ಗಜೇಂದ್ರಗಡ: ‘ವಿಶ್ವಗುರು ಬಸವಣ್ಣನವರ ಅನುಯಾಯಿಗಳಾಗಿರುವ ಬಣಜಿಗ ಸಮಾಜದವರು ಎಲ್ಲ ಸಮಾಜದವರcನ್ನು ಪ್ರೀತಿಯಿಂದ ಕಾಣುವವರಾಗಿದ್ದಾರೆ. ಸಮಾಜದ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ₹25 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದ್ದು, ಉಳಿದ ₹25 ಲಕ್ಷ ಬಿಡುಗಡೆಗೊಳಿಸಲಾಗುವುದುʼ ಎಂದು ಶಾಸಕ ಜಿ.ಎಸ್.ಪಾಟೀಲ ಹೇಳಿದರು.

ಪಟ್ಟಣದ ಮೈಸೂರ ಮಠದಲ್ಲಿ ಶುಕ್ರವಾರ ನಡೆದ ಗಜೇಂದ್ರಗಡ-ಉಣಚಗೇರಿ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಎಡೆಯೂರು ತೋಂಟದ ಸಿದ್ದಲಿಂಗೇಶ್ವರ ಸಾಂಸ್ಕೃತಿಕ ಭವನದ ಭೂಮಿಪೂಜಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

’ಬಣಜಿಗ ಸಮಾಜದವರ ಭವ್ಯ ಸಾಂಸ್ಕೃತಿಕ ಭವನದ ನಿರ್ಮಾಣದ ಸಂಕಲ್ಪಕ್ಕೆ ಸರ್ಕಾರದ ಅನುದಾನ ಸಾಲದು. ಹೀಗಾಗಿ ದಾನಿಗಳಿಂದ ಧನ ಸಂಗ್ರಹಿಸಿ ಸಂಕಲ್ಪ ಪೂರ್ಣಗೊಳಿಸಿ ಸಮಾಜದ ಅಭಿವೃದ್ಧಿಗೆ ಸಂಘದ ಸರ್ವರೂ ಶ್ರಮಿಸಬೇಕುʼ ಎಂದರು.

ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ಮಾತನಾಡಿ, ‘ಸಮಾಜ ನನ್ನನ್ನು ರಾಜಕೀಯವಾಗಿ ದೊಡ್ಡ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಸಮಾಜದ ಋಣ ನನ್ನ ಮೇಲಿದೆ. ಹೀಗಾಗಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸರ್ಕಾರ ಮಟ್ಟದಲ್ಲಿ ಏನೇ ಕೆಲಸಗಳಿದ್ದರೂ ನಾನು ಮುಂದೆ ನಿಂತು ಮಾಡಿಸುತ್ತೇನೆ‘ ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಮಾತನಾಡಿ, ‘ಬಣಜಿಗ ಸಮಾಜದ ಸಾಂಸ್ಕೃತಿಕ ಭವನ ನಿರ್ಮಾಣವಾದ ಬಳಿಕ ಕೇವಲ ಕಾರ್ಯಕ್ರಮಗಳಿಗೆ ಸೀಮಿತಗೊಳಿಸದೆ ಭವನದಲ್ಲಿ ಬಡ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕೋಡಿಸುವ ನಿಟ್ಟಿನಲ್ಲಿ ಶ್ರಮಿಸಬೇಕುʼ ಎಂದು ಸಲಹೆ ನೀಡಿದರು.

ಸಮಾಜದ ಅಧ್ಯಕ್ಷ ಉಮೇಶ ಮೆಣಸಗಿ ಅಧ್ಯಕ್ಷತೆ ವಹಿಸಿದ್ದರು. ಡಾ.ಬಿ.ವಿ.ಕಂಬಳ್ಯಾಳ, ಅಂದಪ್ಪ ಜವಳಿ, ಎಸ್.ಎಸ್.ವಾಲಿ, ವೀರಣ್ಣ ಶಟ್ಟರ, ಅಪ್ಪು ಮತ್ತಿಕಟ್ಟಿ, ಬಿ.ಎಸ್.ಶೀಲವಂತರ, ಅಂದಪ್ಪ ಸಂಕನೂರ, ಅವಿನಾಶ ಮತ್ತಿಕಟ್ಟಿ, ಬಾಬು ಕೋಟಿ, ಸುರೇಶ ಜಾಲಿಹಾಳ, ಅಮರೇಶ ಬಳಿಗೇರ, ಮಹಾಂತೇಶ ಮಳಗಿ, ಎಂ.ಜಿ.ಸೋಮನಕಟ್ಟಿ, ಮುತ್ತಣ್ಣ ಮೆಣಸಿಕಾಯಿ, ವಿರೇಶ ನಿಡಶೇಸಿ, ಭರತ್ ನೂಲ್ವಿ, ಅಕ್ಷಯ ಪಟ್ಟೇದ, ಮಲ್ಲು ಇಂಡಿ, ಮಲ್ಲಣ್ಣ ಮುಧೋಳ, ಶೇಖಣ್ಣ ಚೋಳಿನ, ಬಸವರಾಜ ವಾಲಿ, ಸುವರ್ಣಾ ನಂದಿಹಾಳ, ದಾನಮ್ಮ ಪಟ್ಟೇದ, ಭುವನೇಶ್ವರಿ ಕತ್ತಿಶಟ್ರ, ದಿವ್ಯಾ ಸಂಕನೂರ, ಸುಮನ್ ನಂದಿಹಾಳ, ನೀತಾ ನಂದಿಹಾಳ ಸೇರಿದಂತೆ ಇತರರು ಇದ್ದರು.

ಇದಕ್ಕೂ ಮೊದಲು ಸಮೀಪದ ಗೌಡಗೇರಿ ಗ್ರಾಮದಲ್ಲಿ ಎಡೆಯೂರು ಶ್ರೀ ಜಗದ್ಗುರು ತೋಂಟದ ಸಿದ್ದಲಿಂಗೇಶ್ವರ ಸಾಂಸ್ಕೃತಿಕ ಭವನದ ಭೂಮಿಪೂಜೆ ನಡೆಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.