ಭಾನುವಾರ, ಮಾರ್ಚ್ 29, 2020
19 °C

ಗಾಳಿ ರಭಸಕ್ಕೆ ತುಂಡಾದ ಪವನ ವಿದ್ಯುತ್‌ ಯಂತ್ರದ ರೆಕ್ಕೆ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಮುರಡಿ ತಾಂಡಾದ ಬಳಿ, ಕಪ್ಪತಗುಡ್ಡದಲ್ಲಿ ಸ್ಥಾಪಿಸಲಾಗಿದ್ದ ಪವನ ವಿದ್ಯುತ್‌ ಯಂತ್ರವೊಂದರ ಮೂರೂ ರೆಕ್ಕೆಗಳು, ಗಾಳಿಯ ರಭಸಕ್ಕೆ ತುಂಡಾಗಿ ನೆಲಕ್ಕೆ ಉರುಳಿವೆ.

ಈ ಗಾಳಿ ವಿದ್ಯುತ್‌ ಯಂತ್ರವು ಸುಜಲಾನ್‌ ಕಂಪೆನಿಗೆ ಸೇರಿದೆ. ಘಟನೆ ಶನಿವಾರ ಸಂಜೆ ನಡೆದಿದ್ದು, ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ರೆಕ್ಕೆ ತುಂಡಾಗಿ, ಗಾಳಿಯಲ್ಲಿ ಗಿರಗಿರನೆ ತಿರುಗುತ್ತಾ ನೆಲಕ್ಕೆ ಅಪ್ಪಳಿಸುತ್ತಿರುವ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ರೆಕ್ಕೆಗಳು ತುಂಡಾಗಿ ಬೀಳುವಾಗ ಸಿಬ್ಬಂದಿ ದೂರ ಇದ್ದಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. 

ಕಪ್ಪತಗುಡ್ಡ ಶ್ರೇಣಿಯಲ್ಲಿ ಕಳೆದೊಂದು ವಾರದಿಂದ ರಭಸದಿಂದ ಗಾಳಿ ಬೀಸುತ್ತಿದೆ. ಗಾಳಿಯ ವೇಗ ಹೆಚ್ಚಿದರೆ ಘಟಕಗಳ ಭದ್ರತೆಗೆ ನಿಯೋಜನೆಗೊಂಡಿರುವ ಸಿಬ್ಬಂದಿ ತಕ್ಷಣ ಯಂತ್ರವನ್ನು ನಿಲ್ಲಿಸುತ್ತಾರೆ.

‘ಶನಿವಾರ ಇನ್ನೇನು ಯಂತ್ರವನ್ನು ನಿಲ್ಲಿಸಬೇಕು ಎನ್ನುವಷ್ಟರಲ್ಲಿ ರೆಕ್ಕೆಗಳು ತುಂಡಾಗಿ ನೆಲಕ್ಕೆ ಬಿತ್ತು. ಈ ಯಂತ್ರಗಳಿಗೆ ವಿಮೆ ಮಾಡಿಸಿರುವುದಿಂದ ವಿಮಾ ಕಂಪೆನಿ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲಿಸಬೇಕು. ನಂತರ ಮುರಿದ ರೆಕ್ಕೆಗಳನ್ನು ಇಲ್ಲಿಂದ ತೆರವುಗೊಳಿಸುತ್ತೇವೆ. ಸದ್ಯ ಅದನ್ನು ಹಾಗೆಯೇ ಬಿಟ್ಟಿದ್ದೇವೆ’ ಎಂದು ಭದ್ರತಾ ಸಿಬ್ಬಂದಿ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು