ಗದಗ: ‘ಜಾನಪದವು ಜನರ ಬಾಯಿಯಿಂದ ಬಾಯಿಗೆ ಬಂದು ಕನ್ನಡ ನಾಡಿನ ಜೀವಾಳವಾಗಿದೆ. ಜನರ ಬದುಕಿನ ರೀತಿ, ಪರಂಪರೆ, ನಂಬಿಕೆ ಮತ್ತು ನವಿರಾದ ನೆನಪುಗಳ ಸಂಗ್ರಹವೇ ಜನಪದ. ಮಣ್ಣಿನ ವಾಸನೆ, ಹೊಲದ ಹರುಷ, ಹಬ್ಬದ ರಂಗು ಇವೆಲ್ಲವೂ ಜಾನಪದದಲ್ಲಿ ಜೀವಂತ’ ಎಂದು ಕನ್ನಡ ಜಾನಪದ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಎಸ್. ಬಾಲಾಜಿ ಹೇಳಿದರು.

ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷರಾಗಿ ನೇಮಕವಾದ ಐ.ಬಿ.ಬೆನಕೊಪ್ಪ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಗದಗ ಜಿಲ್ಲಾ ಘಟಕದ ಉದ್ಘಾಟಿಸಿ ಮಾತನಾಡಿದರು.

‘ಈ ಮಣ್ಣಿನ ಕಲೆಯನ್ನು ಉಳಿಸುವುದು, ಕಲಾವಿದರಿಗೆ ಗೌರವ ಮತ್ತು ವೇದಿಕೆ ನೀಡುವುದು ಹಾಗೂ ಮುಂದಿನ ಪೀಳಿಗೆಗೆ ಜಾನಪದದ ಮೌಲ್ಯ ತಲುಪಿಸುವುದೇ ಕನ್ನಡ ಜಾನಪದ ಪರಿಷತ್ ಮುಖ್ಯ ಉದ್ದೇಶವಾಗಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಎಸ್.ಎಸ್.ಪಾಟೀಲ ಮಾತನಾಡಿ, ‘ಜಾನಪದ ಸರಳ ಸ್ವಾಭಾವಿಕವಾಗಿದ್ದು, ಎಲ್ಲರೂ ಹಾಡಬಹುದು. ಬಾಯಿಯಿಂದ ಬಾಯಿಗೆ ಬಂದದ್ದು ಜಾನಪದ, ಸೋಬಾನೆ ಮದುವೆ ಪದಗಳು, ಹಂತಿಯ ಪದಗಳು ಈಗ ಇಲ್ಲವೇ ಇಲ್ಲ’ ಎಂದರು.

ನೂತನ ಅಧ್ಯಕ್ಷ ಐ.ಬಿ.ಬೆನಕೊಪ್ಪ ಹಾಗೂ ಪದಾಧಿಕಾರಿಗಳಿಗೆ ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಎಸ್.ಪಟ್ಟಣಶೆಟ್ಟಿ ಪ್ರಮಾಣಪತ್ರ ನೀಡಿದರು.

ಸಹಕಾರ ರೇಡಿಯೊ ನಿರ್ದೇಶಕ ಜೆ.ಕೆ.ಜಮಾದಾರ, ಡಾ. ರಿಯಾಜ್ ಪಾಷಾ, ಗದಗ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ.ಅಸೂಟಿ ಮಾತನಾಡಿದರು.

ರಾಜ್ಯ ಕನ್ನಡ ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಪ್ರೊ. ಕೆ.ಎಸ್.ಕೌಜಲಗಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎ.ಬಳಿಗೇರ, ಕದಳಿ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷೆ ಸುಧಾ ಹುಚ್ಚಣ್ಣನವರ, ಜಿಲ್ಲಾ ಸಂಚಾಲಕ ಲಿಂಗರಾಜ ಮತ್ತು ಪ್ರಾಚಾರ್ಯ ಮಾರುತಿ ಬುರಡಿ ಇದ್ದರು.

ಹಿರಿಯರಾದ ಮರಿಯಪ್ಪ ವಿಭೂತಿ, ವೈದ್ಯ ನೀಲಪ್ಪ ಬಸವರಾಜ ಕೊಂಚಿಗೇರಿ ಹಾಗೂ ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಕನ್ನಡ ವಿಷಯದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಸುಧಾ ಹುಚ್ಚಣ್ಣನವರ ಸ್ವಾಗತಿಸಿದರು. ಪ್ರೊ ಹೇಮಂತ ದಳವಾಯಿ ಕಾರ್ಯಕ್ರಮ ನಿರೂಪಿಸಿದರು.

ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಜಾನಪದದ ಮಹತ್ವ ತಿಳಿಸಿ ಅವರು ಜಾನಪದದ ಬಗ್ಗೆ ಆಸಕ್ತಿ ಬೆಳೆಸುವುದು ಅವಶ್ಯವಾಗಿದೆ
–ಎಸ್. ಬಾಲಾಜಿ ಕನ್ನಡ ಜಾನಪದ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ

ನಮ್ಮ ಹಿಂದಿನ ಪೀಳಿಗೆಯ ಜ್ಞಾನ ಜೀವನಶೈಲಿ ನೀತಿ ನೈತಿಕ ಪಾಠವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಸಾಂಸ್ಕೃತಿಕ ಸೇತುವೆಯೇ ಜಾನಪದ.
ಎಸ್.ಎಸ್.ಪಟ್ಟಣಶೆಟ್ಟಿ ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.