ಗದಗ: ಐತಿಹಾಸಿಕ ಹಿನ್ನೆಲೆಯುಳ್ಳ ಲಕ್ಕುಂಡಿಯಲ್ಲಿ ಉತ್ಖನನಕ್ಕೆ ಕೇಂದ್ರ ಸರ್ಕಾರದಿಂದ ಅನುಮತಿ ಸಿಕ್ಕಿದ್ದು, ಕಾರ್ಯಾಚರಣೆ ವೇಳೆ ಯಾವುದೆಲ್ಲ ಮಹತ್ವದ ಕುರುಹುಗಳು ಸಿಗಬಹುದು ಎಂಬ ಕುತೂಹಲ ಜನರಲ್ಲಿ ಮೂಡಿದೆ. ಇದರ ಮದ್ಯೆ ತೆಲಂಗಾಣದ ವಾರಂಗಲ್ ನಗರದಲ್ಲಿ ಇರುವ ಮಾದರಿಯಲ್ಲೇ ಬಯಲು ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸಿದ್ಧತೆ ನಡೆಸಿದೆ

ಪ್ರಾಚ್ಯಾವಶೇಷಗಳ ಸಂರಕ್ಷಣೆಗೆ ಲಕ್ಕುಂಡಿಯಲ್ಲಿ ಬಯಲು ವಸ್ತು ಸಂಗ್ರಹಾಲಯ ಪ್ರಾರಂಭಿಸುವುದಾಗಿ ರಾಜ್ಯ ಸರ್ಕಾರ 2025–26ನೇ ಸಾಲಿನ ಬಜೆಟ್ನಲ್ಲಿ ಘೋಷಿಸಿತ್ತು. ಇದಕ್ಕೆ ಪೂರಕವಾಗಿ ತಜ್ಞರ ತಂಡವು ವಾರಂಗಲ್ಗೆ ತೆರಳಿ ಅಧ್ಯಯನ ನಡೆಸಿತು. ಲಕ್ಕುಂಡಿಯಲ್ಲಿ ಸಿಕ್ಕ ಪ್ರಾಚ್ಯಾವಶೇಷಗಳನ್ನು ಬಳಸಿ, ಅದಕ್ಕಿಂತಲೂ ಚೆನ್ನಾಗಿ ಬಯಲು ವಸ್ತು ಸಂಗ್ರಹಾಲಯ ನಿರ್ಮಿಸಬಹುದು ಎಂದು ಅಭಿಪ್ರಾಯಪಟ್ಟಿದೆ.

‘2024ರ ನವೆಂಬರ್ 22ರಿಂದ 24ರವರೆಗೆ ಲಕ್ಕುಂಡಿಯಲ್ಲಿ ನಡೆದ ಪ್ರಾಚ್ಯಾವಶೇಷ ಸಂಗ್ರಹ ಅಭಿಯಾನದಲ್ಲಿ 1,500 ಪ್ರಾಚ್ಯಾವಶೇಷಗಳು ಸಿಕ್ಕಿವೆ. ಲಕ್ಕುಂಡಿಯಲ್ಲಿರುವ ನನ್ನೇಶ್ವರ ದೇವಸ್ಥಾನ, ಲಕ್ಕುಂಡಿ ಪರಂಪರೆ ಕೇಂದ್ರದ ನಡುವಿನ ಜಾಗದಲ್ಲಿ ಬಯಲು ವಸ್ತು ಸಂಗ್ರಹಾಲಯ ನಿರ್ಮಿಸುವ ಉದ್ದೇಶವಿದೆ. ಅದಕ್ಕೆ ಬೇಕಿರುವ ನಾಲ್ಕು ಎಕರೆ ಜಾಗವನ್ನು ಕೊಡಲು ರೈತರು ಒಪ್ಪಿದ್ದಾರೆ’ ಎಂದು ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ತಿಳಿಸಿದ್ದಾರೆ.

‘ಲಕ್ಕುಂಡಿ ಗ್ರಾಮಸ್ಥರಿಗೆ ಊರಿನ ಬಗ್ಗೆ ಅಭಿಮಾನವಿದೆ. ಇಲ್ಲಿನ 27 ಮನೆಯವರು ಜಾಗ ಬಿಟ್ಟುಕೊಟ್ಟರೆ 5 ದೇವಸ್ಥಾನಗಳು ಪತ್ತೆ ಆಗುತ್ತವೆ ಎಂದು ತಜ್ಞರು ಹೇಳಿದ್ದಾರೆ. ಮನೆ ಮಾಲೀಕರು ಒಪ್ಪಿದ್ದು, ಅವರಿಗೆ ಸರ್ಕಾರದಿಂದ ಬೇರೆ ಕಡೆ ವಸತಿ ವ್ಯವಸ್ಥೆ ಮಾಡಲಾಗುವುದು’ ಎಂದು ಸಚಿವ ಎಚ್.ಕೆ.ಪಾಟೀಲ ತಿಳಿಸಿದ್ದಾರೆ.

ಬಜೆಟ್ನಲ್ಲಿ ಘೋಷಿಸಿದಂತೆ ಲಕ್ಕುಂಡಿಯಲ್ಲಿರುವ ಸ್ಮಾರಕಗಳ ಸಮೂಹವನ್ನು ವಿಶ್ವಪರಂಪರೆ ತಾಣಗಳ ತಾತ್ಕಾಲಿಕ ಪಟ್ಟಿಗೆ ಸೇರ್ಪಡೆಗೊಳಿಸಲು ಪ್ರಯತ್ನಗಳು ನಡೆದಿವೆ. ಭಾರತೀಯ ಕಲಾ ಮತ್ತು ಸಂಸ್ಕೃತಿ ಪಾರಂಪರಿಕ ಟ್ರಸ್ಟ್ (ಐಎನ್ಟಿಎಸಿಎಚ್) ಸಂಸ್ಥೆಯು ಲಕ್ಕುಂಡಿ ಮತ್ತು ಇತರೆ ಸ್ಥಳಗಳಲ್ಲಿನ ಸ್ಮಾರಕಗಳ ಅಧ್ಯಯನ ಕೈಗೊಂಡು ವಿಶ್ವಪರಂಪರೆ ತಾಣಗಳ ಪಟ್ಟಿಗೆ ಸೇರ್ಪಡೆಗೆ ನಾಮನಿರ್ದೇಶನದ ಪ್ರಸ್ತಾವ ಸಿದ್ಧಪಡಿಸಿ, ಸಲ್ಲಿಸಿದೆ.

ವಿಶ್ವಪರಂಪರೆ ತಾಣಗಳ ತಾತ್ಕಾಲಿಕ ಪಟ್ಟಿಯಲ್ಲಿ ಲಕ್ಕುಂಡಿಯನ್ನು ಸೇರ್ಪಡೆ ಮಾಡುವಂತೆ ಕೋರಿ ಅಂತರ್ರಾಷ್ಟ್ರೀಯ ಸ್ಮಾರಕಗಳು ಮತ್ತು ಸ್ಥಳಗಳ ಮಂಡಳಿಗೆ (ಐಸಿಒಎಂಒಎಸ್) ಮನವಿ ಸಲ್ಲಿಸುವ ಪ್ರಯತ್ನಗಳು ನಡೆದಿವೆ.

ಲಕ್ಕುಂಡಿಯಲ್ಲಿ ಉತ್ಖನನ ಪ್ರಕ್ರಿಯೆಗೆ ಐತಿಹಾಸಿಕ ಮಹತ್ವ ಇದೆ. ತಜ್ಞರ ಮಾರ್ಗದರ್ಶನದಲ್ಲಿ ಉತ್ಖನನ ವೈಜ್ಞಾನಿಕವಾಗಿ ನಡೆಯಲಿದೆ. ಬಯಲು ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ ಹಣದ ಕೊರತೆ ಇಲ್ಲ

–ಎಚ್.ಕೆ.ಪಾಟೀಲ ಪ್ರವಾಸೋದ್ಯಮ ಸಚಿವ

ಲಕ್ಕುಂಡಿಯಲ್ಲಿರುವ ಮನೆಗಳೆಲ್ಲವೂ ದೇವಸ್ಥಾನದ ಮೇಲಿವೆ ಎಂದು ಅಲ್ಲಿನ ಜನರೇ ಹೇಳುತ್ತಾರೆ. ಊರು ಸ್ಥಳಾಂತರವಾದರೆ ಹಂಪಿಗಿಂತ ದೊಡ್ಡ ಐತಿಹಾಸಿಕ ಕುರುಹು ಸಿಗಬಹುದು.

–ಶರಣು ಗೋಗೇರಿ ಆಯುಕ್ತ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ

ಉತ್ಖನನಕ್ಕೆ ಇಂದು ಚಾಲನೆ 2004–05ರಲ್ಲಿ ಲಕ್ಕುಂಡಿಯಲ್ಲಿ ಉತ್ಖನನ ನಡೆದಿತ್ತು. ಆಗ ಮಹತ್ವದ ಪ್ರಾಚ್ಯಾವಶೇಷಗಳು ಸಿಕ್ಕಿದ್ದವು. ಈಗ ಮತ್ತೆ ಉತ್ಖನನ ನಡೆಯಲಿದ್ದು ಮಂಗಳವಾರ (ಜೂನ್ 3) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಲ್ಲಿನ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಚಾಲನೆ ನೀಡುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.