ಶುಕ್ರವಾರ, ಜುಲೈ 1, 2022
26 °C

ಗದಗ–ಹುಬ್ಬಳ್ಳಿ ಬಸ್ ಸಂಚಾರ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಜಿಲ್ಲೆಯಲ್ಲಿ ಮಂಗಳವಾರ ಬೆಳಿಗ್ಗೆಯಿಂದ ಬಸ್‌ ಸಂಚಾರ ಆರಂಭಿಸಲಾಗಿದೆ. ಸದ್ಯ ಗದುಗಿನಿಂದ– ಹುಬ್ಬಳ್ಳಿ, ಕೊಪ್ಪಳ ಮತ್ತು ತಾಲ್ಲೂಕು ಕೇಂದ್ರಗಳಿಗೆ ಬಸ್‌ಗಳ ಓಡಾಟ ಪ್ರಾರಂಭವಾಗಿದೆ. 

ಜಿಲ್ಲಾ ಕೇಂದ್ರದಿಂದ ಬೇರೆ ಜಿಲ್ಲೆಗಳಿಗೆ ತೆರಳಲು ಸಾಕಷ್ಟು ಜನರು ಬೆಳಿಗ್ಗೆಯಿಂದಲೇ ಬಸ್‌ ನಿಲ್ದಾಣದಲ್ಲಿ ಜಮಾಯಿಸಿದ್ದಾರೆ. ಮುಖ್ಯ ಬಸ್‌ ನಿಲ್ದಾಣದ ಒಳಬರಲು ಮೂರು ಪ್ರವೇಶ್ವರ ದ್ವಾರ ಇದ್ದು, ಇದರಲ್ಲಿ ಎರಡನ್ನು ಬಂದ್‌ ಮಾಡಿ, ಒಂದು ದ್ವಾರದಿಂದಲೇ ಪ್ರಯಾಣಿಕರಿಗೆ ಒಳಬರಲು ಅವಕಾಶ ನೀಡಲಾಗಿದೆ. 

ಚಾಲಕ ಮತ್ತು ನಿರ್ವಾಹಕರಿಗೆ ಮಾಸ್ಕ್‌ ಮಾತ್ರ ನೀಡಲಾಗಿದ್ದು, ಗ್ಲೌಸ್‌ ಮತ್ತು ಸ್ಯಾನಿಟೈಸರ್‌ ವ್ಯವಸ್ಥೆ ಕಲ್ಪಿಸಿಲ್ಲ ಎಂಬ ದೂರುಗಳಿವೆ. ಪ್ರಯಾಣಿಕರನ್ನು ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಒಂದು ಬಸ್ಸಲ್ಲಿ 30 ಪ್ರಯಾಣಿಕರಿಗಷ್ಟೇ ಅವಕಾಶ ನೀಡಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು