ಎರಡು ದಿನಗಳಿಂದ ನಗರದ ಮಾರುಕಟ್ಟೆಯಲ್ಲಿ ಜನದಟ್ಟಣೆ ಅಧಿಕವಾಗಿದೆ. ಶುಕ್ರವಾರವಂತೂ ಜನಜಂಗುಳಿ ಹೆಚ್ಚಿತ್ತು. ನಗರದ ಗ್ರೇನ್ ಮಾರುಕಟ್ಟೆ, ಬ್ಯಾಂಕ್ ರಸ್ತೆ, ಟಾಂಗಾ ಕೂಟ, ಸ್ಟೇಷನ್ ರಸ್ತೆ, ಮಹೇಂದ್ರಕರ ವೃತ್ತಗಳಲ್ಲಿ ಗಣೇಶ ಪೂಜೆ, ವೇದಿಕೆ ಅಲಂಕಾರಕ್ಕೆ ಅಗತ್ಯವಾದ ಬಾಳೆ ದಿಂಡುಗಳು, ಕಬ್ಬು, ಸೇವಂತಿಗೆ, ಮಲ್ಲಿಗೆ, ಚೆಂಡು ಹೂವು, ನಾನಾ ತರದ ಹಣ್ಣುಗಳ ಖರೀದಿ ಜೋರಾಗಿ ನಡೆಯಿತು.