ಲಕ್ಷ್ಮೇಶ್ವರ: ಪಟ್ಟಣದ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್) ವತಿಯಿಂದ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿಸುವ ಪ್ರಕ್ರಿಯೆ ಆರಂಭವಾಗಿದ್ದು, ಇದುವರೆಗೂ ಒಟ್ಟು 39 ರೈತರಿಂದ 137 ಟನ್ ಮೆಕ್ಕೆಜೋಳ ಖರೀದಿಸಲಾಗಿದೆ. ಆದರೆ ಗುರುವಾರ ತಾಂತ್ರಿಕ ದೋಷದಿಂದಾಗಿ ಮೆಕ್ಕೆಜೋಳ ಖರೀದಿ ಸ್ಥಗಿತಗೊಂಡಿದೆ.

ಖರೀದಿ ಪ್ರಕ್ರಿಯೆ ಸ್ಥಗಿತಗೊಂಡ ಪರಿಣಾಮ ಬೆಳಿಗ್ಗೆ ಕೊರೆಯುವ ಚಳಿ ನಡುವೆಯೂ ಮೆಕ್ಕೆಜೋಳ ತುಂಬಿದ ರೈತರ ಸುಮಾರು 60 ಟ್ರ್ಯಾಕ್ಟರ್ಗಳು ಇಲ್ಲಿನ ಎಪಿಎಂಸಿ ಆವರಣದಲ್ಲಿ ಸಾಲುಗಟ್ಟಿ ನಿಂತಿವೆ.

ಮುಂಡರಗಿ ಎಥೆನಾಲ್ ಕಾರ್ಖಾನೆಯವರು ₹2,400 ಬೆಂಬಲ ಬೆಲೆಯಲ್ಲಿ ಮೆಕ್ಕಜೋಳ ಖರೀದಿಗೆ 248 ಅರ್ಜಿ ನೋಂದಣಿ ಮಾಡಿಸಿಕೊಂಡಿದ್ದಾರೆ. ರೈತರಿಂದ ಮೆಕ್ಕೆಜೋಳ ಖರೀದಿಸಿದ ಮಾಹಿತಿಯನ್ನು ಅದೇ ದಿನ ಸಹಕಾರಿ ಮಹಾಮಂಡಳಕ್ಕೆ ಆನ್ಲೈನ್ ಮೂಲಕ ವರದಿ ಸಲ್ಲಿಸಿದ ಬಳಿಕ ರೈತರ ಬಿಲ್ ಪಾವತಿಯಾಗುತ್ತದೆ. ಹೀಗಿರುವಾಗ ತಾಂತ್ರಿಕ ದೋಷದಿಂದಾಗಿ ರೈತರ ಬಿಲ್ ಪ್ರಕ್ರಿಯೆ ಸ್ಥಗಿತಗೊಂಡಿದೆ.

‘ಈವರೆಗೆ 770 ರೈತರು ಕೆಎಂಎಫ್, 248 ರೈತರು ಎಥೆನಾಲ್ ಮತ್ತು 650 ರೈತರು ಸರ್ಕಾರಿ ಖರೀದಿ ಕೇಂದ್ರ ಸೇರಿದಂತೆ ಒಟ್ಟು 1,668 ರೈತರು ಮೆಕ್ಕೆಜೋಳ ಮಾರಾಟಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ಇದೀಗ ಎಥೆನಾಲ್ ಕಾರ್ಖಾನೆಯವರು ಖರೀದಿ ಪ್ರಕ್ರಿಯೆ ಆರಂಭಿಸಿದ್ದಾರೆ’ ಎಂದು ಟಿಎಪಿಸಿಎಂಎಸ್ನ ಅಧ್ಯಕ್ಷ ಸೋಮೇಶ ಉಪನಾಳ ತಿಳಿಸಿದರು.

ಧಾರವಾಡದ ಕೆಎಂಎಫ್ ಕಚೇರಿಗೆ ತೆರಳಿ ಮೆಕ್ಕೆಜೋಳ ಮಾರಾಟ ಮಾಡುವ ಬದಲು ಸ್ಥಳೀಯವಾಗಿ ಮೆಕ್ಕೆಜೋಳ ಖರೀದಿಸಲು ನಿರ್ದೇಶನ ನೀಡಬೇಕು ಎಂದು ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗಿದೆ
ಸೋಮೇಶ ಉಪನಾಳ ಅಧ್ಯಕ್ಷ ಟಿಎಪಿಸಿಎಂಎಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.