ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬ್ರಿಟಿಷರ ಕುತಂತ್ರಕ್ಕೆ ಬಂಜಾರ ಸಮುದಾಯ ಬಲಿ’

Published 15 ಫೆಬ್ರುವರಿ 2024, 13:58 IST
Last Updated 15 ಫೆಬ್ರುವರಿ 2024, 13:58 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ತಾಲ್ಲೂಕಿನ ಶಿಗ್ಲಿಯ ಎಸ್.ಎಸ್. ಕೂಡ್ಲಮಠ ಪ್ರೌಢಶಾಲೆಯಲ್ಲಿ ಗುರುವಾರ ಸಂತ ಸೇವಾಲಾಲ್ ಜಯಂತಿ ಆಚರಿಸಲಾಯಿತು.

ಶಿಕ್ಷಕ ಕೆ.ಆರ್.ಲಮಾಣಿ ಮಾತನಾಡಿ, ‘ಬಂಜಾರ ಸಮಾಜದವರು ಮೊದಲು ವಜ್ರ, ಬೆಳ್ಳಿ, ಬಂಗಾರದ ವ್ಯಾಪಾರ ಮಾಡುತ್ತಿದ್ದರು. ಮತ್ತು ಸ್ವಾತಂತ್ರಕ್ಕಾಗಿ ದೇಶದ ಹೋರಾಟಗಾರರಿಗೆ ಆಹಾರ, ನೀರು ಸರಬರಾಜು ಮಾಡುತ್ತಿದ್ದರಿಂದ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾದರು. ಬ್ರಿಟಿಷರ ಕುತಂತ್ರದಿಂದ ಬಂಜಾರ ಸಮುದಾಯ ಉಳಿದ ಸಮಾಜದಿಂದ ದೂರವಿರಬೇಕಾಯಿತು’ ಎಂದರು.

‘ಇಂದಿಗೂ ತಾಂಡಾಗಳು ತಾಂಡಾಗಳಾಗಿಯೇ ಉಳಿದಿವೆ. ಕಂದಾಯ ಗ್ರಾಮ ಆಗಿಲ್ಲ. 2023ರಲ್ಲಿ ಕಲಬುರ್ಗಿ ಜಿಲ್ಲೆಯಲ್ಲಿ ಕಂದಾಯ ಗ್ರಾಮ ಆಗಿವೆ. ಆದರೆ ಉಳಿದ ಕಡೆ ಇನ್ನೂ ಆಗಬೇಕಾಗಿದೆ’ ಎಂದರು.

ಮುಖ್ಯ ಶಿಕ್ಷಕ ಸಿ.ಬಿ. ಮೊಗಲಿ ಅಧ್ಯಕ್ಷತೆ ವಹಿಸಿದ್ದರು. ಬಿ.ಬಿ. ಚಿಟಗಿ, ವೈ.ಎಂ. ಬಸಾಪುರ, ಆರ್.ಎಂ. ಜಂಬೇರಾಳ, ಬಿ.ಎಸ್. ಹೆಬ್ಬಾಳ, ಐ.ಎಂ. ಮತ್ತೂರ, ಎಸ್.ವೈ. ನವಲಗುಂದ, ಬಿ.ಬಿ. ಬಳಿಗಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT