ದಾಬಾಗಳಲ್ಲಿ ಮದ್ಯ ಮಾರಾಟ: ಆರೋಪ
ರೋಣ ಪಟ್ಟಣ ಸೇರಿದಂತೆ ತಾಲ್ಲೂಕಿನ ಬಹುತೇಕ ಹಳ್ಳಿಗಳ ಮುಖ್ಯ ರಸ್ತೆಯ ಪಕ್ಕದಲ್ಲಿಯೇ ಇರುವ ದಾಬಾಗಳಲ್ಲಿ ಅಕ್ರಮ ಮದ್ಯ ಮಾರಾಟವಾಗುತ್ತಿದೆ. ಇಲಾಖೆ ಮಾತ್ರ ಏನು ಗೊತ್ತಿಲ್ಲ ಎಂಬಂತಿದೆ. ಸಾಮಾನ್ಯ ದರಕ್ಕಿಂತ ದಾಬಾಗಳಲ್ಲಿ ಹೆಚ್ಚಿನ ಬೆಲೆಗೆ ಅನಧಿಕೃತ ಮದ್ಯ ಮಾರಾಟವಾಗುತ್ತಿದೆ. ಇಲಾಖೆಯ ಅಧಿಕಾರಿಗಳು ಕಡಿವಾಣ ಹಾಕುವ ಬದಲಿಗೆ ಒಳಗೊಳಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂಬುದು ಕೆಲ ಗ್ರಾಮಸ್ಥರ ಗಂಭೀರ ಆರೋಪವಾಗಿದೆ.