ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗೀಕರಣ ನಿರ್ಧಾರ ಖಂಡನೀಯ; ಗದಗ ಜಿಲ್ಲಾ ಬ್ಯಾಂಕ್ ನೌಕರರ ಸಂಘದಿಂದ ಪ್ರತಿಭಟನೆ

Last Updated 17 ಮಾರ್ಚ್ 2021, 5:05 IST
ಅಕ್ಷರ ಗಾತ್ರ

ಗದಗ: ‘ಇಂದಿನ ಸರ್ಕಾರ ಹಲವು ಸಾರ್ವಜನಿಕ ಸೇವಾಕ್ಷೇತ್ರಗಳನ್ನು ವ್ಯವಹಾರ, ಉದ್ಯಮವೆಂದು ಪರಿಗಣಿಸಿ ಅವುಗಳನ್ನು ಖಾಸಗೀಕರಣ ಮಾಡಲು ಹೊರಟಿರುವುದು ಖಂಡನೀಯ’ ಎಂದು ಗದಗ ಜಿಲ್ಲಾ ಬ್ಯಾಂಕ್‌ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಹನುಮೇಶ ಎಂ. ಗಂಗರಾಹುತರ ಹೇಳಿದರು.

ನಗರದ ಕೆನರಾ ಬ್ಯಾಂಕ್‌ ಆವರಣದಲ್ಲಿ ನಡೆದ ಎರಡನೇ ದಿನದ ಮುಷ್ಕರದಲ್ಲಿ ಅವರು ಮಾತನಾಡಿ, ‘ದೇಶದ ರಸ್ತೆಗಳು, ಸಾರಿಗೆ ವ್ಯವಸ್ಥೆ, ರೈಲ್ವೆ, ವಿಮಾನ ನಿಲ್ದಾಣಗಳು, ಅಣೆಕಟ್ಟುಗಳು, ಕಾಲುವೆಗಳು, ವಿದ್ಯುತ್ ಸರಬರಾಜು, ನೀರು ಸರಬರಾಜು, ಸಂಪರ್ಕ ಹಾಗೂ ಸಂವಹನ ವ್ಯವಸ್ಥೆಗಳು ಮತ್ತು ಸೌಲಭ್ಯಗಳು, ಐಐಟಿಗಳು, ಮೂಲಸೌಕರ್ಯ ಅಭಿವೃದ್ಧಿಗಳು ಹೀಗೆ ಒಂದಲ್ಲ, ಎರಡಲ್ಲ ದೇಶದ ಸಮಗ್ರ ಮೂಲಸೌಕರ್ಯ ವ್ಯವಸ್ಥೆ ನಿರ್ಮಾಣಗೊಂಡಿರುವುದು ಸಾರ್ವಜನಿಕ ವಲಯದ ಸಂಸ್ಥೆಗಳಿಂದ. ಈಗ ಅವನ್ನು ಖಾಸಗೀಕರಣ ಮಾಡಲು ಹೊರಟಿವುದನ್ನು ಎಲ್ಲರೂ ಉಗ್ರವಾಗಿ ಖಂಡಿಸಬೇಕು’ ಎಂದು ಹೇಳಿದರು.

ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಯಚ್ಚರಸ್ವಾಮಿ ನಾಯಕ ಮಾತನಾಡಿ, ‘ಅಂದಿನ ಸರ್ಕಾರ ಬ್ಯಾಂಕ್‌ಗಳ ರಾಷ್ಟ್ರೀಕರಣ ಮಾಡಿರದಿದ್ದರೆ ಆರ್ಥಿಕ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತಿರಲಿಲ್ಲ. ಇಂದಿನ ಸರ್ಕಾರ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣಗೊಳಿಸುತ್ತಿರುವುದು ದುಃಖದ ಸಂಗತಿ’ ಎಂದು ಹೇಳಿದರು.‌

ಸಿಐಟಿಯು ಮುಖಂಡ ಮಾರುತಿ ಚಿಟಗಿ ಹಾಗೂ ಎಸ್.ಎಫ್.ಐ. ರಾಜ್ಯ ಮುಖಂಡ ಗಣೇಶ ರಾಠೋಡ, ಕಾನೂನು ಸಲಹೆಗಾರ ಎನ್.ಎಸ್.ಬಿಚಗತ್ತಿ ಹಾಗೂ ಗ್ರಾಹಕರಾದ ಶೈಲಾ ಜೋಶಿ, ರೇವಣಕರ ಮುಷ್ಕರದಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು. ಗ್ರಾಹಕರ ಪರವಾಗಿ ಸುಸ್ಮಿತಾ ರೇವಣಕರ, ಶೈಲಾ ಜೋಶಿ ಹಾಗೂ ವಿಶ್ವನಾಥ ಶೆಟ್ಟಿ ಮಾತನಾಡಿದರು.

ಬ್ಯಾಂಕ್ ನೌಕರರಾದ ವಿಜಯ, ಮೌಲಾಸಾಬ, ದೀಪಕ್‌, ನಾಗೇಂದ್ರ, ಅಶೋಕ ಗೌಡರ, ಹರೀಶ ಬಾಗಲಕೋಟೆ, ಅಮರೇಶ್ವರ, ಪುಂಡಲೀಕ, ಮಂಜುನಾಥ ದೊಡ್ಡಮನಿ, ಸಿದ್ದು, ನರಸಿಂಹ, ರಾಜು, ಶಿವಾನಂದ ಗಾಮನಗಟ್ಟಿ, ಪ್ರೇಮಾ ಪಾಟೀಲ, ಕಮಲ ಬಾಷಾ, ಇನಾಮತಿ, ವಿಜಯಲಕ್ಷ್ಮೀ ಅಂಗಡಿ, ಯಶೋದಾ, ಅಕ್ಷತಾ, ಮಾಧುರಿ ಗಾಯಕವಾಡ, ಪರಶುರಾಮ, ಮಹಾಂತಪ್ಪ ಕಡಿವಾಲ, ದೀಪಿಕಾ, ಶಬಾನಾ, ಗಾಯತ್ರಿ, ಭಾಗ್ಯಶ್ರೀ, ಬಾಲಾಜಿರಾವ ಕುಲಕರ್ಣಿ ಮುಷ್ಕರದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT