ಲಕ್ಷ್ಮೇಶ್ವರ: ರೈತರಿಂದ ಬೆಂಬಲ ಬೆಲೆಯಲ್ಲಿ ಬಳ್ಳಿ ಶೇಂಗಾ ಖರೀದಿಗೆ ಸರ್ಕಾರ ₹6,793 ಬೆಲೆ ಘೋಷಣೆ ಮಾಡಿತ್ತು. ಅದರಂತೆ ತಾಲ್ಲೂಕಿನ ಶಿಗ್ಲಿ ಗ್ರಾಮದ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘಕ್ಕೆ ಶೇಂಗಾ ಖರೀದಿಗೆ ಅವಕಾಶ ನೀಡಿತ್ತು. ಆದರೆ ಕೇವಲ ಎರಡೇ ದಿನಗಳಲ್ಲಿ ನೋಂದಣಿ ಮಾಡಿಸಲು ಬೆಳೆಗಾರರಿಂದ ಆಗಿರಲಿಲ್ಲ. ಅಷ್ಟರಲ್ಲಿ ಸರ್ಕಾರ ನೋಂದಣಿಯನ್ನು ಬಂದ್ ಮಾಡಿದ್ದರಿಂದಾಗಿ ಶೇಂಗಾ ಬೆಳೆಗಾರರು ಕಂಗಾಲಾಗಿದ್ದಾರೆ.

ತಾಲ್ಲೂಕಿನಲ್ಲಿ ಈ ವರ್ಷ ಐದು ಸಾವಿರ ಹೆಕ್ಟೇರ್ನಲ್ಲಿ ಶೇಂಗಾ ಬೆಳೆಯಲಾಗಿದ್ದು ಒಕ್ಕಣಿ ಮುಗಿಸಿದ ರೈತರು ಫಸಲು ಮಾರಾಟಕ್ಕಾಗಿ ಕಾಯುತ್ತಿದ್ದರು. ಇದೇ ಸಂದರ್ಭದಲ್ಲಿ ಸರ್ಕಾರ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆದಿದ್ದು ಅವರಿಗೆ ದೊಡ್ಡ ಅನುಕೂಲವಾಗಿತ್ತು. ಆದರೆ ಕೇವಲ ಎರಡು ದಿನಗಳಲ್ಲಿ ನೂರಾರು ರೈತರಿಗೆ ಹೆಸರು ನೋಂದಣಿ ಮಾಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಸದ್ಯ ನೋಂದಣಿ ಪ್ರಕ್ರಿಯೆ ಬಂದ್ ಆಗಿದೆ.

ಶಿಗ್ಲಿ ಖರೀದಿ ಕೇಂದ್ರದಲ್ಲಿ ಈವರೆಗೆ ಕೇವಲ 93 ರೈತರ ನೋಂದಣಿ ಆಗಿದ್ದು ಇನ್ನೂ ಸಾಕಷ್ಟು ನೋಂದಣಿ ಬಾಕಿ ಇದೆ. ಶಿಗ್ಲಿ ಖರೀದಿ ಕೇಂದ್ರದಲ್ಲಿ ಈವರೆಗೆ ಖರೀದಿಸಿದ 93 ರೈತರ ಪೈಕಿ ಕೇವಲ 30 ಬೆಳೆಗಾರರ ಶೇಂಗಾವನ್ನು ನಾಪೆಡ್ಗೆ ಕಳುಹಿಸಿ ಕೊಡಲಾಗಿದೆ. ಇನ್ನು ಬಾಕಿ ಉಳಿದಿರುವ ಉತ್ಪನ್ನಕ್ಕೆ ಲಾಟ್ ನಂಬರಿನ ಅಗತ್ಯ ಇದ್ದು ಅದನ್ನು ನಾಪೆಡ್ ನೀಡಬೇಕು. ಆದರೆ ಎಂಟು ದಿನ ಕಳೆದರೂ ಲಾಟ್ ನಂಬರ್ ಸಿಕ್ಕಿಲ್ಲ. ಹೀಗಾಗಿ ಸಂಘದ ಸದಸ್ಯರು ರೈತರಿಂದ ಖರೀದಿಸಿದ ಶೇಂಗಾವನ್ನು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೇಂದ್ರದಲ್ಲಿ ಇನ್ನೂ 350 ಚೀಲ ಶೇಂಗಾ ಫಸಲನ್ನು ನಾಪೆಡ್ಗೆ ಕಳುಹಿಸಿ ಕೊಡಬೇಕಾಗಿದೆ.

‘ಬೆಂಬಲ ಬೆಲೆಯ ಶೇಂಗಾ ಖರೀದಿ ದಿನಾಂಕವನ್ನು ವಿಸ್ತರಿಸಬೇಕು. ಇನ್ನೂ ಸಾವಿರಾರು ರೈತರು ಮಾರಾಟ ಮಾಡಬೇಕಾಗಿದೆ. ಕಾರಣ ಜಿಲ್ಲಾಡಳಿತ ಇತ್ತ ಗಮನ ಹರಿಸಿ ದಿನಾಂಕ ಮುಂದೂಡಿ ರೈತರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಶಿಗ್ಲಿಯ ಶೇಂಗಾ ಬೆಳೆಗಾರ ಎಫ್.ಕೆ. ಕಾಳಪ್ಪನವರ ಒತ್ತಾಯಿಸಿದರು.

‘ನೋಂದಣಿ ದಿನಾಂಕ ಮೂದೂಡುವ ಕುರಿತು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಈಗಾಗಲೇ ಪತ್ರ ಬರೆಯಲಾಗಿದೆ. ಜಿಲ್ಲಾ ನಾಪೆಡ್ನ ಮೇಟಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.