ನರೇಗಲ್: ಜಮೀನಿನಲ್ಲಿ ಕಸದ ಎಡೆ ಹೊಡೆಯಲು ಎತ್ತುಗಳು ಸಿಗದ ಕಾರಣ ರೈತರು, ಕೃಷಿ ಚಟುವಟಿಕೆಗೆ ಬೈಕ್ಗಳನ್ನು ಬಳಸುತ್ತಿದ್ದಾರೆ.

ಬೈಕ್ನ ಹಿಂಬದಿಯಲ್ಲಿನ ಕ್ಯಾರಿಯರ್ಗೆ ಕಬ್ಬಿಣದ ಸರಳುಗಳಿಂದ ವೆಲ್ಡಿಂಗ್ ಮಾಡಿಸಿ, ಅದಕ್ಕೆ 5 ಅಡಿ ಉದ್ದದ ಕಬ್ಬಿಣದ ಪೈಪ್ ಅಳವಡಿಸಿ ಎರಡು ಅಡಿಗೆ ಒಂದರಂತೆ 5 ಕುಂಟಿಗಳನ್ನು ಜೋಡಿಸಲಾಗುತ್ತದೆ. ಜೋಲಿ ತಪ್ಪಿ ಬೀಳದಂತೆ ಮತ್ತು ಚಲಿಸಲು ಅನುಕೂಲ ಆಗುವಂತೆ ಹಿಂಬದಿಗೆ ಎರಡು ಬೈಕ್ ಗಾಲಿಗಳನ್ನು ಜೋಡಿಸಲಾಗುತ್ತದೆ. ಬೈಕ್ ಸವಾರ ಗೇರ್ನಲ್ಲಿ ಚಲಿಸುವಾಗ, ಕುಂಟಿ ಹಿಡಿದಿರುವ ಕಾರ್ಮಿಕರು ಸುಲಭವಾಗಿ ಸಾಗಬಹುದು.

ಹೆಸರು, ಮೆಕ್ಕೆಜೋಳ, ಹತ್ತಿ, ಈರುಳ್ಳಿ, ಮೆಣಸಿನಕಾಯಿ, ಟೊಮೆಟೊ, ಬದನೆಕಾಯಿ, ಬೆಂಡೆಕಾಯಿ, ತೊಗರಿ, ಸೂರ್ಯಕಾಂತಿ, ಶೇಂಗಾ, ಅಲಸಂದೆ ಸೇರಿ ವಿವಿಧ ಬೆಳೆಗಳಲ್ಲಿ ಎಡೆ ಹೊಡೆಯಲು ಬಳಕೆಯಾಗುತ್ತಿದೆ.

‘ಒಂದು ದಿನಕ್ಕೆ ಒಂದು ಜೋಡಿ ಎತ್ತುಗಳ ಬಾಡಿಗೆ ₹2,200. ಅದಕ್ಕೆ ಮೂರು ಕುಂಟಿ ಕಟ್ಟುತ್ತಾರೆ. ಕುಂಟಿ ಹಿಡಿಯುವ ಪ್ರತಿ ಕಾರ್ಮಿಕನ ಕೂಲಿ ದಿನಕ್ಕೆ ₹400. ದಿನಕ್ಕೆ ಅಂದಾಜು ₹3 ಸಾವಿರ ಖರ್ಚು ಮಾಡಿದರೂ ಎತ್ತುಗಳಿಂದ 3 ಎಕರೆ ಹೊಲ ಮಾತ್ರ ಎಡೆ ಹೊಡೆಯಲು ಸಾಧ್ಯವಾಗುತ್ತದೆ. ಆದರೆ, ಅದೇ ಹಣದಲ್ಲಿ ಬೈಕ್ ಬಳಸಿದರೆ, 2ರಿಂದ 2.5 ಲೀಟರ್ ಪೆಟ್ರೋಲ್ನಲ್ಲಿ ದಿನಕ್ಕೆ 8ರಿಂದ 10 ಎಕರೆ ಜಮೀನು ಎಡೆ ಹೊಡೆಯಬಹುದು’ ಎಂದು ರೈತರು ತಿಳಿಸಿದರು.

‘ಎತ್ತುಗಳಿಂದ ಎಡೆ ಹೊಡೆದಲ್ಲಿ ಹೆಚ್ಚು ಸಮಯ ಮತ್ತು ವೆಚ್ಚ ತಗಲುತ್ತದೆ. ಎತ್ತುಗಳಿಗಾಗಿ ಹುಡುಕಿದರೂ ಸಿಗದಿರುವ ಕಾಲದಲ್ಲಿ ಬೈಕ್ ರೈತರ ಪಾಲಿಗೆ ಎತ್ತುಗಳ ಸಹಾಯವಿಲ್ಲದೆ ಉಳುಮೆ ಮಾಡಲು ವರದಾನವಾಗಿದೆ’ ಎಂದು ನರೇಗಲ್ ರೈತ ವಿರೂಪಾಕ್ಷ ಲಕ್ಕನಗೌಡ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ದನಕರುಗಳಿಗೆ ಮೇವಿನ ಕೊರತೆ ಕಾರಣ ಸಾಕಲು ಹಿಂಜರಿಯುತ್ತಾರೆ. ಇದರಿಂದ ಉಳುಮೆಗೆ ಎತ್ತುಗಳು ಸಿಗುತ್ತಿಲ್ಲ. ಸರ್ಕಾರ ಮೇವಿನ ಬ್ಯಾಂಕ್ ಸ್ಥಾಪಿಸಿದರೆ, ಕೃಷಿಗೆ ಅನುಕೂಲ ಆಗಬಹುದು
ವೀರೇಶ ನೇಗಲಿ, ಸಾವಯವ ಕೃಷಿಕ, ಕೋಟುಮಚಗಿ

ನಮ್ಮಲ್ಲಿ ಕೃಷಿಗೆ ಅಗತ್ಯವಿದ್ದಾಗ ಹೊಲದಲ್ಲಿ ದುಡಿಯಲು ಕಾರ್ಮಿಕರು ಹಾಗೂ ಉಳುಮೆ ಮಾಡಲು ಎತ್ತುಗಳು ಸಿಗುತ್ತಿಲ್ಲ. ಹೀಗಾಗಿ ಬೈಕ್ಗಳಿಗೆ ಮೊರೆ ಹೋಗುವುದು ಅನಿವಾರ್ಯವಾಗಿದೆ
ವಿರೂಪಾಕ್ಷ ಲಕ್ಕನಗೌಡ್ರ, ರೈತ, ನರೇಗಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.