ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರಯಾನ–3 ಯಶಸ್ಸು: ಭಾರತದ ಮಹತ್ತರ ಸಾಧನೆ- ಇಸ್ರೊ ವಿಜ್ಞಾನಿ ಸುಧೀಂದ್ರ ಬಿಂದಗಿ

Published 6 ಅಕ್ಟೋಬರ್ 2023, 15:48 IST
Last Updated 6 ಅಕ್ಟೋಬರ್ 2023, 15:48 IST
ಅಕ್ಷರ ಗಾತ್ರ

ಮುಳಗುಂದ: ‘ಚಂದ್ರಯಾನ–3 ಯಶಸ್ವಿಯಾಗಿದ್ದು, ಭಾರತದ ಇತಿಹಾಸದಲ್ಲೇ ಸುವರ್ಣ ಯುಗವಾಗಿದೆ. ಇದು ಭಾರತೀಯರ ಮಹತ್ತರ ಸಾಧನೆ. ಪಾಶ್ಚಿಮಾತ್ಯ ರಾಷ್ಟ್ರಗಳು ನಮ್ಮತ್ತ ತಿರುಗಿ ನೋಡುವಂತಾಗಿದೆ’ ಎಂದು ಇಸ್ರೊ ವಿಜ್ಞಾನಿ ಸುಧೀಂದ್ರ ಬಿಂದಗಿ ಹೇಳಿದರು.

ಇಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶುಕ್ರವಾರ ನಡೆದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಭಾರತಕ್ಕೆ ಸವಾಲಾಗಿದ್ದ ಚಂದ್ರಯಾನದಲ್ಲಿ ಯಶಸ್ಸು ಗಳಿಸಿದ್ದರಿಂದ ತಾಂತ್ರಿಕತೆಯಲ್ಲಿ ಭಾರತದ ಹೆಸರು ಚಿರಸ್ಥಾಯಿಯಾಗಿ ಉಳಿಯುವಂತಾಯಿತು. ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚು ಗಮನ ಹರಿಸಬೇಕು. ಸಮರ್ಪಣಾ ಭಾವ ಇರಬೇಕು’ ಎಂದು ಹೇಳಿದರು.

ಸುಧೀರ ಬಿಂದಗಿ ದಂಪತಿಯನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯ ಎಚ್.ಆರ್. ಸಕ್ರಿ, ಶಿಕ್ಷಕರಾದ ಶ್ರೀಧರ ಕುಲಕರ್ಣಿ, ಮುತ್ತು ಕೆಳಗಿನಮನಿ, ಶಿಕ್ಷಕರಾದ ಚಂದ್ರು ಭಜಂತ್ರಿ, ಸಂಜಯ ಸುತಾರ, ನಾಗರಾಜ ಮತ್ತೂರ, ಪ್ರಸನ್ನ ತಳ್ಳಳ್ಳಿ, ಎನ್.ಸಿ. ಗಂಜಿ, ನವೀನಕುಮಾರ, ಆರ್.ಎಸ್. ಲಮಾಣಿ, ಸಿ.ಎಫ್. ಬೆಟಗೇರಿ, ಜಿ.ಎಂ. ಪಿಡ್ಡನಗೌಡ್ರ, ದ್ರಾಕ್ಷಯಣಿ ಬಂಡಿ, ಸೌಮ್ಯ ಬೆಟಗೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT