ರವಾರ ಪ್ರದಾನ ಮಾಡಿದರು.
ಭೂದಾಖಲೆಗಳ ಉಪ ನಿರ್ದೇಶಕ ರುದ್ರಗೌಡ ಜಿ.ಜೆ., ಮುಂಡರಗಿ ತಾಲ್ಲೂಕಿನ ಭೂದಾಖಲೆಗಳ ಸಹಾಯಕ ನಿರ್ದೇಶಕ ಕೆ.ಎನ್. ರಮೇಶ, ಗದಗ ತಾಲ್ಲೂಕು ಪರವಾನಗಿ ಭೂಮಾಪಕ ಈರಣ್ಣ ಚನ್ನಪ್ಪ ತೊಂಡಿಹಾಳ ಹಾಗೂ ರೋಣ ತಾಲ್ಲೂಕಿನ ಸರ್ಕಾರಿ ಭೂಮಾಪಕ ಸಂಗಮೇಶ ಕುರಿ ಅವರು ಸಚಿವರಿಂದ ಪ್ರಶಸ್ತಿ ಸ್ವೀಕರಿಸಿದರು.
ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ವಿ. ಮಹೇಶ್, ಭೂದಾಖಲೆಗಳ ಬೆಳಗಾವಿ ಭಾಗದ ಜಂಟಿ ನಿರ್ದೇಶಕ ಎನ್.ಎಂ.ಪೀರ್‌ಜಾದೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.