ಲಕ್ಷ್ಮೇಶ್ವರ: ತಾಲ್ಲೂಕಿನ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ಫೆ.15ರಿಂದ 17ರವರೆಗೆ ಜಾತ್ರೆ ಮತ್ತು ಧರ್ಮಸಭೆ ಜರುಗಲಿದೆ ಎಂದು ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷರಾದ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ಈ ಕುರಿತು ಮಂಗಳವಾರ ಅವರು ಮಾಹಿತಿ ನೀಡಿದರು.

15ರಂದು ನಸುಕಿನ ಜಾವ ಜಗದ್ಗುರು ಪಂಚಾಚಾರ್ಯ ಧ್ವಜಾರೋಹಣ, ಲಿಂ.ರಂ.ಜ. ವೀರಗಂಗಾಧರ ಶಿವಾಚಾರ್ಯರ ಗದ್ದುಗೆ ಮಹಾದ್ರಾಭಿಷೇಕ, ಬೆಳಿಗ್ಗೆ 9ಕ್ಕೆ ಅಯ್ಯಾಚಾರ, ಸಂಜೆ 5ಕ್ಕೆ ಜ.ಪಂಡಿತಾರಾಧ್ಯರು ಹಾಗೂ ವಿಶ್ವಾರಾಧ್ಯರ ಜಯಂತಿ ನಿಮಿತ್ತ ರಥೋತ್ಸವ ಜರುಗುವುದು. 16ರಂದು ಸಂಜೆ 4ಕ್ಕೆ ಶಿವಪಾರ್ವತಿಯರ ರಥೋತ್ಸವ ನಡೆಯಲಿದ್ದು 17ರಂದು ಮಹಾಶಿವರಾತ್ರಿ ಅಮಾವಾಸ್ಯೆ ವ್ರತಾಚರಣೆ, ಮಧ್ಯಾಹ್ನ 3ಕ್ಕೆ ಲಿಂರಂಜ ವೀರಗಂಗಾಧರ ಶಿವಾಚಾರ್ಯ ಸ್ವಾಮೀಜಿ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಯಲಿದೆ.

ಕಡುಬಿನ ಕಾಳಗ, ಸಂಜೆ 4ಕ್ಕೆ ಬಾಳೆಹೊನ್ನೂರು ಶ್ರೀಮದ್ರಂಭಾಪುರಿ ಪೀಠದ ಡಾ.ವೀರಸೋಮೇಶ್ವರ ಸ್ವಾಮೀಜಿ ಸಾನಿಧ್ಯಲ್ಲಿ ಧರ್ಮಸಭೆ ನಡೆಯಲಿದೆ. ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷರಾದ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿಕೊಳ್ಳುವರು. ನೊಣವಿನಕೆರೆ ಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಅಧ್ಯಕ್ಷತೆ ವಹಿಸಿಕೊಳ್ಳುವರು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಧರ್ಮಸಭೆ ಉದ್ಘಾಟಿಸುವರು. ಇಂಧನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಂಸದ ಬಸವರಾಜ ಬೊಮ್ಮಾಯಿ, ಶಾಸಕರಾದ ಡಾ.ಚಂದ್ರು ಲಮಾಣಿ, ಎಮ್.ಆರ್. ಪಾಟೀಲ, ಎಸ್.ವಿ. ಸಂಕನೂರ, ಜಿ.ಎಸ್. ಪಾಟೀಲ, ಮಾಜಿ ಸಂಸದ ಮಂಜುನಾಥ ಕುನ್ನೂರ, ಮಾಜಿ ಶಾಸಕರಾದ ಜಿ.ಎಸ್. ಗಡ್ಡದ್ದೇವರಮಠ, ಗಂಗಣ್ಣ ಮಹಾಂತಶೆಟ್ರ, ರಾಮಕೃಷ್ಣ ದೊಡ್ಡಮನಿ, ರಾಮಣ್ಣ ಲಮಾಣಿ, ಕುಸುಮಾವತಿ ಸಿ. ಶಿವಳ್ಳಿ, ಎಮ್.ಎಸ್. ಅಕ್ಕಿ, ಸಹಕಾರಿ ಧುರೀಣ ಶಿವಕುಮಾರಗೌಡ ಎಸ್. ಪಾಟೀಲ, ವೀರೇಶ ಎಸ್. ಕೂಗು, ರಜತ್ ಉಳ್ಳಾಗಡ್ಡಿಮಠ ಆಗಮಿಸುವರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.