ಗಜೇಂದ್ರಗಡ: ‘ಭಾರತ- ಅಮೆರಿಕ ವ್ಯಾಪಾರ ಒಪ್ಪಂದವು ದೇಶದ ಸಾರ್ವಭೌಮತ್ವದ ಮೇಲಿನ ದಾಳಿಯಾಗಿದ್ದು, ಕೇಂದ್ರ ಸರ್ಕಾರದ ರೈತ, ಕಾರ್ಮಿಕ, ಜನಸಾಮಾನ್ಯರ ವಿರೋಧಿ ನೀತಿಯನ್ನು ಖಂಡಿಸಿ ಫೆ.12 ರಂದು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಅಖಿಲ ಭಾರತ ಮುಷ್ಕರ ಹಮ್ಮಿಕೊಳ್ಳಲಾಗಿದೆ’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಎಂ.ಎಸ್.ಹಡಪದ ಹೇಳಿದರು.

ಪಟ್ಟಣದ ವಿವಿಧ ಅಂಗಡಿಗಳಿಗೆ ಮುಷ್ಕರದ ಕರಪತ್ರವನ್ನು ಸೋಮವಾರ ಹಂಚಿ ಬಳಿಕ ಕಾಲಕಾಲೇಶ್ವರ ವೃತ್ತದಲ್ಲಿ ಜನರಿಗೆ ಒಪ್ಪಂದದ ದುಷ್ಪರಿಣಾಮದ ಕುರಿತು ಜಾಗೃತಿ ಮೂಡಿಸಿ ಅವರು ಮಾತನಾಡಿದರು.

‘ಈ ಒಪ್ಪಂದದಲ್ಲಿ ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವುದು ಸೇರಿದಂತೆ ಹಲವು ನಿರ್ದೇಶನಗಳನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿಟ್ಟಿದ್ದಾರೆ. ಉಲ್ಲಂಘಿಸಿದರೆ ಸುಂಕ ವಿಧಿಸುವ ಬೆದರಿಕೆಗೆ ಮಣಿದು ಮೋದಿ ಸರ್ಕಾರದ ಈ ಒಪ್ಪಂದ ಮಾಡಿಕೊಂಡಿದೆ. ಇದರಿಂದ ದೇಶದ ರೈತರು, ಕಾರ್ಮಿಕರು, ಬಡ ಜನರು ಸಂಕಷ್ಟಕ್ಕೆ ಸಿಲುಕಲಿದ್ದಾರೆ’ ಎಂದು ಹರಿಹಾಯ್ದರು.

ಸಿಐಟಿಯು ಮುಖಂಡರಾದ ಬಾಲು ರಾಠೋಡ, ಪೀರು ರಾಠೋಡ ಮಾತನಾಡಿದರು.

ಮೆಹಬೂಬ ಹವಾಲ್ದಾರ, ಚಂದ್ರು ರಾಠೋಡ, ರೂಪೇಶ್ ಮಾಳೋತ್ತರ, ಅಂಬರೀಶ ಚವ್ಹಾಣ, ಅನಿಲ ರಾಠೋಡ, ವೀರೇಶ ರಾಠೋಡ, ರೂಪಲೇಶ ಮಾಳೊತ್ತರ, ಅಭಿಲಾಷ ರಾಠೋಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.